fbpx
ಸಮಾಚಾರ

ಪಂಜಾಬ್ ನವರು ಇಲ್ಲಿ ಕೆಲಸ ತೆಗೆದುಕೊಂಡಂತೆ ಕನ್ನಡಿಗರು ಪಂಜಾಬ್ ನಲ್ಲೂ ಕೆಲಸ ತೆಗೆದುಕೊಳ್ಳಬಹುದು ಆಲ್ವಾ?

ವರ್ಷಾಂತರಗಳಿಂದ ಕನ್ನಡಿಗರನ್ನು ಕಾಡುತ್ತಿದ್ದ ಐಬಿಪಿಎಸ್ ಮೋಸದ ಸಮಸ್ಯೆಗೆ ಸದ್ಯ ಸಣ್ಣ ಗೆಲುವು ಸಿಕ್ಕಿದೆ. ಹೌದು ಐಬಿಪಿಎಸ್ ಪರೀಕ್ಷೆಯನ್ನು ಕನ್ನಡ ಸೇರಿದಂತೆ ಉಳಿದ ಪ್ರಾದೇಶಿಕ ಭಾಷೆಗಳಲ್ಲೂ ನಡೆಸುವುದಾಗಿ ಸಂಸತ್ ನಲ್ಲಿ ಘೋಷಿಸಲಾಗಿದೆ. ಆದರೆ ಇದರಿಂದ ಸಮಸ್ಯೆ ಪೂರ್ಣ ಬಗೆಹರಿದಂತೆ ಅಲ್ಲ.. ಇದರಿಂದ ಸ್ಥಳೀಯರಿಗೆ ಕೆಲಸದಲ್ಲಿ ಆದ್ಯತೆ ನೀಡುವುದಂತೆ ಅಲ್ಲ. ಹೀಗಿದ್ದರೂ ಯುವ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಗೆ ಪರ- ವಿರೋಧಗಳು ಕೇಳಿಬರುತ್ತಿವೆ.

 

 

ಐಬಿಪಿಎಸ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಘೋಷಿಸುತ್ತಿದ್ದಂತೆ ಇತ್ತ ಮಾಧ್ಯಮದವರ ಜೊತೆ ಮಾತನಾಡಿದ ತೇಜಸ್ವಿ ಸೂರ್ಯ. ಈ ನಿರ್ಧಾರದಿಂದ ಎಲ್ಲರಿಗೂ ಸಹಾಯವಾಗುತ್ತದೆ ಎಂದು ಹೇಳಿದರು.

ಪಂಜಾಬ್ ನವರು ಪಂಜಾಬಿಯಲ್ಲಿ ಪರೀಕ್ಷೆ ಬರೆದು ಕರ್ನಾಟಕದಲ್ಲಿ ಕೆಲಸ ತೆಗೆದುಕೊಳ್ಳುತ್ತಾರೆ, ಇದರಿಂದ ಕಂನಾಡಿಗರಿಗೆ ಅನ್ಯಾಯ ಆದಂತೆ ಅಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ ಸೂರ್ಯ ” ಕನ್ನಡಿಗರಿಗೂ ಪಂಜಾಬ್ ನಲ್ಲಿ ಕೆಲಸ ಮಾಡುವ ಅವಕಾಶ ಇದೆಯಲ್ಲಾ, ನಮ್ಮವರೂ ಕೂಡ ಅಲ್ಲಿನ ಜನರ ಜೊತೆ ಕಾಂಪಿಟೇಷನ್ ಮಾಡಬಹುದು. ಸ್ಥಳೀಯರಿಗೆ ಸಹಾಯವಾಗಲಿ ಎಂದು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ” ಎಂದು ಹೇಳಿದರು..

ತೇಜಸ್ವಿ ಸೂರ್ಯ ಹೇಳಿಕೆಗೆ ಕೆಲವರು ಬೆಂಬಲ ಸೂಚಿಸುತ್ತಿದ್ದರೇ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮ್ ಊರಿನ ಕೆಲಸ ಬೇರೆಯವರಿಗೆ ಕೊಟ್ಟು ನಾವ್ ಯಾಕೆ ಪಂಜಾಬ್ ಗೆ ಹೋಗೋಣ ಹೇಳಿ? ಎಂಬ ಅಭ್ಭಿಪ್ರಾಯಗಳು ವ್ಯಕ್ತವಾಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top