fbpx
ಸಮಾಚಾರ

ಬಂಡಾಯ ಶಮನಕ್ಕೆ ದೋಸ್ತಿ ಸರ್ಕಾರದ ಎಲ್ಲಾ ಸಚಿವರ ರಾಜೀನಾಮೆ!

ರಾಜ್ಯ ರಾಜ್ಯಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಇದೀಗ ಕಾಂಗ್ರೆಸ್ ಪಕ್ಷದ ಎಲ್ಲಾ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮೈತ್ರಿ ಸರ್ಕಾರದ ಉಳಿವಿಗಾಗಿ ಹೈಕಮಾಂಡ್ ಬಂಡಾಯ ಶಾಸಕರ ಮನವೊಲಿಕೆಗೆ ಹಿರಿಯ ಸಚಿವರ ರಾಜೀನಾಮೆಗೆ ಸೂಚನೆ ನೀಡಿತ್ತು. ಇದೀಗ ಉಪಾಹಾರ ಕೂಟದಲ್ಲೇ ಸಚಿವರು ರಾಜೀನಾಮೆ ಕೊಡುವ ಸಾಧ್ಯತೆ ಇದೆ.

ಬಂಡಾಯ ಶಮನಕ್ಕೆ ಮುಲಾಮು ಹಚ್ಚುವ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಉಪಹಾರ ಕೂಡ ಆಯೋಜಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕೈ ನಾಯಕರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಶತಾಯಗತಾಯ ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ನ ಎಲ್ಲ (22) ಸಚಿವರು ರಾಜೀನಾಮೆಗೆ ನಿರ್ಧರಿಸಲಾಗಿದೆ.

ಸಚಿವರು ರಾಜೀನಾಮೆ ಕೊಡುತ್ತಿರುವುದರಿಂದ ಇದಕ್ಕೂ ಸ್ಪೀಕರ್ ಗೂ ಸಂಬಂಧ ಇರುವುದಿಲ್ಲ. ಮೊದಲಿಗೆ ಸಿದ್ದರಾಮಯ್ಯ ರಾಜೀನಾಮೆ ಪಡೆದುಕೊಂಡು ನಂತರ ಅದನ್ನು ಸಿಎಂಗೆ ಹಸ್ತಾಂತರಿಸಲಾಗುತ್ತದೆ. ಸಚಿವರಿಂದ ರಾಜೀನಾಮೆ ಪಡೆದು ಈ ಸ್ಥಾನಗಳನ್ನು ಅತೃಪ್ತರಿಗೆ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top