fbpx
ಸಮಾಚಾರ

ಮತ್ತೊಮ್ಮೆ ನಿಜವಾಯ್ತು ‘ಲಾರ್ಡ್ಸ್’ ಟಾಸ್ ಭವಿಷ್ಯ.

ನೆನ್ನೆ ಮುಕ್ತಾಯವಾದ 2019ರ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯಕ್ಕೆ ಕ್ರಿಕೆಟ್ ಕಾಶಿ ಎಂದೇ ಹೆಸರಾದ ಲಾರ್ಡ್ಸ್ ಮೈದಾನ ಸಾಕ್ಷಿಯಾಗಿತ್ತು. ಈ ಮೈದಾನದಲ್ಲಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಗೆಲ್ಲುವುದಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ.

ಹೌದು, ಲಂಡನ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಫೈನಲ್‌ನಲ್ಲಿ ಟಾಸ್‌ ಗೆಲ್ಲುವ ತಂಡ ಸೋಲುತ್ತದೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಟಾಸ್‌ ಗೆದ್ದ ನ್ಯೂಝಿಲ್ಯಾಂಡ್, ಎಷ್ಟೇ ಹೋರಾಡಿದರೂ ಕೊನೆಗೂ ಗೆಲ್ಲಲಿಲ್ಲ. 1975, 1979, 1983, 1999ರ ವಿಶ್ವಕಪ್‌ ಫೈನಲ್‌ಗೂ ಲಾರ್ಡ್ಸ್ ಕ್ರೀಡಾಂಗಣವೇ ಆತಿಥ್ಯ ನೀಡಿವಹಿಸಿತ್ತು. ಆ ಪಂದ್ಯಗಳಲ್ಲೂ ಕೂಡ ಟಾಸ್‌ ಗೆದ್ದಿದ್ದ ತಂಡಗಳು ಸೋತಿದ್ದವು. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ.

ಅಂದಹಾಗೆ ನ್ಯೂಜಿಲೆಂಡ್ ನೀಡಿದ 241 ರನ್​ ಗುರಿ ಬೆನ್ನತ್ತಿದ ಇಂಗ್ಲೆಂಡ್​ ತಂಡ 241 ರನ್​ ಗಳಿಸಿ ಆಲೌಟಾಯಿತು. ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ಸೂಪರ್​ ಓವರ್​ ಆಡಿಸಲಾಯಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ 15 ರನ್ ಪೇರಿಸಿತು. ನಂತರ ಕಿವೀಸ್ ಕೂಡ 15 ರನ್ ಬಾರಿಸಿತು. ಸೂಪರ್ ಓವರ್​ನಲ್ಲಿ ಪಂದ್ಯ ಟೈ ಆದರೂ, ಹೆಚ್ಚಿನ 8 ಬೌಂಡರಿ (24-16) ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಪಟ್ಟವೇರಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top