fbpx
ಸಮಾಚಾರ

‘ಕಮ್ ಬ್ಯಾಕ್ ಜಿಟಿಡಿ’ ಪೋಸ್ಟ್ ಬೆನ್ನಲ್ಲೇ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ ಜಿಟಿ ದೇವೇಗೌಡ.

ಜೆಡಿಎಸ್​ ನಾಯಕ, ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಅವರು ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ದೇವೇಗೌಡ ಪರ ಈ ರೀತಿಯಾದ ಅಪಪ್ರಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಮೋದಿ ಕಾರ್ಯ ಶ್ಲಾಘನೆ ಮಾಡುತ್ತಿದ್ದ ಜಿಟಿ ದೇವೇಗೌಡ ಅವರು ಮತ್ತೆ ಮರಳಿ ಬಿಜೆಪಿಗೆ ಸೇರುತ್ತಿದ್ದಾರೆ ಎಂಬ ಪೋಸ್ಟ್​ಗಳು ಫೇಸ್​ಬುಕ್​ನಲ್ಲಿ ಹರಿದಾಡುತ್ತಿವೆ.

 

 

ಈ ನಡುವೆ ಜಿ.ಟಿ.ದೇವೇಗೌಡ ಅವರು ಕಲಾಪ ಪ್ರಾರಂಭವಾಗುವುದಕ್ಕೂ ಮುನ್ನವೇ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ನಾಯಕರಾದ ಎಸ್.ಆರ್.ವಿಶ್ವನಾಥ್, ಶ್ರೀರಾಮುಲು ಜೊತೆ ಮಾತುಕತೆಯಲ್ಲಿ ತೊಡಗಿದ್ದರು.

ರಾಜ್ಯದಲ್ಲಿ ಶಾಸಕರ ಸರಣಿ ರಾಜೀನಾಮೆಗೆ ಬಿಜೆಪಿ ನಾಯಕರು ಕಾರಣವಲ್ಲ ಎಂದು ಬಿಜೆಪಿ ಪರ ಮೃದು ಧೋರಣೆ ತಾಳಿದ್ದ ಜಿಟಿ ದೇವೇಗೌಡ ಬಿಜೆಪಿಗೆ ಹೋಗಲಿದ್ದಾರೆ ಎಂಬ ಅನುಮಾನ ಹುಟ್ಟು ಹಾಕಿತ್ತು. ಆದರೆ, ತಾವು ಬಿಜೆಪಿಗೆ ಹೋಗುವುದಿಲ್ಲ. ಜೆಡಿಎಸ್​ ಪಕ್ಷದಲ್ಲಿಯೇ ಇರಲಿದ್ದೇನೆ ಎಂದು ಈ ಬಗ್ಗೆ ಜಿಟಿಡಿ ಸ್ಪಷ್ಟಪಡಿಸಿದ್ದರು.

ಶಾಸಕರ ಈ ರಾಜೀನಾಮೆ ಹಿಂದೆ ಬಿಜೆಪಿ ಪಾತ್ರವಿಲ್ಲ ಎನ್ನುವ ಮೂಲಕ ಕಮಲ ನಾಯಕರ ಪರ ಬ್ಯಾಟಿಂಗ್​ ನಡೆಸಿದ್ದರು. ಇವರ ಈ ನಡೆಯನ್ನು ಗಮನಿಸಿರುವ ಕೆಲವು ಬಿಜೆಪಿ ಕಾರ್ಯಕರ್ತರು ಈಗ ಅವರನ್ನು ಮತ್ತೆ ಬಿಜೆಪಿಗೆ ಬರುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನ ನೀಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top