fbpx
ಸಮಾಚಾರ

ಟಿಕ್‌ಟಾಕ್‌ ಲೋಕಕ್ಕೆ ಕಾಲಿಟ್ಟ ಕಿರಿಕ್ ಹುಡುಗಿ- ಇಲ್ಲಿ ಕನ್ನಡಿಗರ ಕೋಪಕ್ಕೆ ಗುರಿಯಾದ ರಶ್ಮಿಕಾ ಮಂದಣ್ಣ.

ದಕ್ಷಿಣ ಭಾರತ ಚಿತ್ರಗಳಲ್ಲಿ ಬುಸ್ಯಿಯಾಗಿರುವ ಕನ್ನಡಿತಿ ನಟಿ ರಶ್ಮಿಕಾ ಮಂದಣ್ಣ ಟಿಕ್ ಟಾಕ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಟಿಕ್ ಟಾಕ್ ಗೆ ಮನ ಸೋತಿರುವ ರಶ್ಮಿಕಾ ಮಂದಣ್ಣ ಹೊಸ ಖಾತೆ ತೆರೆಯುವ ಮೂಲಕ ಗಮನ ಸೆಳೆದಿದ್ದಾರೆ. Iamrashmika ಅವರ ಟಿಕ್ ಟಾಕ್ ಹ್ಯಾಂಡಲ್ ಆಗಿದೆ.

‘ಟಿಕ್ ಟಾಕ್’ ನ ಹೊಸ ಖಾತೆ ತೆರೆದಿರುವ ನಟಿ ತಮ್ಮ ಮುಂಬರುವ ಚಿತ್ರ ‘ಡಿಯರ್ ಕಾಮ್ರೆಡ್’ ಬಗೆಗೆ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇಷ್ಟೂ ದಿನ ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಮೂಲಕ ಅಭಿಮಾನಿಗಳೊಡನೆ ಸಂಪರ್ಕದಲ್ಲಿದ್ದ ನಟಿ ರಶ್ಮಿಕಾ ಈಗ ಟಿಕ್ ಟಾಕ್’ ಗೆ ಲಗ್ಗೆ ಇಟ್ಟಿರುವುದು ಅವರ ಅಭಿಮಾನಿಗಳಿಗೆ ಡಬಲ್ ಖುಷಿ ತಂದಿದೆ.

ತಮ್ಮ ‘ಡಿಯರ್ ಕಾಮ್ರೆಡ್’ ಸಿನಿಮಾದ ಎಲ್ಲ ಅಪ್ ಡೇಟ್ ಗಾಗಿ ತಮ್ಮ ಟಿಕ್ ಟಾಕ್ ಖಾತೆಯನ್ನ ಫಾಲೋ ಮಾಡಿ ಎಂದು ಅಭಿಮಾನಿಗಳಿಗೆ ರಶ್ಮಿಕಾ ತಿಳಿಸಿದ್ದಾರೆ. ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಕಾಂಬಿನೇಶನ್ ನ ‘ಡಿಯರ್ ಕಾಮ್ರೆಡ್’ ಚಿತ್ರದ ಜುಲೈ 26 ರಂದು ಬಿಡುಗಡೆಯಾಗಲಿದೆ. ಆದರೆ ವೀಡಿಯೋದಲ್ಲಿ ರಶ್ಮಿಕಾ ಇಂಗ್ಲೀಷ್ ನಲ್ಲಷ್ಟೇ ಮಾತನಾಡಿದ್ದು ಕನ್ನಡಿಗರಿಗೆ ಬೇಸರ, ಆಕ್ರೋಶ ಮೂಡುವಂತೆ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top