fbpx
ಸಮಾಚಾರ

ಮೋದಿ ಸರ್ಕಾರದಿಂದ 2 ವರ್ಷದಲ್ಲಿ ಹೊಸದಾಗಿ 3.81 ಲಕ್ಷ ಹುದ್ದೆ ಸೃಷ್ಟಿ.

ದೇಶಾದ್ಯಂತ ಉದ್ಯೋಗ ಕೊರತೆಯ ಆರೋಪಗಳ ಬೆನ್ನಲ್ಲೇ, ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 3.81 ಲಕ್ಷ ಹುದ್ದೆಗಳನ್ನು ಸೃಷ್ಟಿಸಿದೆ. ಎರಡು ವರ್ಷಗಳಲ್ಲಿ ಕೇಂದ್ರ ಸರಕಾರವು ಸುಮಾರು 3.81 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು 2019-20ರ ದಾಖಲೆಗಳಲ್ಲಿ ಮಾಹಿತಿ ಒದಗಿಸಲಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ದೇಶದಲ್ಲಿ ನಿರುದ್ಯೋಗ ಹೆಚ್ಚಿಸುತ್ತಿದೆ ಎಂದು ಕಾಂಗ್ರೆಸ್‌ ಮತ್ತು ಇತರೆ ವಿರೋಧ ಪಕ್ಷಗಳು ದೂರುತ್ತಲೇ ಬಂದಿದ್ದವು. 2016ರ ನಗದು ಅಮಾನ್ಯೀಕರಣದ ಬಳಿಕ ಈ ಕೂಗು ಹೆಚ್ಚಾಗಿತ್ತು. ಆದರೆ, ಬಜೆಟ್‌ ದಾಖಲೆಗಳ ಪ್ರಕಾರ ಕೇಂದ್ರ ಸರಕಾರವು, ವಿವಿಧ ಇಲಾಖೆಗಳು, ಸಚಿವಾಲಯಗಳ ಅಧೀನ ಸಂಸ್ಥೆಗಳು ಸೇರಿದಂತೆ ಒಟ್ಟಾರೆ ಸರಕಾರಿ ಉದ್ಯೋಗಗಳ ಲೆಕ್ಕವು ಹೆಚ್ಚಾಗಿರುವುದನ್ನು ಬಜೆಟ್‌ ದಾಖಲೆಗಳು ಬಹಿರಂಗಪಡಿಸಿವೆ.

2017ರ ಮಾರ್ಚ್ 1ರಂದು ಸರಕಾರಿ ಇಲಾಖೆಗಳ ಒಟ್ಟು ಉದ್ಯೋಗಿಗಳ ಸಂಖ್ಯೆ 32,38,397 ಆಗಿತ್ತು. 2019ರಲ್ಲಿ ಅದೇ ದಿನಾಂಕದಂದು ಅದು 36,19,596 ಆಗಿದ್ದು, 3,81,199ರಷ್ಟು ಏರಿಕೆಯನ್ನು ಕಂಡಿರುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಈ ಪೈಕಿ ಅತಿ ಹೆಚ್ಚು ಎಂದರೆ ರೈಲ್ವೆಯಲ್ಲಿ 98,999, ಪೊಲೀಸ್‌ ಇಲಾಖೆಯಲ್ಲಿ 80,000, ಪರೋಕ್ಷ ತೆರಿಗೆ ಇಲಾಖೆಯಲ್ಲಿ 53,000 ಹಾಗೂ ನೇರ ತೆರಿಗೆ ಇಲಾಖೆಯಲ್ಲಿ 29,935, ರಕ್ಷಣಾ (ಸಿವಿಲ್‌) ಇಲಾಖೆಯಲ್ಲಿ 46,347, ಅಣು ಇಂಧನ ಶಕ್ತಿ ಇಲಾಖೆಯಲ್ಲಿ 10,000, ಟೆಲಿಕಾಂ ಇಲಾಖೆಯಲ್ಲಿ 2250, ನೀರಾವರಿ ಸಂಪನ್ಮೂಲ ಇಲಾಖೆಯಲ್ಲಿ 3981, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ 7,743, ಗಣಿಗಾರಿಕೆ ಸಚಿವಾಲಯದಲ್ಲಿ 6338, ಬಾಹ್ಯಾಕಾಶ ಇಲಾಖೆಯಲ್ಲಿ 2920, ಸಿಬ್ಬಂದಿ ಆಡಳಿತ ಸುಧಾರಣೆ ಮತ್ತು ಪಿಂಚಣಿ ಸಚಿವಾಲಯದಲ್ಲಿ 2056, ವಿದೇಶಾಂಗ ಸಚಿವಾಲಯದಲ್ಲಿ 1833 ಹುದ್ದೆಗಳನ್ನು ಸೃಷ್ಟಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top