fbpx
ಸಮಾಚಾರ

ರಾಮನ ಬರುವಿಕೆಗೆ ಕಾಯುತ್ತಿದ್ದ ಶಬರಿ ಹಾಗೂ ಅದರ ಹಿಂದೆ ಇರುವ ಈ ಕಥೆಯನ್ನು ತಪ್ಪದೆ ತಿಳ್ಕೊಳ್ಳಿ

ಶಬರಿಯ ಆಶ್ರಮದಲ್ಲಿ ಶ್ರೀ ರಾಮ ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕ್ರೌoಚವೆಂಬ ಅಡವಿಗೆ ಪ್ರವೇಶ ಮಾಡಿದರು. ಸ್ವಲ್ಪ ಸಮಯದಲ್ಲಿಯೇ ತಲೆ ಇಲ್ಲದೆ ಬೆಳೆಯುವ ತೋಳುಗಳನ್ನು ಹೊಂದಿದ ಕಂಬದ ಎಂಬ ರಾಕ್ಷಸನು ರಾಮಲಕ್ಷ್ಮಣರನ್ನು ಹಿಡಿದನು. ರಾಮಲಕ್ಷ್ಮಣರು ತಪ್ಪಿಸಿಕೊಂಡು ಅವನ ತೋಳುಗಳನ್ನು ಕತ್ತರಿಸಿದರು. ಆಗ ಅವನು ನೀವು ಯಾರು ಎಂದು ಕೇಳಿದಾಗ ಶ್ರೀರಾಮ ಲಕ್ಷ್ಮಣರು ಎಂಬ ಉತ್ತರ ಬಂದಾಗ ಕಬಂದನಿಗೆ ಬಹಳ ಸಂತಸವಾಯಿತು.

 

 

ಅವನು ರಾಮನಿಗೆ ತನ್ನ ವೃತ್ತಾಂತವನ್ನು ನಿವೇದಿಸಿದನು .ಶ್ರೀರಾಮ ನಿನ್ನ ದರ್ಶನದಿಂದ ನನ್ನ ಶಾಪ ವಿಮೋಚನೆ ಸಾಧ್ಯವಾಗಿದೆ. ನಾನು ಹಿಂದೆ ದೇವದೂತನ ನಾಗಿದ್ದೆನು. ಶಾಪದಿಂದಾಗಿ ಈ ರೀತಿ ತಲೆಯಿಲ್ಲದ ಶರೀರಿಯಾಗಿದ್ದೆನು. ನೀವು ನನ್ನ ಶರೀರವನ್ನು ಸುಟ್ಟು ಹಾಕಿರಿ. ಜೀವ ಸಹಿತ ಸುಟ್ಟರೆ ನನ್ನ ಶಾಪ ವಿಮೋಚನೆ ಯಾಗುವುದು ಎಂದಾಗ ರಾಮಲಕ್ಷ್ಮಣರು ಅದೇ ರೀತಿ ಸಜೀವ ದಹನ ಮಾಡಿದರು . ಅವನು ತನ್ನ ಮೊದಲಿನ ಶಾಪದಿಂದ ಪ್ರತ್ಯಕ್ಷನಾಗಿ ರಾಮನಿಗೆ ಸೀತೆಯನ್ನು ಹುಡುಕುವ ಕಾರ್ಯಕ್ಕೆ ಅನುಕೂಲವಾಗುವಂತಹ ವಿಷಯ ತಿಳಿಸಿದನು .
ರಾವಣನು ಲಂಕೆಗೆ ಸೀತೆಯನ್ನು ಒಯ್ದಿದ್ದಾನೆ . ನೀವು ಕಿಷ್ಕಿಂದೆಗೆ ಹೋಗಿ ಅಲ್ಲಿನ ರಾಜನಾದ ಕಪಿರಾಜ ವಾಲಿಯನ್ನು ಸೋಲಿಸುವ ಬಗ್ಗೆ ಆಲೋಚಿಸುತ್ತಿರುವ ವಾಲಿಯ ತಮ್ಮ ಸುಗ್ರೀವನ ಸಹಾಯ ಪಡೆಯಿರಿ. ಅವನು ಋಷ್ಯಮೂಕ ಪರ್ವತದಲ್ಲಿ ಇದ್ದಾನೆಂದು ಹೇಳಿ ದೇವದೂತನು ಅದೃಶ್ಯನಾದನು.

ಋಷ್ಯಮೂಕ ಪರ್ವತದ ಕಡೆಗೆ ರಾಮಲಕ್ಷ್ಮಣರು ಹೊರಟಾಗ ಮಾತಂಗ ಶ್ರಮವನ್ನು ನೋಡಿದರು . ಮತಂಗ ಮುನಿಗಳು ಸೇವೆ ಸಲ್ಲಿಸುತ್ತಿದ್ದ ಶಬರಿ ಎಂಬ ಬೇಡರ ಸ್ತ್ರೀ ರಾಮನ ಬರುವಿಕೆಯನ್ನೇ ಕಾಯುತ್ತಿದ್ದಳು .ಪ್ರತಿ ದಿನವೂ ರಾಮನಿಗಾಗಿ ಬೋರೆ ಹಣ್ಣುಗಳನ್ನು ಆರಿಸಿಟ್ಟು ಸಾಯಂಕಾಲವಾದಾಗ ಬೇಸರದಿಂದ ಇರುತ್ತಿದ್ದಳು. ರಾಮಲಕ್ಷ್ಮಣರು ಶಬರಿಯ ಗುಡಿಸಲಿಗೆ ಬಂದಾಗ ಅವಳ ಆನಂದಕ್ಕೆ ಪಾರವೇ ಉಳಿಯಲಿಲ್ಲ.
ರಾಮನು ಬಂದೇ ಬರುತ್ತಾನೆ . ಮತಂಗ ಮುನಿಗಳು ಹೇಳಿದ ವಚನ ಸುಳ್ಳಾಗುವುದಿಲ್ಲವೆಂದು ದೃಢವಾಗಿ ನಂಬಿದ ಶಬರಿ ರಾಮ ಲಕ್ಷ್ಮಣರಿಗೆ ಋಷಿಗಳು ಹೇಳಿದ ಮಾತುಗಳ ಬಗ್ಗೆ ತಿಳಿಸಿದಳು. ಯೋಗಿಗಳಿಗೆ ತಪಸ್ಸಿಗೆ ನಿಲುಕದ ನೀನು ನನಗೆ ಹೇಗೆ ಕಾಣಲು ಸಾಧ್ಯವಾಯಿತು ? ಎಂದು ಕೇಳಿದಳು. ನೀನು ಮಾಡಿದ ಸಜ್ಜನ ಸಹವಾಸವೇ ನಿನಗೆ ಮುಕ್ತಿಗೆ ಕಾರಣವಾಗಿದೆ ಎಂದು ರಾಮನು ವಿವರಿಸಿದನು. ಅಲ್ಪ ಸೇವೆಯನ್ನು ಸ್ವೀಕರಿಸಿ ಎಂದು ಆರಿಸಿಟ್ಟ ಬೋರೆ ಹಣ್ಣುಗಳನ್ನು ಕೊಟ್ಟಾಗ ಪ್ರೀತಿಯಿಂದ ರಾಮಲಕ್ಷ್ಮಣರು ತಿಂದರು .

ಶಬರಿಯು ಮೋಕ್ಷವನ್ನು ಪಡೆದಳು. ಶಬರಿಯ ಆಶ್ರಮದ ಸುತ್ತಲೂ ಕ್ರೂರ ಪ್ರಾಣಿಗಳು ಸಹ ವೈರತ್ವವನ್ನು ಬಿಟ್ಟು ಶಾಂತಿಯಿಂದ ಇದ್ದವು .ಅಲ್ಲಿಂದ ಮುಂದೆ ಪಂಪಾ ಸರೋವರ ಅವರಿಗೆ ಕಂಡಾಗ ಆನಂದವಾಯಿತು.ಆ ಸರೋವರದ ನೀರು ಅತ್ಯಂತ ರುಚಿಯಾಗಿದ್ದು ಸುತ್ತಲೂ ಬಳ್ಳಿಗಳು ಗಿಡಗಳು ಇದ್ದವು . ನೀರಿನಲ್ಲಿ ತಾವರೆ ನೈದಿಲೆ ವಿವಿಧ ರೀತಿಯ ಹೂವುಗಳು ಕೇದಿಗೆ ತಾಳೆ ಮುಂತಾದ ಮರಗಳು ಇದ್ದವು .ಗಿಳಿ ಕೋಗಿಲೆಗಳು ಧ್ವನಿ ಮಾಡಿದರೆ ನವಿಲು ನಾಟ್ಯವಾಡುತ್ತಿತ್ತು.

ಸಜ್ಜನರ ಮನದಂತೆ ತಿಳಿಯಾದ ಪಂಪಾ ಸರೋವರದ ನೀರಿನಲ್ಲಿ ಸ್ನಾನ ಮಾಡಿ , ನೀರು ಕುಡಿದು, ವಿಶ್ರಮಿಸಿದರು. ರಾಮಲಕ್ಷ್ಮಣರು ಹಸಿರಾಗಿರುವ ಸುಂದರವಾದ ಅಡವಿಯನ್ನು ಪ್ರವೇಶಿಸಿದ ರಾಮನಿಗೆ ಸೀತೆಯ ನೆನಪು ಬಹಳವಾಯಿತು. ಲಕ್ಷ್ಮಣನು ಅಣ್ಣನನ್ನು ಸಮಾಧಾನಿಸುತ್ತಿದ್ದನು.ಹೀಗೆ ಋಷ್ಯಮೂಕ ಪರ್ವತದ ಕಡೆಗೆ ಅವರು ಸಾಗಿ ಬಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top