fbpx
ಸಮಾಚಾರ

ಇಂದು ಕೂಡ ಮಳೆ ಅಡ್ಡಿಯಾದರೆ ಟೀಂ ಇಂಡಿಯಾಗೆ ಡಿಎಲ್​​ಎಸ್​​ ಟಾರ್ಗೆಟ್​ ಹೀಗಿರುತ್ತೆ.

ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆಯ ಅಡಚಣೆಯುಂಟಾಗಿದೆ. ಮೀಸಲು ದಿನವಾದ ಇಂದು ಪಂದ್ಯಕ್ಕೆ ವರುಣನ ಕಾಟ ಎದುರಾದರೆ, ಡಕ್ವರ್ತ್​ ಲೂಯಿಸ್​​​ ಮಾದರಿಯನ್ವಯ (ಡಿಎಲ್​​ಎಸ್​) ಟೀಂ ಇಂಡಿಯಾಗೆ ಎಷ್ಟು ಓವರ್​ಗಳಲ್ಲಿ ಎಷ್ಟು ರನ್​​ ಟಾರ್ಗೆಟ್​​ ದೊರೆಯಲಿದೆ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಈ ರೀತಿ ಇದೆ.

ಓವರ್‌ಗಳ ಕಡಿತವುಂಟಾದ್ದಲ್ಲಿ ಭಾರತಕ್ಕೆ ಟಾರ್ಗೆಟ್ ಇಂತಿರಲಿದೆ:
46 ಓವರ್‌ಗಳಲ್ಲಿ 237
40 ಓವರ್‌ಗಳಲ್ಲಿ 223
35 ಓವರ್‌ಗಳಲ್ಲಿ 209
30 ಓವರ್‌ಗಳಲ್ಲಿ 192
25 ಓವರ್‌ಗಳಲ್ಲಿ 172
20 ಓವರ್‌ಗಳಲ್ಲಿ 148

ಒಂದು ವೇಳೆ ಇಂದೂ ಪೂರ್ತಿ ದಿನ ಮಳೆ ಬಂದರೆ ಗ್ರೂಪ್ ಹಂತದಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ತಂಡ ಫೈನಲ್ ಪ್ರವೇಶಿಸಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ನ್ಯೂಜಿಲೆಂಡ್, 46.1 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಸುರಿಯಲಾರಂಭಿಸಿತು. ಪರಿಣಾಮ ಪಂದ್ಯಕ್ಕೆ ಅಡಚಣೆಯಾಗಿದೆ. ಭಾರತದ ನಿಖರ ದಾಳಿಗೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ನ್ಯೂಜಿಲೆಂಡ್ ಹಿನ್ನಡೆ ಅನುಭವಿಸಿದೆ. ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 67 ರನ್ ಗಳಿಸಿದರು. ಹಾಗೆಯೇ ಕ್ರೀಸಿನಲ್ಲಿರುವ ರಾಸ್ ಟೇಲರ್ 67 ರನ್ ಗಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top