fbpx
ಸಮಾಚಾರ

ಹೊಸ IBPS ನಿಯಮದಲ್ಲಿ ಲೋಪ ದೋಷ ಇದ್ದರೆ, ಅದನ್ನು ಕನ್ನಡಿಗರ ಪರವಾಗಿ ನಿರ್ಮಲ ಸೀತಾರಾಮನ್ ಅವರ ಗಮನಕ್ಕೆ ತರುವೆ : ಶೋಭಾ ಕರಂದ್ಲಾಜೆ

ವರ್ಷಾಂತರಗಳಿಂದ ಕನ್ನಡಿಗರನ್ನು ಕಾಡುತ್ತಿದ್ದ ಐಬಿಪಿಎಸ್ ಮೋಸದ ಸಮಸ್ಯೆಗೆ ಸದ್ಯ ಸಣ್ಣ ಗೆಲುವು ಸಿಕ್ಕಿದೆ. ಸಂಸದ ಜಿಸಿ ಚಂದ್ರಶೇಖರ್ ಕಳೆದ ವರ್ಷ ಪ್ರಥಮವಾಗಿ ಸಂಸತ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದರು. ನಂತರ ಉಳಿದ ಸಂಸದರೂ ಕೂಡ ಐಬಿಪಿಎಸ್ ವಿಚಾರವಾಗಿ ಧ್ವನಿಯೆತ್ತಿದ್ದರು. ಈಗ ಈ ವಿಚಾರವಾಗಿ ಕನ್ನಡಿಗರಿಗೆ ಗೆಲುವು ಸಿಕ್ಕಿದೆ.

ಇಷ್ಟಾದ ಬಳಿಕವೂ ಸಂಸದ ಜಿ.ಸಿ ಚಂದ್ರಶೇಖರ್ 2014 ರ ಮುಂಚಿನ ನೋಟಿಫಿಕೇಶನ್ ಮತ್ತೆ ಸಿಗಬೇಕು ಇದರಿಂದ ಉದ್ಯೋಗವಂಚಿತರಾಗಿರುವ ಸಾವಿರಾರು ಕನ್ನಡಿಗರಿಗೆ ಅನುಕೂಲವಾಗಲಿದೆ ಈ ಬೇಡಿಕೆಯನ್ನು ಇಲ್ಲಿಯೇ ಬಿಡದೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ , ನೆನ್ನೆ ಮಾಧ್ಯಮವೊಂದರ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ,ಜಿ.ಸಿ ಚಂದ್ರಶೇಖರ್ ಈ ಸಮಯದಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಹ ನೇರ ಕರೆಗೆ ಸಿಕ್ಕಿ ಮಂಗಳವಾರ ಭೇಟಿ ಮಾಡಿ ಐಬಿಪಿಎಸ್ ವಿಷಯದ ಬಗ್ಗೆ ಚರ್ಚೆ ನಡೆಸಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗೋಣ ಎಂದು ಹೇಳಿದ್ದಾರೆ, ಒಟ್ಟಿನಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸಂಸದ ಜಿ.ಸಿ ಚಂದ್ರಶೇಖರ್ ಭೇಟಿ ಮಾಡಿ ಐಬಿಪಿಎಸ್ ವಿಷಯ ಬಗೆಹರಿಸಿದರೆ ಪಕ್ಷಾತೀತವಾಗಿ ನಾಡಿನ ಮಕ್ಕಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯ ತಡೆಯಬಹುದಾಗಿದೆ .

ಜಿ ಸಿ ಚಂದ್ರಶೇಖರ್ ತಮ್ಮ ಟ್ವಿಟರ್ ನಲ್ಲಿ “#IBPSmosa ಪಕ್ಷಾತೀತ ಹೋರಾಟ, ಇದಕ್ಕೆ ಅನೇಕ ಕನ್ನಡ ಸಂಸದರು ಕೈ ಜೋಡಿಸಿರುವುದು ಸಂತೋಷ . ನೆನ್ನೆ @powertvnews ನಲ್ಲಿ ನಮ್ಮೊಂದಿಗೆ @ShobhaBJP ಮಾತನಾಡುತ್ತಾ IBPS ನ 2014 ರಂತೆ ನಿಯಮದಲ್ಲಿರುವ ಲೋಪದೋಷ ಸರಿಮಾಡಲು ನಿರ್ಮಲಾ ಸೀತಾರಾಮನ್ ರವರನ್ನು ಸೋಮವಾರ ಅಥವಾ ಮಂಗಳವಾರ ಒಟ್ಟಾಗಿ ಹೋಗಿ ಒತ್ತಾಯಿಸೋಣ ಎನ್ನುವ ಮಾತನ್ನು ಹೇಳಿದರು” ಅಂತ ತಿಳಿಸಿದ್ದಾರೆ , ಇದರ ಜೊತೆ ಪವರ್ ಟಿವಿ ಕಾರ್ಯಕಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಜೊತೆ ನಡೆಸಿದ ಫೋನ್ ಸಂದರ್ಶನವನ್ನು ಹಂಚಿಕೊಂಡಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (ಐಬಿಪಿಎಸ್) ನಡೆಸುತ್ತಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ಆರ್‌ಆರ್‌ಬಿ) ನೇಮಕಾತಿ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಹೊರತುಪಡಿಸಿ 13 ಭಾಷೆಗಳಲ್ಲಿ ನಡೆಸಲಾಗುವುದು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು ಪ್ರಕಟಿಸಿದ್ದಾರೆ.

ಪರೀಕ್ಷೆಯನ್ನು ಈಗ ಕನ್ನಡ, ಅಸ್ಸಾಮೀ, ಬಂಗಾಳಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆಸಲಾಗುವುದು. ಎಂದು ನಿರ್ಮಲ ಸೀತಾರಾಮನ್ ಘೋಷಿಸಿದ್ದಾರೆ.

ಹೌದು ಐಬಿಪಿಎಸ್ ಪರೀಕ್ಷೆಯನ್ನು ಕನ್ನಡ ಸೇರಿದಂತೆ ಉಳಿದ ಪ್ರಾದೇಶಿಕ ಭಾಷೆಗಳಲ್ಲೂ ನಡೆಸುವುದಾಗಿ ಸಂಸತ್ ನಲ್ಲಿ ಘೋಷಿಸಲಾಗಿದೆ. ಈ ವಿಚಾರವನ್ನು ಸ್ವತಃ ಜಿಸಿ ಚಂದ್ರಶೇಖರ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.

 

 

ಸಂಸತ್ ನಲ್ಲಿ ಇಂದು ಮಾತನಾಡಿದ ನಿರ್ಮಲ ಸೀತಾರಾಮನ್ “ಸ್ಥಳೀಯ ಯುವಕರಿಗೆ ಉದ್ಯೋಗದ ಸಾಧ್ಯತೆಗಳನ್ನು ವಿಸ್ತರಿಸಲು, ಆರ್‌ಆರ್‌ಬಿಗಳಲ್ಲಿ ಅಧಿಕಾರಿಗಳ (ಸ್ಕೇಲ್- I) ಮತ್ತು ಕಚೇರಿ ಸಹಾಯಕರ ನೇರ ನೇಮಕಾತಿ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು ಎಂದು ನಿರ್ಧರಿಸಲಾಗಿದೆ. “ನಿರ್ಮಲಾ ಸೀತಾರಾಮನ್ ಹೇಳಿದರು.

 

 

ಐಬಿಪಿಎಸ್ ಆರ್‌ಆರ್‌ಬಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾದೇಶಿಕ ಭಾಷೆಯಲ್ಲಿ ಪ್ರಾವೀಣ್ಯತೆಯು ಅತ್ಯಗತ್ಯವಾದ ಅರ್ಹತಾ ಮಾನದಂಡವಾಗಿದ್ದರೂ, ಆಯ್ಕೆ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲಾಗಿದೆ ಎಂದು ಹೇಳುವ ಮೂಲಕ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕ್ ಪರೀಕ್ಷೆಗಳನ್ನು ನಡೆಸುವ ಬೇಡಿಕೆ ಕಳೆದು ಕೆಲವು ವರ್ಷಗಳಿಂದ ಚರ್ಚೆಯಾಗುತ್ತಿತ್ತು. ಆಯ್ಕೆ ಪರೀಕ್ಷೆಯ ಮಾಧ್ಯಮವಾಗಿ ಪ್ರಾದೇಶಿಕ ಭಾಷೆಗಳ ಕೊರತೆಯು ಅನೇಕ ಅರ್ಹ ಅಭ್ಯರ್ಥಿಗಳನ್ನು ಅನಾನುಕೂಲಕ್ಕೆ ದೂಡಿತ್ತು. ಇದೀಗ ಈ ಸಮಸ್ಯೆಗೆ ಸಚಿವ ನಿರ್ಮಲ ಸೀತಾರಾಮನ್ ಬಗೆಹರಿಸಿರುವುದರಿಂದ ಸ್ಥಳೀಯರ ಉದ್ಯೋಕಾಂಕ್ಷಿಗಳ ಖುಷಿಗೆ ಕಾರಣವಾಗಿದೆ.

 

ರಾಜ್ಯಸಭೆ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯ ಜಿ.ಸಿ.ಚಂದ್ರಶೇಖರ್‌ ಶೂನ್ಯ ವೇಳೆಯಲ್ಲಿ ಕಳೆದ ಗುರುವಾರ ಈ ವಿಚಾರ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸಚಿವೆ ನಿರ್ಮಲ ಸೀತಾರಾಮನ್ ”ಇದೊಂದು ಅತ್ಯಂತ ಗಂಭೀರ ವಿಷಯವಾಗಿದೆ. ಈ ಬಗ್ಗೆ ಪರಾಮರ್ಶೆ ನಡೆಸಿ ಬ್ಯಾಂಕಿಂಗ್‌ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಹಿತ ಕಾಯಲಾಗುವುದು,” ಎಂದು ಭರವಸೆ ನೀಡಿದ್ದರು. ಐಬಿಪಿಎಸ್‌ ವಿಚಾರವಾಗಿ ಜಿ.ಸಿ.ಚಂದ್ರಶೇಖರ್‌ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆಡಿದ್ದರು. ಇದಕ್ಕೆ ಉತ್ತಮವಾಗಿ ಸ್ಪಂದಿಸಿದ ರಾಜ್ಯಸಭೆ ಅಧ್ಯಕ್ಷರೂ ಆಗಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಂದ್ರಶೇಖರ್‌ ಅವರಿಗೆ ಧನ್ಯವಾದ ಹೇಳಿ ಅವರ ಮಾತು ಮುಗಿದ ಬಳಿಕ ‘ಕೂತ್ಕೋಳ್ಳಿ…,” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top