fbpx
ಸಮಾಚಾರ

‘ಕಿಸಾನ್ ಸುವಿಧಾ’ ಆ್ಯಪ್‍ನಲ್ಲಿ ಕನ್ನಡ ಮಾಯ, ಕರ್ನಾಟಕದ ರೈತರಿಗೆ ಬೆಳೆ ವಿಮೆ ಮಾಯ- ಕೇಂದ್ರದಿಂದ ಮಲತಾಯಿ ದೋರಣೆ?

ರೈತರಿಗೆ ಸಹಾಯವಾಗುವ ದೃಷ್ಟಿಯಿಂದ ಭಾರತ ಸರ್ಕಾರ ಕಿಸಾನ್‌ ಸುವಿಧಾ ಆಪ್‌ ಅನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ರೈತರಿಗೆ ಪ್ರಸ್ತುತ ಮತ್ತು ಮುಂದಿನ 5 ದಿನಗಳ ಹವಾಮಾನದ ಮಾಹಿತಿಯನ್ನು ನೀಡಲಾಗುತ್ತದೆ. ಸ್ಥಳೀಯ ಡೀಲರ್‌ಗಳು, ಮಾರುಕಟ್ಟೆ, ಕೃಷಿ ಸಲಹೆಗಾರರ ಬಗ್ಗೆ, ಕೃಷಿ ರಕ್ಷಣೆ, ಐಪಿಎಮ್‌ ಪ್ರಯೋಗಗಳನ್ನು ರೈತರಿಗೆ ನೇರವಾಗಿ ನೀಡುತ್ತದೆ.. ಆದರೆ ಈ ಆಪ್ ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

 

 

 

ಹೌದು, ಸುವಿಧಾ ಆಪ್ ನಲಿ ಕನ್ನಡವನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಆದರೆ ಕನ್ನಡದ ಆಯ್ಕೆಯನ್ನು ನೀಡಿಲ್ಲ, ಅಷ್ಟೇ ಅಲ್ಲದೆ ಬೆಳೆ ವಿಮೆ ವಿಭಾಗದಲ್ಲಿ ಕರ್ನಾಟಕ ರಾಜ್ಯದ ಹೆಸರನ್ನೇ ಕೈಬಿಡಲಾಗಿದೆ. ಹಾಗಾಗಿ ಕನ್ನಡಿಗರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಉದ್ದೇಶಪೂರಿತ ತಪ್ಪು ಬೇಕಂತಲೇ ಕರ್ನಾಟಕ ಮತ್ತು ಕನ್ನಡವನ್ನು ಕೇಂದ್ರ ಸರ್ಕಾರ ಕಡೆಗಣಿಸಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಯಲ್ಲಿ ಟ್ವೀಟ್ ಮಾಡಿರುವ ಸಂಸದರು “#kisansuvidha ಆ್ಯಪ್ ನಲ್ಲಿ ನಮ್ಮ ಕನ್ನಡ ಭಾಷೆ ಜೊತೆ ಬೆಳೆ ವಿಮೆ ವಿಭಾಗದಲ್ಲಿ ರಾಜ್ಯದ ಹೆಸರನ್ನು ಕೈಬಿಡಲಾಗಿದೆ ಯಾಕೆ ಕನ್ನಡ/ಕನ್ನಡಿಗರು ಎಂದರೆ ಈ ತಾರತಮ್ಯ. ಯಾಕೆ ಈ ರೀತಿಯ ಮಲತಾಯಿ ದೋರಣೆ? ಕಿಸ್ಸಾನ್ ಸುವಿಧಾದಲ್ಲಿ ಸಹಾಯ ತೆಗೆದುಕೊಳ್ಳುವ ಮೊದಲು ನಮ್ಮ ರೈತರು ಹಿಂದಿ ಅಥವಾ ಇಂಗ್ಲಿಷ್ ಕಲಿಯಬೇಕೆಂದು ಏಕೆ ನಿರೀಕ್ಷಿಸುತ್ತೀರಿ?” ಎಂದು ಬರೆದು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top