fbpx
ಸಮಾಚಾರ

ಇಂದು ಕೇತುಗ್ರಸ್ತ ಚಂದ್ರ ಗ್ರಹಣ ,ಈ ದಿನ 12 ರಾಶಿಯ ಪ್ರೀತಿಯ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಗೊತ್ತಾ ?ತಿಳ್ಕೊಳ್ಳಿ

ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.
ಗ್ರಹಣದ ಅವಧಿ: 16/07/2019 – 17/07/2019
ಗ್ರಹಣ ಸ್ಪರ್ಶ ಕಾಲ : ಮಧ್ಯ ರಾತ್ರಿ 01-30 am
ಗ್ರಹಣ ಮಧ್ಯ ಕಾಲ : ಮುಂಜಾನೆ 03-00 am
ಗ್ರಹಣ ಮೋಕ್ಷ ಕಾಲ : ಮುಂಜಾನೆ 04-30 am

ಪ್ರೀತಿಯ ಜೀವನದ ಮೇಲೆ ಈ ಕೇತುಗ್ರಸ್ತ ಖಗ್ರಾಸ ಚಂದ್ರ ಗ್ರಹಣ ಪ್ರತಿಯೊಂದು ರಾಶಿಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ .

ಜುಲೈ 16 ನೇ ತಾರೀಖಿನಂದು ರಾತ್ರಿ ಮಂಗಳವಾರದ ದಿನ ಗುರು ಪೌರ್ಣಮಿಯ ದಿನವಾಗಿದ್ದು, ಅದೇ ದಿನ ರಾತ್ರಿ 01-30 am ಸರಿಯಾಗಿ ಈ ಕೇತುಗ್ರಸ್ಥ ಚಂದ್ರ ಗ್ರಹಣ ಸಂಭವಿಸಲಿದೆ. ಜಗತ್ತಿನ ಅನೇಕ ಭಾಗಗಳಲ್ಲಿ ಚಂದ್ರಗ್ರಹಣವು ಗೋಚರಿಸಲಿದೆ. ಆದರೆ ಎಲ್ಲರ ಮೇಲೂ ಇದು ಪ್ರಭಾವ ಬೀರಲಿದೆಯಂತೆ. ವಿಶೇಷವಾಗಿ ಪ್ರೇಮ ಜೀವನದ ಮೇಲೆ ಇದರ ಪ್ರಭಾವ ಹೆಚ್ಚಾಗಿ ಇರಲಿದೆಯಂತೆ .ಪ್ರತಿಯೊಂದು ರಾಶಿಯ ಪ್ರೀತಿ ಜೀವನದ ಮೇಲೂ ಕೂಡ ಈ ಚಂದ್ರಗ್ರಹಣದ ಪ್ರಭಾವ ಬೇರೆ ಬೇರೆ ಇರುತ್ತದೆ.

ಮೇಷ ರಾಶಿ 

 

ಚಂದ್ರಗ್ರಹಣದ ವೇಳೆ ಈ ರಾಶಿಯವರು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಯಾವುದೇ ಮಾತಿಗೆ ಹಠಾತ್ ಉತ್ತರ ನೀಡುವ ಪ್ರಯತ್ನ ಮಾಡಬೇಡಿ. ಪ್ರೇಮ ಸಂಬಂಧದಲ್ಲಿ ಮೊದಲೇ ಬಿರುಕು ಮೂಡಿದರೆ ಅದಕ್ಕೆ ಹೆಚ್ಚು ಮಹತ್ವ ನೀಡುವ ಬದಲು ನಿಮ್ಮ ವೃತ್ತಿಯ ಕಡೆಗೆ ಗಮನ ನೀಡಿ .

ವೃಷಭ ರಾಶಿ

 

ಪ್ರೀತಿ ಹಾಗೂ ವೃತ್ತಿ ಜೀವನದ ಮೇಲೆ ಚಂದ್ರಗ್ರಹಣದ ಪ್ರಭಾವ ಇರುತ್ತದೆ. ಸಂಗಾತಿಯ ಜೊತೆ ಒಳ್ಳೆಯ ಸಂಬಂಧ ಬೆಳೆಸಲು ಇದು ಒಳ್ಳೆಯ ಸಂದರ್ಭ. ಸೆಪ್ಟಂಬರ್ ತಿಂಗಳವರೆಗೆ ಈ ರಾಶಿಯವರ ಪ್ರೇಮ ಜೀವನ ಅದ್ಭುತವಾಗಿ ಇರುತ್ತದೆ.

ಮಿಥುನ ರಾಶಿ

 

ಚಂದ್ರಗ್ರಹಣ ಈ ರಾಶಿಯ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ . ಆದರೆ ಸಂಬಂಧದ ಬಗ್ಗೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಚಂದ್ರ ಗ್ರಹಣ ಮೇಷ ಹಾಗೂ ಕಟಕ ರಾಶಿಯ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.ಈ ರಾಶಿಯವರ ಜೊತೆ ನೀವು ಸಂಬಂಧ ಹೊಂದಿದ್ದರೆ ನಿಮ್ಮ ಪ್ರೀತಿ ಜೀವನದಲ್ಲಿ ಸಮಸ್ಯೆ ಕಾಡುವ ಸಾಧ್ಯತೆ ಇದೆ.

ಕಟಕ ರಾಶಿ

 

ಚಂದ್ರಗ್ರಹಣದ ಪ್ರಭಾವ ಈ ರಾಶಿಯವರ ಮೇಲೆ ಹೆಚ್ಚಾಗಿ ಇರುತ್ತದೆ. ಸಂಗಾತಿ ಹೆಚ್ಚಿನ ಕಾಳಜಿ ವಹಿಸುವವರಾಗಿದ್ದರೆ ಚಿಂತೆ ಪಡುವ ಅಗತ್ಯವಿಲ್ಲ. ಸಂಬಂಧ ಈಗಾಗಲೇ ಹಳಸುತ್ತ ಬಂದಿದ್ದರೆ ಚಂದ್ರ ಗ್ರಹಣದ ನಂತರ ಪ್ರೀತಿಯ ಜೀವನ ಮುರಿದು ಬೀಳಲಿದೆ.

ಸಿಂಹ ರಾಶಿ

 

ಈ ರಾಶಿಯ ಜನರು ಅಹಂಕಾರದಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಸಂಗಾತಿಯ ಬಗ್ಗೆ ಗಮನ ನೀಡುವ ಅವಶ್ಯಕತೆ ಇದೆ.

ಕನ್ಯಾ ರಾಶಿ 

 

ಚಂದ್ರಗ್ರಹಣ ಈ ರಾಶಿಯವರ ಪ್ರೇಮ ಜೀವನದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆದರೆ ಯಾವುದೇ ಭಯಪಡುವ ಅಗತ್ಯವಿಲ್ಲ.

ತುಲಾ ರಾಶಿ

 

ಈ ರಾಶಿಯವರ ಪ್ರೇಮ ಜೀವನದ ಮೇಲೆ ಚಂದ್ರ ಗ್ರಹಣ ಪ್ರಭಾವ ಅಷ್ಟಾಗಿ ಬೀರುವುದಿಲ್ಲ. ಆದರೆ ಕೆಲವೊಂದು ಎಚ್ಚರಿಕೆಯ ಕ್ರಮಗಳನ್ನು ಅವಶ್ಯವಾಗಿ ವಹಿಸಬೇಕಾಗುತ್ತದೆ.

ವೃಶ್ಚಿಕ ರಾಶಿ

 

ಈ ರಾಶಿಯವರ ಮೇಲೆ ಚಂದ್ರಗ್ರಹಣದ ಪ್ರಭಾವ ಹೆಚ್ಚಾಗಿ ಇರುತ್ತದೆ. ಆದರೆ ಇದನ್ನು ಎದುರಿಸುವ ಶಕ್ತಿ ಈ ರಾಶಿಯವರಿಗೆ ಇರುತ್ತದೆ.

ಧನಸ್ಸು ರಾಶಿ 

 

ಈ ರಾಶಿಯವರು ಸಂಗಾತಿಯ ರಾಶಿಯ ಮೇಲೆ ಚಂದ್ರಗ್ರಹಣದ ಪ್ರಭಾವ ಹೆಚ್ಚಿದ್ದರೆ , ಸಕಾರಾತ್ಮಕ ಚಿಂತನೆ ಅಗತ್ಯವಾಗುತ್ತದೆ. ಪ್ರೀತಿ ಜೀವನ ಉಳಿಸಿಕೊಳ್ಳಲು ಹೋರಾಡಬೇಕಾಗುತ್ತದೆ.

ಮಕರ ರಾಶಿ

 

ಚಂದ್ರ ಗ್ರಹಣದ ಪ್ರಭಾವ ಅತಿ ಹೆಚ್ಚಾಗಿ ಇರುವ ರಾಶಿ ಎಂದರೆ ಅದು ಮಕರ ರಾಶಿ. ಆದ್ದರಿಂದ ಜನರು ನಿಮ್ಮ ಬಳಿ ಇದ್ದರೆ ಅವರ ಪ್ರಭಾವ ನಿಮ್ಮ ಮೇಲೆ ಹೆಚ್ಚಾಗಿ ಆಗುತ್ತದೆ. ಹಾಗಾಗಿ ಆದಷ್ಟು ಈ ದಿನ ಎಚ್ಚರಿಕೆಯನ್ನು ವಹಿಸಬೇಕು.

ಕುಂಭ ರಾಶಿ 

 

ಈ ರಾಶಿಯವರ ಪ್ರೇಮ ಜೀವನದ ಮೇಲೆ ಚಂದ್ರ ಗ್ರಹಣದ ಪ್ರಭಾವ ಬೀರುತ್ತದೆ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ.

ಮೀನ ರಾಶಿ

 

ಈ ರಾಶಿಯವರ ಮೇಲೆ ಚಂದ್ರ ಗ್ರಹಣದ ಪ್ರಭಾವ ಇದೆ .ಸಂಬಂಧದಲ್ಲಿ ಇರುವ ವ್ಯಕ್ತಿಗಳು ಸಂಗಾತಿಯ ಭಾವನೆಗಳಿಗೆ ಆದಷ್ಟು ಮಹತ್ವ ನೀಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top