fbpx
ಸಮಾಚಾರ

ಫೈರ್ ಬ್ರಾಂಡ್ ಭಾಷಣದಿಂದ ಫೇಮಸ್ ಆದ ತೃಣಮೂಲ ಕಾಂಗ್ರೆಸ್ ಶಾಸಕಿ ಮಾಹುವಾ ಮೊಯಿತ್ರಾ ಯಾರ್ ಗೊತ್ತಾ

ತೃಣಮೂಲ ಕಾಂಗ್ರೆಸ್ ಶಾಸಕಿ ಮಾಹುವಾ ಮೊಯಿತ್ರಾ ಅವರು ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಫೈರ್ ಬ್ರಾಂಡ್ ಭಾಷಣದಿಂದ ಒಂದೇ ರಾತ್ರಿಯಲ್ಲಿ ದೇಶದಲ್ಲಿ ಸಂಚಲ ಮೂಡಿಸಿದರು ಎಂದರೆ ಸುಳ್ಳಾಗುವುದಿಲ್ಲ , ಇದರಲ್ಲಿ ಭಾರತವು ಫ್ಯಾಸಿಸಂ ಕಡೆಗೆ ಸಾಗುತ್ತಿದೆ ಎಂದು ಇದರ 7ಪ್ರಚಲಿತ ಚಿಹ್ನೆಗಳನ್ನು ಸೂಚಿಸುತ್ತವೆ ಎಂದು ಎಚ್ಚರಿಸಿದ್ದಾರೆ. ಕೃಷ್ಣನಗರದ ಸಂಸತ್ ಸದಸ್ಯೆ, ಅಧ್ಯಕ್ಷರ ಭಾಷಣದ ವೇಳೆ , “ನೀವು ಕಣ್ಣು ತೆರೆದರೆ ಮಾತ್ರ, ಎಲ್ಲೆಡೆ ಈ ಚಿಹ್ನೆಗಳನ್ನು ನೀವು ನೋಡುತ್ತೀರಿ, ಈ ದೇಶವು ಹರಿದು ಹಂಚಿ ಹೋಗುತ್ತಿದೆ” ಎಂದು ಹೇಳಿದರು.

 

Related image

 

ಮಾಹುವಾ ಮೊಯಿತ್ರಾ ಯಾರು?

ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಜೆ.ಪಿ.ಮೊರ್ಗಾನ್ ನಲ್ಲಿ ಹೂಡಿಕೆ ಬ್ಯಾಂಕರ್ (ಇನ್ವೆಸ್ಟ್ಮೆಂಟ್ ಬ್ಯಾಂಕರ್) ಆಗಿ ಸೇವೆಸಲ್ಲಿಸುತ್ತಿದ್ದ ಇವರು 2009 ರಲ್ಲಿ ಲಂಡನ್‌ನಲ್ಲಿ ತಮ್ಮ ಕೆಲಸವನ್ನು ತ್ಯಜಿಸಿ ಭಾರತೀಯ ರಾಜಕೀಯ ರಂಗ ಪ್ರವೇಶಿಸಿದರು,ಗಣಿತ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿರುವ ಈಕೆ ಯುನೈಟೆಡ್ ಸ್ಟೇಟ್ಸ್ನ ಮ್ಯಾಸಚೂಸೆಟ್ಸ್ನ ಮೌಂಟ್ ಹೋಲಿಯೋಕ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ.

44 ವರ್ಷದ ಪಶ್ಚಿಮ ಬಂಗಾಳದ ಶಾಸಕಿ ತಮ್ಮ ರಾಜಕೀಯ ಜೀವನವನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್‌ನಲ್ಲಿ ಪ್ರಾರಂಭಿಸಿದರು, ಆದರೆ 2010 ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ಸೇರಿ. ಹಲವಾರು ವರ್ಷಗಳ ಕಾಲ ಟಿಎಂಸಿಯ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ ,ಈ ಸಮಯದಲ್ಲಿ ಮೊಯಿತ್ರಾ ದೂರದರ್ಶನ ಚರ್ಚೆಗಳಲ್ಲಿ ನಿಯಮಿತವಾಗಿ ಕಾಣಿಸಿಕೊಂಡಿದ್ದಾರೆ.

Image result for Mahua Moitra

 

ಕಳೆದ ವರ್ಷ, ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ವಿರುದ್ಧದ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಸ್ಸಾಂಗೆ ಎರಡು ದಿನಗಳ ಭೇಟಿಯಲ್ಲಿದ್ದ ಟಿಎಂಸಿ ಸಂಸದರ ನಿಯೋಗದಲ್ಲಿ ಮೊಯಿತ್ರಾ ಅವರು ಸಹ ಇದ್ದರು , ಸಿಲ್ಚಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಪೊಲೀಸರು ಈ ನಿಯೋಗವನ್ನು ತಡೆದರು ಎಂದು ಟಿಎಂಸಿ ಸಂಸದರ ನಿಯೋಗ ಆರೋಪಿಸಿದರೆ ಮೊಯಿತ್ರಾ ಅವರು ಹಲ್ಲೆ ನಡೆಸಿದ ನಂತರ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ ಎಂದು ಅಸ್ಸಾಂ ಡೈರೆಕ್ಟರೇಟ್ ಜನರಲ್ ಆಫ್ ಪೋಲಿಸ್ ಹೇಳಿದ್ದರು .ಟಿಎಂಸಿ ನಾಯಕರನ್ನು ಸಿಲ್ಚಾರ್‌ಗೆ ಪ್ರವೇಶಿಸುವುದನ್ನು ನಿಲ್ಲಿಸಲಾಗಿದೆ ಎಂದು ಅಸ್ಸಾಂ ಡಿಜಿಪಿ ಹೇಳಿದ್ದು, ಅವರ ಆಗಮನವು ಜನರಲ್ಲಿ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುತ್ತದೆ ಎಂದು ಅಧಿಕಾರಿಗಳು ಭಾವಿಸಿದ್ದರು ಎನ್ನಲಾಗಿದೆ ಈ ಸಮಯದಲ್ಲಿ ಮೀಡಿಯಾದಲ್ಲಿ ಮೊಯಿತ್ರಾ ಹೆಸರು ಅತಿಯಾಗಿ ಕೇಳಿಬಂದಿತ್ತು .

2019 ರ ಲೋಕಸಭಾ ಚುನಾವಣೆಯಲ್ಲಿ ಮೊಯಿತ್ರಾ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಲ್ಯಾಣ್ ಚೌಬೆ ವಿರುದ್ಧ 60,000 ಮತಗಳಿಂದ ಗೆದ್ದರು.

ಸಂಸತ್ತಿನಲ್ಲಿ ತನ್ನ ಚೊಚ್ಚಲ ಭಾಷಣದಲ್ಲಿ, ಟಿಎಂಸಿ ಶಾಸಕಿ ದೇಶವು ಅಪಾಯಕಾರಿ ಹಾದಿಗೆ ಇಳಿಸುತ್ತಿದೆ ಎಂದು ಹೇಳಲು ಏಳು ಚಿಹ್ನೆಗಳ ಉಲ್ಲೇಖ ಮಾಡಿದರು. ಯುಎಸ್ ಹತ್ಯಾಕಾಂಡದ ಸ್ಮಾರಕ ವಸ್ತುಸಂಗ್ರಹಾಲಯವು 2017 ರಲ್ಲಿ ಪೋಸ್ಟರ್ ಒಂದನ್ನು ಅಂಟಿಸಿತ್ತು ಅದರಲ್ಲಿ ಆರಂಭಿಕ ಫ್ಯಾಸಿಸಂನ ಎಲ್ಲಾ ಚಿಹ್ನೆಗಳ ಪಟ್ಟಿಯನ್ನು ಒಳಗೊಂಡಿತ್ತು ಅವರು ಉಲ್ಲೇಖಿಸಿದ ಪ್ರತಿಯೊಂದು ಚಿಹ್ನೆಗಳು ಆ ಪಟ್ಟಿಯಲ್ಲಿ ಕಾಣಬಹುದು ಎಂದು ಮೊಯಿತ್ರಾ ಹೇಳಿದರು.

ಟಿಎಂಸಿಯ ಸಂಸದೆ ಮಹುವಾ ಮೊಯಿತ್ರಾ ( Mahua Moitra ) ಅವರ ಭಾಷಣ ದೇಶದ ವಾಸ್ತವ ಪರಿಸ್ಥಿತಿಯನ್ನು ತೆರದಿಟ್ಟಿದ್ದಲ್ಲದೆ, ಎಲ್ಲಡೆ ವೈರಲ್ ಆಗಿದೆ.

ದೇಶದ ಹಲವು ವಿಶ್ವಾಸಾರ್ಹ ಮೀಡಿಯಾಗಳು ಮಹುನಾರ ಭಾಷಣವನ್ನು ಅರ್ಥಪೂರ್ಣ ಎಂದು ಬಣ್ಣಿಸಿವೆ. ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಮಹುನಾರ ಭಾಷಣವನ್ನು ‘ವರ್ಷದ ಭಾಷಣ’ ( Speech of the Year) ಎಂದು ಗುರುತಿಸಿದೆ..

ರಾಷ್ಟ್ರೀಯ ಭದ್ರತೆ ಮತ್ತು ಶತ್ರುಗಳನ್ನು ಗುರುತಿಸುವ ಗೀಳು ಹೆಚ್ಚಾಗಿದ್ದು , ಸೈನ್ಯದ ಸಾಧನೆಗಳನ್ನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಕಸಿದುಕೊಳ್ಳಲಾಗುತ್ತಿದೆ ಎಂದು ಮೊಯಿತ್ರಾ ಆರೋಪಿಸಿದ್ದರು.

ಸಂಸತ್ತಿನಲ್ಲಿ ಮಹುವಾ ಮೊಯಿತ್ರಾ ಮಾಡಿದ ಭಾಷಣ ವೈರಲ್ ಭಾಷಣದ ಸಾರ ತಿಳಿಯಲು ಇಲ್ಲಿ ಓದಿ 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top