fbpx
ಸಮಾಚಾರ

ಈ ಶ್ಲೋಕವನ್ನು 40 ದಿನಗಳ ಕಾಲ ಭಕ್ತಿಯಿಂದ ಪಠಿಸಿದರೆ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಅದೃಷ್ಟನಿಮ್ಮನ್ನ ಹುಡುಕಿಕೊಂಡು ಬರುವುದು

ಯಾವ ಕೆಲಸವನ್ನು ಸಾಧಿಸಬೇಕೆಂದರು ಖಚಿತವಾಗಿ ಆ ಮನುಷ್ಯನಲ್ಲಿ ಧೈರ್ಯವಿರಬೇಕು. ಯಾವ ರಂಗದಲ್ಲಿ ಆದರೂ ಶತ್ರುಗಳು ಇದ್ದೇ ಇರುತ್ತಾರೆ. ಆ ಶತ್ರುವನ್ನು ಎದುರಿಸಲು ನಾವು ಏನು ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ. ಅವರಿಗಿಂತ ಇನ್ನೂ ಸ್ವಲ್ಪ ಹೆಚ್ಚಾಗಿ ಕಷ್ಟಪಟ್ಟು ಕೆಲಸದಲ್ಲಿ ಸ್ಥಾನ ಮೌಲ್ಯಗಳನ್ನು ಹೆಚ್ಚಿಸಿಕೊಂಡರೆ ಸಾಕು ಜಯ ಸಾಧಿಸಿದಂತೆ.

 

 

ಆದರೆ ಅಲ್ಲಿಯವರೆಗೆ ಸಮಾಧಾನದಿಂದ ಧೈರ್ಯವಾಗಿ ಇರಬೇಕು. ಧೈರ್ಯವನ್ನು ಹೆಚ್ಚಿಸಿಕೊಳ್ಳಲು ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ಭಯ ಎನ್ನುವುದು ಹತ್ತಿರವೂ ಸುಳಿಯುವುದಿಲ್ಲ .
ಮಂಗಳವಾರ, ಗುರುವಾರ, ಶನಿವಾರದ ದಿನಗಳಲ್ಲಿ ಹನುಮಂತನನ್ನು ಪೂಜಿಸಿದರೆ ಶೀಘ್ರ ಫಲಗಳನ್ನು ಕಾಣಬಹುದು .ಹಲವು ಭಕ್ತರು ಹನುಮಂತನನ್ನು ಆದರ್ಶನೀಯ ದೇವರಾಗಿ ಆರಾಧಿಸುತ್ತಾರೆ. ಕಾರ್ಯಸಿದ್ದಿಯನ್ನು ಪೂರೈಸುವ ಶಕ್ತಿವಂತ ದೇವರು ಈ ಹನುಮಂತನು.

ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿದವರ ಕೋರಿಕೆಗಳನ್ನು ತಪ್ಪದೆ ನೆರವೇರಿಸುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ.

“ಮನೋಜವಂ ಮಾರುತ ತುಲ್ಯವೇಗಂ
ಜಿತೀದ್ರಿಯಂ ಬುದ್ದಿಮತಾಂ ವರಿಷ್ಠಮ್ l
ವಾತಾತ್ಮಜಂ ವಾನರಯೂಧ ಮುಖ್ಯ0
ಶ್ರೀರಾಮದೂತಂ ಶಿರಸಾ ನಮಾಮಿ ll”
ಬುದ್ದಿರ್ಬಲಂ ಯಶೋದೈರ್ಯ0 ನಿರ್ಭಯತ್ವ
ಮರೋಗತಾ l
ಅಜಾಡ್ಯ0 ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ ಭವೇತ್ ll

ಈ ಶ್ಲೋಕವನ್ನು 40 ದಿನಗಳ ಕಾಲ ಭಕ್ತಿ,ಶ್ರದ್ದೆ,ನಿಷ್ಠೆಯಿಂದ ಪಠಿಸಿ , ಪ್ರತಿದಿನ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಮಾಡಿ, ಭಕ್ತಿಯಿಂದ ಬೇಡಿದರೆ ಅಂದುಕೊಂಡ ಕೆಲಸದಲ್ಲಿ ಶತ್ರು ಭಯವಿಲ್ಲದೆ ಎಲ್ಲಾ ಕೆಲಸಗಳು ದಿಗ್ವಿಜಯವಾಗುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top