fbpx
ಸಮಾಚಾರ

ಪಾನೀಪುರಿ ತಯಾರಿಸಲು ದನದ ಕೊಬ್ಬು, ಟಾಯ್ಲೆಟ್ ಕ್ಲೀನರ್ ಬಳಕೆ- ಬಯಲಾಯ್ತು ಬೆಚ್ಚಿ ಬೀಳಿಸುವ ಸತ್ಯ

ಬೀದಿ ಬದಿಯಲ್ಲಿ ಸಿಗುವಂತಹ ಅತಿ ಹೆಚ್ಚು ಫಾಸ್ಟ್ ಫುಡ್ ಜೊತೆಗೆ ಪಾನಿಪುರಿಯನ್ನು ಹೋಲಿಸಿದಾಗ ಪಾನಿಪುರಿಯನ್ನು ತಿನ್ನುವ ಜನರೇ ಹೆಚ್ಚು. ಯಾಕೆಂದರೆ ಪಾನಿಪುರಿ ಇರುವಂತಹ ಆ ತರದ ಒಂದು ರುಚಿ. ಆದರೆ ಈ ಲೇಖವನ್ನು ಇದನ್ನು ಓದಿದ ಬಳಿಕ ನಿಮಗೆ ಪಾನಿಪುರಿ ತಿನ್ನಬೇಕು ಅಥವಾ ತಿನ್ನಬಾರದು ಎಂದು ನಿಮಗೆ ನೀವೇ ನಿರ್ಧಾರ ಮಾಡುತ್ತೀರಾ!

ಖಾಸಗಿ ಸುದ್ದಿವಾಹಿನಿಯೊಂದು ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ‘ಪಾನಿಪುರಿ’ ರಹಸ್ಯವನ್ನು ಬಯಲು ಮಾಡಲಾಗಿದೆ.. ಕೇವಲ ಹಣವನ್ನೇ ಟಾರ್ಗೆಟ್ ಮಾಡಿರುವ ವ್ಯಾಪಾರಿಗಳು ವಿಷಕಾರಿ ಪದಾರ್ಥಗಳನ್ನು ಬಳಸಿ ಪಾನಿಪುರಿ ತಯಾರಿಸುತ್ತಿದ್ದಾರೆ ಎಂಬ ಸತ್ಯವನ್ನು ರಹಸ್ಯಕಾರ್ಯಕರಣೆಯಲ್ಲಿ ಬಯಲಿಗೆಳೆಯಲಾಗಿದೆ. ಪಾನಿಪೂರಿ ಮಸಾಲೆ ಮತ್ತು ಪಾನಿ ತಯಾರು ಮಾಡಲು ದನದ ಕೊಬ್ಬು, ಸಿಗಡಿ ಪುಡಿ, ಶೌಚಾಲಯವನ್ನು ಶುದ್ಧಗೊಳಿಸಲು ಆ್ಯಸಿಡ್‌, ವಿನೆಗರ್, ಕ್ಯಾನ್ಸರ್ ಕಾರಕ ಅಪಾಯಕಾರಿ ಹಸಿರು ಬಣ್ಣ ಇನ್ನಿತರ ಅಪಾಯಕಾರಿ ಪದಾರ್ಥಗಳನ್ನ ರುಚಿಗಾಗಿ ಬಳಸಲಾಗುತ್ತಿದೆ ಎಂಬ ಬೆಚ್ಚಿ ಬೀಳಿಸುವ ಸತ್ಯವನ್ನು ಬಯಲು ಮಾಡಲಾಗಿದೆ. ಬಹಿರಂಗವಾಗಿದೆ.

ಪಾನಿಪೂರಿಗೆ ಬೇಕಾಗುವ ಮಸಾಲೆ ಮತ್ತು ಪಾನಿ ತಯಾರಿಸುವ ಜಾಗವಂತೂ ಕೊಳಕಿನಲ್ಲಿ ಸಾರ್ವಜನಿಕ ಶೌಚಾಲಯವನ್ನು ಮೀರಿಸುವಂತಿದೆ. ಶೌಚಾಲಯಕ್ಕೆ ಬಳಸುವ ಬಕೆಟ್‌ಗಳಲ್ಲಿ ಪಾನಿ ತಯಾರಿಕೆ, ಹಳೆಯ ಗೋಣಿಗಳು ಚೀಲಗಳನ್ನು ಮುಚ್ಚಿ ಆಲೂಗಡ್ಡೆಯ‌ ಬೇಯಿಸುವುದು, ಕೊಳಕು ನೀರಿನಲ್ಲಿ ಪಾನಿ ತಯಾರಿಕೆ, ಗಲೀಜು ತುಂಬಿರುವ ನೆಲ ಹೀಗೆ ದೊಡ್ಡ ಪಟ್ಟಿಗಳೇ ಇವೆ‌. ಇವೆಲ್ಲವೂ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿವೆ.

ರುಚಿಯಾಗಿದೆ ಅಂತ ನಾವು ಮಣ್ಣನ ತಿನ್ನುವುದಕ್ಕೆ ಆಗುವುದಿಲ್ಲ, ನಮ್ಮ ಆಹಾರ ರುಚಿಯಾಗಿ ಇಲ್ಲದಿದ್ದರೂ ಕೂಡ ಶುದ್ಧವಾಗಿ ಇರಬೇಕಾದುದು ತುಂಬಾ ಅಗತ್ಯ. ಹಾಗಂತ ನಾವೇನೂ ಪಾನಿಪುರಿಯನ್ನು ತಿನ್ನಲೇಬೇಡಿ ಎಂದು ಹೇಳುತ್ತಿಲ್ಲ. ಅದನ್ನು ನೀವು ಮನೆಯಲ್ಲೇ ಕೂಡ ತಯಾರು ಮಾಡಿಕೊಂಡು ತಿನ್ನಬಹುದು. ಆದರೆ ಯಾವುದೇ ಕಾರಣಕ್ಕೂ ಕೊಳಕು ಬರುವಂತಹ ಇಂತಹ ಪಾನಿಪುರಿಯಿಂದ ಆದಷ್ಟು ದೂರ ಇರಿ. ಇದನ್ನು ತಿನ್ನುವುದರಿಂದ ನೀವೇ ದುಡ್ಡು ಕೊಟ್ಟು ಅನಾರೋಗ್ಯ್ವವನ್ನು ಕೊಂಡುಕೊಳ್ಳುವಂತೆ ಆಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top