fbpx
ಸಮಾಚಾರ

ಧೋನಿಯನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ಕಾರಣ ಕೊಟ್ಟ ರವಿಶಾಸ್ತ್ರಿ!

ಪ್ರಸಕ್ತ ವಿಶ್ವಕಪ್ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್, ಬ್ಯಾಟ್ಸ್ ಮ್ಯಾನ್ ಎಂಎಸ್ ಧೋನಿ ಅವರು ಬ್ಯಾಟ್ ಮಾಡಿದ ಕ್ರಮಾಂಕ ಈಗ ಚರ್ಚೆಗೆ ಕಾರಣವಾಗಿದೆ. ಸೆಮಿಫೈನಲ್‌ನಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಇಳಿಸೋದೇ ತಂಡದ ತಂತ್ರವಾಗಿತ್ತು ಎಂದು ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಸಮರ್ಥಿಸಿಕೊಂಡಿದ್ದಾರೆ.

ಭಾರತ ಸೋಲುತ್ತಿದ್ದಂತೆ ಕೆಲವರು ಧೋನಿಯನ್ನು ಟೀಕಿಸಲು ಆರಂಭಿಸಿದ್ದರು. ಮತ್ತೆ ಕೆಲವರು ಧೋನಿಯನ್ನು 5ನೇ ಕ್ರಮಾಂಕದಲ್ಲೇ ಬ್ಯಾಟಿಂಗ್​ಗೆ ಕಳುಹಿಸಬೇಕಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಿದ್ದು ತಪ್ಪಾಯ್ತು ಅಂತ ಕೆಂಡಮಂಡಲರಾಗಿದ್ದರು. ಇದೀಗ ರವಿಶಾಸ್ತ್ರಿ ಧೋನಿಯನ್ನು 7ನೇ ಸ್ಲಾಟ್​ನಲ್ಲಿ ಕಣಕ್ಕಿಳಿಸಿದ್ದು ಯಾಕಂತ ಹೇಳಿದ್ದಾರೆ.

ಅನೇಕ ಕ್ರಿಕೆಟ್ ಪರಿಣಿತರು ನಿರ್ಣಾಯಕ ಪಂದ್ಯದಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಇಳಿಸಿದ್ದಕ್ಕೆ ಅಸಮಾಧಾನ ತೋರಿಕೊಂಡಿದ್ದರು. ಧೋನಿಗೆ ಸೂಕ್ತ ಬ್ಯಾಟಿಂಗ್ ಕ್ರಮಾಂಕ ನೀಡದಿದ್ದುದೇ ಸೆಮಿಫೈನಲ್‌ನಲ್ಲಿನ ದೊಡ್ಡ ಪ್ರಮಾದ ಎಂದು ಬಹಳಷ್ಟು ಮಂದಿ ಅಭಿಪ್ರಾಯಿಸಿದ್ದರು. ಈಗ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿರುವ ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ, ವಿಶ್ವಕಪ್‍ನಲ್ಲಿ ಆರಂಭಿಕ ವೈಫಲ್ಯ ಕಂಡು ಅಲ್ಪ ಮೊತ್ತಕ್ಕೆ ಕುಸಿದ ಭಾರತ ತಂಡಕ್ಕೆ ಕೊನೆಯ ಓವರ್‍ ಗಳಲ್ಲಿ ಧೋನಿ ಅವರ ಅನುಭವದ ಅವಶ್ಯಕತೆ ಇತ್ತು. ಅದ್ದರಿಂದ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತಾಡಿರುವ ಶಾಸ್ತ್ರಿ,”ಧೋನಿ ವಿಕೆಟನ್ನು ಆರಂಭದಲ್ಲೇ ಕಳೆದುಕೊಳ್ಳೋಕೆ ಯಾರೂ ಬಯಸಿರಲಿಲ್ಲ. ಯಾಕಂದ್ರೆ ಧೋನಿ ಅದ್ಭುತ ಫಿನಿಶರ್. ಅವರ ಅನುಭವ ಇನ್ನಿಂಗ್ಸ್​ ಕೊನೆಯಲ್ಲಿ ನೆರವಿಗೆ ಬರಲಿದೆ. ಅವರನ್ನು 7ನೇ ಕ್ರಮಾಂಕದಲ್ಲಿ ಬಳಸಿಕೊಳ್ಳೋದ್ರಲ್ಲಿ ತಪ್ಪಿಲ್ಲ ಅಂತ ಇಡೀ ಟೀಮ್ ನಿರ್ಧಾರ ಮಾಡಿತ್ತು” ಎಂದಿದ್ದಾರೆ.

ಈ ಯೋಜನೆಯೂ ಒಂದು ಹಂತದಲ್ಲಿ ಕ್ಲಿಕ್ ಆಗಿತ್ತು. ಧೋನಿ ಉತ್ತಮವಾಗಿಯೇ ಆಡಿದ್ರು. ಪರಿಸ್ಥಿತಿಯನ್ನು ಬದಲಾಯಿಸಿದ್ದರು. ದುರದೃಷ್ಟಕರವಾಗಿ ಧೋನಿಯೇನಾದರೂ ರನ್ ಔಟ್ ಆಗದೆ ಇದ್ದರೆ, ಆತನ ತಲೆಯಲ್ಲಿ ಕೊನೇಗಳಿಗೆಯ ಲೆಕ್ಕಾಚಾರ ಇದ್ದೇಇತ್ತು. ಪಂದ್ಯಗಳ ವೇಳೆ ಯಾವ ಚೆಂಡಿಗೆ ಹೊಡೆಯಬೇಕು, ಎಷ್ಟು ದೂರ ಹೊಡೆಯಬೇಕು ಎಂಬಿತ್ಯಾದಿ ವಿಚಾರಗಳು ದೋನಿ ತಲೆಯಲ್ಲಿ ಓಡಾಡುತ್ತಿದ್ದನ್ನು ನೀವು ಈ ಹಿಂದೆ ಆತನ ಮುಖಚಹರೆಯ ಮೂಲಕವೇ ಗಮನಿಸಿರಬಹುದು. ಕೊನೆಯ ಓವರ್​ನಲ್ಲಿ ಜಿಮ್ಮಿ ನೀಶಮ್​ ಬೌಲಿಂಗ್ ಮಾಡಲಿದ್ದು, ಆ ಓವರ್​​ಗೆ ಎಷ್ಟು ರನ್ ಬಾಕಿ ಉಳಿಸಿಕೊಳ್ಳ ಬೇಕೆನ್ನುವುದರ ಲೆಕ್ಕಾಚಾರವನ್ನು ಮಾಡಿಟ್ಟುಕೊಂಡಿದ್ದರು. ಅದೇ ರೀತಿ ಆಡ್ತಿದ್ರು. ಆದರೆ, ಅವರು ರನ್​ಔಟ್​ ಆಗಿದ್ದು ದುರದೃಷ್ಟಕರ ಎಂದು ಶಾಸ್ತ್ರಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top