fbpx
ಸಮಾಚಾರ

ಸೂರ್ಯನಿಗೆ ಟಾರ್ಚ್ ಬಿಟ್ಟ ನಿತ್ಯಾನಂದ , ವೈರಲ್ ಆದ ವಿಡಿಯೋ

ಆಶ್ರಮದಲ್ಲಿ ಭಕ್ತಾದಿಗಳಿಗೆ ಆಶೀರ್ವಚನ ನೀಡುವ ವೇಳೆ ಮಾತನಾಡಿರುವ ನಿತ್ಯಾನಂದ,ದಿನಾಗಲೂ ಬರುತ್ತಿದ್ದ ಸೂರ್ಯ ಇವತ್ತು ಲೇಟ್ ಆಗಿ ಬಂದಿದ್ದಾನೆ, ದಿನ ಪ್ರಾರಂಭವಾಗುತ್ತಿದ್ದ ಸೂರ್ಯೋದಯ ಇಂದು ತಡವಾಗಿದೆ ಇವತ್ತು ಯಾರು ಟೈಮ್ ನೋಡಿಲ್ಲ ಅನಿಸುತ್ತದೆ , ನಾನು ಧ್ವಜಾರೋಹಣ ಮಾಡುವುದು ಸ್ವಲ್ಪ ತಡವಾಯಿತು. 6.47 ರಿಂದ 7 ಗಂಟೆ ಆಯಿತು ಹೀಗಾಗಿ ನಾನು ಸೂರ್ಯನಿಗೆ ಹೇಳಿದ್ದೆ ಸ್ವಲ್ಪ ಲೇಟ್ ಆಗಿ ಬಾ ಅಂತ ನಾನು ಧ್ವಜಾರೋಹಣ ಮಾಡುವವರೆಗೂ ಬರಬೇಡ ಅಂತ. ಹೀಗಾಗಿ 40 ನಿಮಿಷ ಸೂರ್ಯೋದಯ ತಡವಾಗಿದೆ. ಬೇಕಿದ್ದರೆ, ಗೂಗಲ್ ಮ್ಯಾಪ್‌ನಲ್ಲಿ ಚೆಕ್ ಮಾಡಿಕೊಳ್ಳಿ , ಬಿಡದಿಯಲ್ಲಿ 40 ನಿಮಿಷ ತಡವಾಗಿ ಸೂರ್ಯೋದಯವಾಗಿದೆ.

ಈ ಮಾತಿನಿಂದ ತಾನು ಸೂರ್ಯನನ್ನು ಸಹ ಕಂಟ್ರೋಲ್ ಮಾಡಬಲ್ಲೆ ಎಂದು ನಿತ್ಯಾನಂದ ಹೇಳಿದ್ದಾನೆ , ನಿತ್ಯಾನಂದ ಸ್ವಾಮಿ ಹೀಗೆ ಹೇಳುತ್ತಿದ್ದಂತೆ ಅವರ ಸುತ್ತ ಕುಳಿತಿದ್ದ ನೂರಾರು ಭಕ್ತರು ಚಪ್ಪಾಳೆ ತಟ್ಟಿದ್ದರು ಈ ಹೇಳಿಕೆಯ ವಿಡಿಯೋ ಮಾತ್ರ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಕ್ಕತ್ ಟ್ರೊಲ್ ಆಗುತ್ತಿರುವುದು ಮಾತ್ರ ಸುಳ್ಳಲ್ಲ ಈ ರೀತಿಯ ನಿತ್ಯಾನಂದನ ಹೇಳಿಕೆಗಳು ಇದೆ ಮೊದಲಲ್ಲ ಇದಕ್ಕೂ ಮೊದಲು ಆಲ್ಬರ್ಟ್ ಆಲ್ಬರ್ಟ್ ಐನ್​ಸ್ಟೀನ್​ರ Emc2 ವಾದವನ್ನೇ ನಿತ್ಯಾನಂದ ಬೇರೆಯದಾಗಿ ಹೇಳಿದ್ದ .

ನಿತ್ಯಾನಂದನ ಸೂರ್ಯನಿಗೆ ಟಾರ್ಚ್ ಬಿಟ್ಟ ವಿಡಿಯೋ

 

 

ಒಟ್ಟಿನಲ್ಲಿ ಊರೆಲ್ಲ ಒಂದು ರೀತಿಯಾಗಿ ಮಾತಾಡಿದರೆ ನಮ್ಮ ನಿತ್ಯಾನಂದನದೇ ಬೇರೆ ವರಸೆ , ಇದರ ಮಧ್ಯೆ ದೇಶವಿದೇಶಗಳಿಂದ ಬರುವ ಸಾವಿರಾರು ಭಕ್ತರ ಸಂಖ್ಯೆಯಂತೂ ಕಡಿಮೆಯಾಗಿಲ್ಲ , ಇದಕ್ಕೆ ಇರಬೇಕು ಜನ ಮರುಳೋ ಜಾತ್ರೆ ಮರುಳೋ ಎನ್ನುವುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top