fbpx
ಸಮಾಚಾರ

ಸೆಮಿಫೈನಲ್ ಸೋತರೂ ಫೈನಲ್ ವರೆಗೂ ಇಂಗ್ಲೆಂಡ್ ನಲ್ಲೇ ಉಳಿಯಬೇಕು ಟೀಂ ಇಂಡಿಯಾ: ಕಾರಣವೇನು ಗೊತ್ತಾ?

ವಿಶ್ವಕಪ್​ನ ಮೊದಲ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಸೋಲು ಕಾಣುವ ಮೂಲಕ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಸ್ವದೇಶಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆದರೆ, ಅವರು ಭಾರತಕ್ಕೆ ಬರುವುದು ಇನ್ನೂ ತಡವಾಗಲಿದೆ ಎಂದು ಬಿಸಿಸಿಐ ಹೇಳಿದೆ.

 

 

ಶೆಡ್ಯೂಲ್ ಪ್ರಕಾರ ಮೊದಲ ಸೆಮಿಫೈನಲ್​ ಪಂದ್ಯ ಮಂಗಳವಾರ ಮುಗಿಯಬೇಕಿತ್ತು ಆದರೆ ಮಂಗಳವಾರ ಮಳೆ ಬಂದಿದ್ದರಿಂದ ಪಂದ್ಯ ಬುಧವಾರ ಮುಕ್ತಯವಾಗಿತ್ತು. ಹಾಗಾಗಿ ಟೀಂ ಇಂಡಿಯಾದ ಆಟಗಾರರಿಗೆ ಭಾರತಕ್ಕೆ ಮರಳಲು ಗುರುವಾರ ಟಿಕೆಟ್​ ಬುಕ್​ ಮಾಡಲಾಗಿದೆ. ತಕ್ಷಣಕ್ಕೆ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ತಂಡದ ಎಲ್ಲಾ ಆಟಗಾರರು ಜುಲೈ 14 ರಂದು ಭಾನುವಾರ ಲಂಡನ್​ನಿಂದ ಮುಂಬೈಗೆ ಹೊರಡಲಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಕಂಡ ಸೋಲಿನ ಹತಾಶೆಯಲ್ಲಿರುವ ಟೀಂ ಇಂಡಿಯಾ ಆಟಗಾರರು ಆದಷ್ಟು ಬೇಗ ಅಲ್ಲಿಂದ ಹೊರಡಲು ರೆಡಿಯಾಗಿದ್ದರು. ಆದರೆ, ಸರಿಯಾದ ಸಮಯಕ್ಕೆ ವಿಮಾನ ಟಿಕೆಟ್​ ಸಿಗದೇ ಸಮಸ್ಯೆಯಾಗಿರುವುದರಿಂದ ಅವರು ಆಗಮಿಸುವುದು ಸ್ವಲ್ಪ ತಡವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top