fbpx
ಸಮಾಚಾರ

ನಾಳಿನ ಸೆಮಿಫೈನಲ್ ಪಂದ್ಯಕ್ಕೆ ಮಳೆ ಕಾಟ- ಮಳೆ ಬಂದರೆ ಏನು ಮಾಡಲಾಗುತ್ತೆ ಗೊತ್ತಾ?

ವಿಶ್ವಕಪ್​ ಸೆಮಿಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಮಧ್ಯಾಹ್ನ ಮ್ಯಾಂಚೆಸ್ಟರ್​ನಲ್ಲಿ ಭಾರತ-ನ್ಯೂಜಿಲೆಂಡ್​ ತಂಡಗಳು ಸೆಣೆಸುತ್ತಿವೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕೋಟ್ಯಾಂತರ ಜನ ಕಾದು ಕೂತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಈಗಾಲೇ ಈ ಪಂದ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಈ ನಡುವೆ ಪಂದ್ಯಕ್ಕೆ ಮಳೆಯ ಕಾಟ ಎದುರಾಗಲಿದೆ ಎಂದು ಹವಾಮಾನ ವರದಿ ಹೇಳಿದೆ. ಮ್ಯಾಂಚೆಸ್ಟರ್‌ನಲ್ಲಿ ನಾಳೆಯಿಂದ ಶನಿವಾರದ ವರೆಗೂ ಸತತವಾಗಿ ಮಳೆ ಬೀಳುವ ಮುನ್ಸೂಚನೆ ಇದೆ.

 

 

ಹೀಗಾಗಿ ಪಂದ್ಯ ಆರಂಭಗೊಂಡರೂ, ಪದೇ ಪದೇ ಮಳೆಯಿಂದಾಗಿ ಸ್ಥಗಿತಗೊಳ್ಳಬಹುದು. ಓವರ್‌ಗಳು ಕಡಿತಗೊಳ್ಳುವ ಸಾಧ್ಯತೆ ಹೆಚ್ಚು, ಪೂರ್ಣ ಪಂದ್ಯ ನಿರೀಕ್ಷೆ ಮಾಡುವುದು ಕಷ್ಟಎಂದು ಸ್ಥಳೀಯ ಆಯೋಜಕರು ಮಾಹಿತಿ ನೀಡಿದ್ದಾರೆ.. ಅಕಸ್ಮಾತ್‌ ಸೆಮಿಫೈನಲ್‌ ಪಂದ್ಯ ಮಳೆ ಸುರಿದು ಪಂದ್ಯ ರದ್ದಾಗುವ ಪರಿಸ್ಥಿತಿ ಎದುರಾದರೆ ಆಗ ಏನಾಗುತ್ತದೆ? ಇದು ಕ್ರಿಕೆಟ್‌ ಪ್ರೇಮಿಗಳ ಕುತೂಹಲ.

ಮಳೆ ಬಂದರೆ ಭಾರತ ಫೈನಲ್ ಗೆ:
ವಿಶ್ವಕಪ್ ನ ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಒಂದೊಂದು ಮೀಸಲು ದಿನ ಇರಿಸಿಕೊಳ್ಳಲಾಗಿದೆ. ಅಕಸ್ಮಾತ್‌ ಸೆಮಿಫೈನಲ್‌ ಪಂದ್ಯ ಮೀಸಲು ದಿನದಂದೂ ವಾಶೌಟ್‌ ಆದರೆ ಆಗ ಲೀಗ್‌ ಅಂಕಪಟ್ಟಿಯಲ್ಲಿ ಮುಂದಿದ್ದ ತಂಡ ಫೈನಲ್‌ ತಲುಪುತ್ತದೆ. ನಾಳಿನ ಸೆಮಿ ಫೈನಲ್ ಪಂದ್ಯದ ವೇಳೆ ಮಳೆ ಬಂದರೆ ನಾಡಿದ್ದು ಪಂದ್ಯವನ್ನು ಆಡಿಸಲಾಗುತ್ತದೆ. ಅಕಸ್ಮಾತ್ ನಾಳಿದ್ದು ಕೂಡ ಮಳೆ ಬಂದರೆ ಅಂಕಪಟ್ಟಿಯಲ್ಲಿ ನ್ಯೂಝಿಲ್ಯಾಂಡ್ ಗಿಂತಲೂ ಮುಂದಿರುವ ಭಾರತ ಫೈನಲ್‌ ಗೆ ಅರ್ಹತೆ ಪಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top