fbpx
ಸಮಾಚಾರ

ಸಾಕು ತಾಯಿ ಕಳೆದುಕೊಂಡ ದುಃಖದಲ್ಲಿ ನಟ ಜಗ್ಗೇಶ್.

ನಟ ಜಗ್ಗೇಶ್ ಇತ್ತೀಚಿಗಷ್ಟೆ ತಮ್ಮ ಸಾಕು ತಾಯಿ ಮೋರು ಬಾಯ್ ಅವರ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ, ಇಂದು ಜಗ್ಗೇಶ್ ರನ್ನು ಆ ತಾಯಿ ಅಗಲಿದ್ದಾರೆ. ಜಗ್ಗೇಶ್ ಸಾಕು ತಾಯಿ ಮೋರು ಬಾಯ್ ನೆನ್ನೆ ನಿಧನರಾಗಿದ್ದಾರೆ. ನನ್ನ ಸಾಕುತಾಯಿ ಮೋರುಬಾಯ್ ಇಂದು ನಿಧನರಾಗಿದ್ದಾರೆ ಎಂದು ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

 

 

“ನನ್ನ ಸಾಕು ತಾಯಿ ಮೋರುಬಾಯ್ ಜನ್ಮ ಕೊಟ್ಟ ನನ್ನ ತಾಯಿ ಬಳಿ ಸಂಗಾತಿಯಾಗಲು ಹೋಗಿಬಿಟ್ಟಳು..ಕಳೆದವಾರ ಹರಸಿ ಕಳಿಸಿದಳು. ಇಂದು ಹರಸಲಾಗದ ಕಣ್ಣಿಗೆ ಕಾಣದ ದೂರದ ಊರಿಗೆ ಹೋಗಿಬಿಟ್ಟಳು!ಇಷ್ಟೆ ಅಲ್ಲವೆ ಮನುಜನ್ಮ..ಅವಳ ಕೈ ತುತ್ತು ತಿಂದ ನಾನು ಅವಳ ಮರೆಯಲು ಸಾಧ್ಯವೇ!ನನಗೆ ಮಮತೆ ತೋರಿ ತುತ್ತು ತಿನ್ನಿಸಿದ ಕಡೆ ತಾಯಿ ಪ್ರೀತಿಯ ಕೊಂಡಿಯು ಹೋಯಿತು!ಅಮ್ಮನಂತೆ ಇವಳು ಇನ್ನುಮುಂದೆ ನೆನಪು ಮಾತ್ರ..ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆವು ಸುಮ್ಮನೆ..ಓಂ ಶಾಂತಿ…” ಎಂದು ನಟ ಜಗ್ಗೇಶ್ ನೋವನು ಹಂಚಿಕೊಂಡಿದ್ದಾರೆ.

 
ಕಳೆದವಾರಷ್ಟೇ ಮೋರುಬಾಯ್‍ಯನ್ನು ಭೇಟಿ ಮಾಡಿ ಅವರ ಬಗ್ಗೆ ಒಂದು ಪೋಸ್ಟ್ ಬರೆದು ಹಾಕಿದ್ದರು.

ಪೋಸ್ಟ್ ನಲ್ಲಿ ಏನಿತ್ತು?
ನಾನು ಹುಟ್ಟಿದಾಗಿಂದ ನನ್ನ ಲಾಲನೆ ಪಾಲನೆ ಮಾಡಿದ ನನ್ನ ಎರಡನೆ ತಾಯಿ ಮೋರುಬಾಯ್. ನಾನು ಆಕೆಯನ್ನು ಅಕ್ಕ ಎಂದು ಕರೆಯುತ್ತೇನೆ ಆಕೆ ನನ್ನನ್ನು ಅಣ್ಣ ಎಂದು ಕರೆಯುತ್ತಾಳೆ..ನನ್ನ ಅಮ್ಮನಿಗಿಂತ 9ವರ್ಷ ಹಿರಿಯಳು ಈಕೆಗೆ ಈಗ 90ವರ್ಷ..ಸಾವಿನ ಬಾಗಿಲಿಗೆ ಅಕ್ಕ ಮುಖಮಾಡಿ
ಮಾತು ನಿಂತು ನನಗಾಗಿ ಹಂಬಲಿಸಿದ್ದಾಳೆ!

ಕೇದಾರನಾಥ ಸನ್ನಿದಿಯಿಂದ ಬಂದಾಗ ವಿಷಯ ತಿಳಿದು ಓಡಿಹೋದೆ..ಅವಳ ಬಳಿ ಹೋದಾಗ ನಿಂತಮಾತು ಮುಚ್ಚಿದ ಕಣ್ಣು ನಾನು ಅಕ್ಕ ಎಂದು ಕೂಗಿದಾಗ ಕಣ್ಣು ತೆರೆದು ಮಾತು ಮತ್ತೆ ಶುರುವಾಯ್ತು..ಹರಸಿದಳು ನಮಿಸಿದಳು ನನ್ನ ಬಾಲ್ಯ ನೆನಪಾದಳು ಅಳಿಸಿದಳು.! ಇದೆ ಅಲ್ಲವೆ ಸಾಕಿದ ಋಣ! ಅಮ್ಮನಿಲ್ಲದ ನನಗೆ 26 ವರ್ಷದಿಂದ ಅಮ್ಮನ ಪ್ರೀತಿ ತೋರುತ್ತಿದ್ದಳು..ಎಲ್ಲಿಯು ಬರದ ಈಕೆ ನನಗಾಗಿ #ztv #weekendwithramesh ಗೆ ಬಂದು ನಾವಿಬ್ಬರು ಭಾವುಕರಾದೆವು!ನನ್ನ ತಂದೆ ಸಾವಿನ ಕದಂಭ ಭಾಹು ಅಪ್ಪುವ ಸಮಯ ಹೀಗೆ ಪಕ್ಕದಲ್ಲಿ ಇದ್ದು ಭಾರವಾದ ಹೃದಯದಿಂದ ಅಳುತ್ತ ಅಪ್ಪನ ಕಳಿಸಿಕೊಟ್ಟೆ!ನನ್ನ ದುರ್ವಿಧಿ ಮತ್ತೆ ನನಗೆ ತಿನ್ನಿಸಿ ಆಡಿಸಿದ ಪ್ರೀತಿಯ ಸಾಕು ತಾಯಿ ಅಪ್ಪನಂತೆ ಅನ್ನ ಮಣ್ಣಿನ ಋಣ ತೀರಿಸುವ ಮುನ್ನ ನನ್ನ ಪ್ರೀತಿಯಿಂದ ಮಾತಾಡಿಸಿ ಹರಸಿದಳು!ನನಗೆ ಪ್ರೀತಿಕೊಟ್ಟು ತಾಯಂತೆ ಪ್ರೀತಿಸಿದ ಆತ್ಮ ನನ್ನಬಿಟ್ಟು ಬಾರದ ಊರಿಗೆ ಗಂಟುಮೂಟೆ ಕಟ್ಟುತ್ತಿದ್ದಾಳೆ!ನನಗೆ ತಿಳಿದಿದ್ದು ಒಂದೆ ಶಿವಧ್ಯಾನ ಮಾಡುತ್ತಿರು ನಿಲ್ಲಿಸಬೇಡ ಅಕ್ಕ! ಬರುತ್ತಿದ್ದಾನೆ ನಿನಗಾಗಿ ಕೈಲಾಸದಿಂದ ಇಳಿದು ಶಿವ ಎಂದು ಧೈರ್ಯತುಂಬಿ ಸಾವಿನ ಲೆಕ್ಕಾಚಾರ ಜಗದನಿಯಮ ಮನುಷ್ಯನ ಕೊನೆದಿನ ಹಾಗು ನನ್ನ ಪ್ರೀತಿಸಿ ಬೆಳೆಸಿದ ನನ್ನ ಬಾಲ್ಯಕಂಡ ಕೊನೆ ಪ್ರೀತಿಯ ದೇವರ ಉಸಿರುನಿಂತ ಮೇಲೆ ತಿಳಿಸಿ ಎಂದು ಹೇಳಿ ಅವಳ ಸಾವು ಬರುವುದು ನೋಡಲಾಗದೆ ಬಂದುಬಿಟ್ಟೆ!ಇರುವವರೆಗು ನಮ್ಮವರು ಹೋದ ಮೇಲೆ ನೆನಪುಮಾತ್ರ..ಭಾರವಾಯ್ತು ನನ್ನಮನಸ್ಸು ನನ್ನ 56ನೆ ವಯಸ್ಸಿಗೆ ಎಷ್ಟು ಜನ ಬಂಧುಗಳ ಕಳೆದುಕೊಂಡೆ..ಅವಳ ಆತ್ಮ ನೋವಿಲ್ಲದೆ ಶಿವನ ಪಾದ ಸೇರಲಿ
ಶಿವಾರ್ಪಣಮಸ್ತು..
 

 

 

View this post on Instagram

 

ನಾನು ಹುಟ್ಟಿದಾಗಿಂದ ನನ್ನ ಲಾಲನೆ ಪಾಲನೆ ಮಾಡಿದ ನನ್ನ ಎರಡನೆ ತಾಯಿ ಮೋರುಬಾಯ್. ನಾನು ಆಕೆಯನ್ನು ಅಕ್ಕ ಎಂದು ಕರೆಯುತ್ತೇನೆ ಆಕೆ ನನ್ನನ್ನು ಅಣ್ಣ ಎಂದು ಕರೆಯುತ್ತಾಳೆ..ನನ್ನ ಅಮ್ಮನಿಗಿಂತ 9ವರ್ಷ ಹಿರಿಯಳು ಈಕೆಗೆ ಈಗ 90ವರ್ಷ..ಸಾವಿನ ಬಾಗಿಲಿಗೆ ಅಕ್ಕ ಮುಖಮಾಡಿ ಮಾತು ನಿಂತು ನನಗಾಗಿ ಹಂಬಲಿಸಿದ್ದಾಳೆ! ಕೇದಾರನಾಥ ಸನ್ನಿದಿಯಿಂದ ಬಂದಾಗ ವಿಷಯ ತಿಳಿದು ಓಡಿಹೋದೆ..ಅವಳ ಬಳಿ ಹೋದಾಗ ನಿಂತಮಾತು ಮುಚ್ಚಿದ ಕಣ್ಣು ನಾನು ಅಕ್ಕ ಎಂದು ಕೂಗಿದಾಗ ಕಣ್ಣು ತೆರೆದು ಮಾತು ಮತ್ತೆ ಶುರುವಾಯ್ತು..ಹರಸಿದಳು ನಮಿಸಿದಳು ನನ್ನ ಬಾಲ್ಯ ನೆನಪಾದಳು ಅಳಿಸಿದಳು.!ಇದೆ ಅಲ್ಲವೆ ಸಾಕಿದ ಋಣ!ಅಮ್ಮನಿಲ್ಲದ ನನಗೆ 26ವರ್ಷದಿಂದ ಅಮ್ಮನ ಪ್ರೀತಿ ತೋರುತ್ತಿದ್ದಳು..ಎಲ್ಲಿಯು ಬರದ ಈಕೆ ನನಗಾಗಿ #ztv #weekendwithramesh ಗೆ ಬಂದು ನಾವಿಬ್ಬರು ಭಾವುಕರಾದೆವು!ನನ್ನ ತಂದೆ ಸಾವಿನ ಕದಂಭ ಭಾಹು ಅಪ್ಪುವ ಸಮಯ ಹೀಗೆ ಪಕ್ಕದಲ್ಲಿ ಇದ್ದು ಭಾರವಾದ ಹೃದಯದಿಂದ ಅಳುತ್ತ ಅಪ್ಪನ ಕಳಿಸಿಕೊಟ್ಟೆ!ನನ್ನ ದುರ್ವಿಧಿ ಮತ್ತೆ ನನಗೆ ತಿನ್ನಿಸಿ ಆಡಿಸಿದ ಪ್ರೀತಿಯ ಸಾಕು ತಾಯಿ ಅಪ್ಪನಂತೆ ಅನ್ನ ಮಣ್ಣಿನ ಋಣ ತೀರಿಸುವ ಮುನ್ನ ನನ್ನ ಪ್ರೀತಿಯಿಂದ ಮಾತಾಡಿಸಿ ಹರಸಿದಳು!ನನಗೆ ಪ್ರೀತಿಕೊಟ್ಟು ತಾಯಂತೆ ಪ್ರೀತಿಸಿದ ಆತ್ಮ ನನ್ನಬಿಟ್ಟು ಬಾರದ ಊರಿಗೆ ಗಂಟುಮೂಟೆ ಕಟ್ಟುತ್ತಿದ್ದಾಳೆ!ನನಗೆ ತಿಳಿದಿದ್ದು ಒಂದೆ ಶಿವಧ್ಯಾನ ಮಾಡುತ್ತಿರು ನಿಲ್ಲಿಸಬೇಡ ಅಕ್ಕ! ಬರುತ್ತಿದ್ದಾನೆ ನಿನಗಾಗಿ ಕೈಲಾಸದಿಂದ ಇಳಿದು ಶಿವ ಎಂದು ಧೈರ್ಯತುಂಬಿ ಸಾವಿನ ಲೆಕ್ಕಾಚಾರ ಜಗದನಿಯಮ ಮನುಷ್ಯನ ಕೊನೆದಿನ ಹಾಗು ನನ್ನ ಪ್ರೀತಿಸಿ ಬೆಳೆಸಿದ ನನ್ನ ಬಾಲ್ಯಕಂಡ ಕೊನೆ ಪ್ರೀತಿಯ ದೇವರ ಉಸಿರುನಿಂತ ಮೇಲೆ ತಿಳಿಸಿ ಎಂದು ಹೇಳಿ ಅವಳ ಸಾವು ಬರುವುದು ನೋಡಲಾಗದೆ ಬಂದುಬಿಟ್ಟೆ!ಇರುವವರೆಗು ನಮ್ಮವರು ಹೋದ ಮೇಲೆ ನೆನಪುಮಾತ್ರ..ಭಾರವಾಯ್ತು ನನ್ನಮನಸ್ಸು ನನ್ನ 56ನೆ ವಯಸ್ಸಿಗೆ ಎಷ್ಟು ಜನ ಬಂಧುಗಳ ಕಳೆದುಕೊಂಡೆ..ಅವಳ ಆತ್ಮ ನೋವಿಲ್ಲದೆ ಶಿವನ ಪಾದ ಸೇರಲಿ ಶಿವಾರ್ಪಣಮಸ್ತು..

A post shared by Jaggesh Shivalingappa (@actor_jaggesh) on

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top