fbpx
ಸಮಾಚಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಡಿಗೆ ಮತ್ತೊಂದು ಬಿರುದು- ಕೊಟ್ಟಿದ್ದು ಕನ್ನಡದ ಹಿರಿಯ ನಟಿ.

ಚಾಲೆಂಜಿಂಗ್ ಸ್ಟಾರ್ ಎಂಬುದು ನಟ ದರ್ಶನ್’ಗೆ ಇರುವ ಬಿರುದು ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಇದರ ಜೊತೆಗೆ ಬಾಕ್ಸ್ ಆಫೀಸ್ ಸುಲ್ತಾನ್, ಮೈಸೂರು ಹುಲಿ,ಕರುನಾಡಿನ ಕರ್ಣ ಸೇರಿದಂತೆ ಅನೇಕ ಬಿರುದುಗಳು ಕೂಡ ದರ್ಶನ್ ಅವರಿಗೆ ಒಲಿದಿವೆ. ಆದಾಗ್ಯೂ ಅವರ ಅಭಿಮಾನಿಗಳು ಮಾತ್ರ ಅವರನ್ನು ಪ್ರೀತಿಯಿಂದ ಡಿ ಬಾಸ್ ಎಂತಲೇ ಕರೆಯುತ್ತಾರೆ. ಈ ಎಲ್ಲ ಬಿರುದುಗಳ ಮಧ್ಯೆ ದರ್ಶನ್ ಅವರಿಗೆ ಮತ್ತೊಂದು ಬಿರುದು ಒಲಿದು ಬಂದಿದೆ.

 

 

'ಸುಲ್ತಾನ್ ಆಫ್ ಸ್ಯಾಂಡಲ್ ವುಡ್'
ದರ್ಶನ್ ಗೆ 'ಸುಲ್ತಾನ್ ಆಫ್ ಸ್ಯಾಂಡಲ್ ವುಡ್' ಎಂಬ ಬಿರುದನ್ನ ನಟಿ ತಾರಾ ನೀಡಿದ್ದಾರೆ. ಇತ್ತೀಚಿಗಷ್ಟೆ 'ಸಿಂಗ' ಚಿತ್ರದ ಆಡಿಯೋ ರಿಲೀಸ್ ಗೆ ದರ್ಶನ್ ಆಗಮಿಸಿದ್ರು. ಆ ಸಂದರ್ಭದಲ್ಲಿ ತಾರಾ ಅವರು ದರ್ಶನ್ ಗೆ 'ಸುಲ್ತಾನ್ ಆಫ್ ಸ್ಯಾಂಡಲ್ ವುಡ್ ' ಎಂದರು. ಈ ಬಿರುದು ಕೇಳಿ ಡಿ ಬಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್ ಅವರನ್ನು ಹೊಗಳಿದ ತಾರಾ "ದರ್ಶನ್ ನನ್ನ ದೊಡ್ಡ ಮಗ" ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top