fbpx
ಸಮಾಚಾರ

ಜೂಲೈ 16 ನೇ ತಾರೀಖು ಬರಲಿರುವ ಚಂದ್ರ ಗ್ರಹಣದ ದೋಷದಿಂದ ಮುಕ್ತರಾಗಲು ತಪ್ಪದೆ ಈ ಶ್ಲೋಕವನ್ನು ಪಠಿಸಿ ಕಷ್ಟಗಳಿಂದ ಹೊರ ಬನ್ನಿ

ಗ್ರಹಣವು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.
ಗ್ರಹಣದ ಅವಧಿ: 16/07/2019 – 17/07/2019
ಗ್ರಹಣ ಸ್ಪರ್ಶ ಕಾಲ : ಮಧ್ಯ ರಾತ್ರಿ 01-30 am
ಗ್ರಹಣ ಮಧ್ಯ ಕಾಲ : ಮುಂಜಾನೆ 03-00 am
ಗ್ರಹಣ ಮೋಕ್ಷ ಕಾಲ : ಮುಂಜಾನೆ 04-30 am

ಚಂದ್ರ ಗ್ರಹಣದ ಸಮಯದಲ್ಲಿ ಗ್ರಹಣದ ದೋಷದಿಂದ ಮುಕ್ತರಾಗಲು ಈ ಶ್ಲೋಕವನ್ನು ಪಠಿಸಿ.

ಈ ವರ್ಷ ಶ್ರೀ ವಿಕಾರಿ ನಾಮ ಸಂವತ್ಸರದ ಆಷಾಡ ಶುಕ್ಲ ಪೂರ್ಣಿಮಾ 16-07-2019 ಮಂಗಳವಾರ ಉತ್ತರಾಷಾಢ ನಕ್ಷತ್ರದಲ್ಲಿ, ಧನಸ್ಸು ಹಾಗೂ ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ , ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸುತ್ತದೆ. ಇಂದು ಸೂರ್ಯ, ಭೂಮಿ ಮತ್ತು ಚಂದ್ರ, ಈ ಮೂರೂ ಕಾಯಗಳು ಒಂದೇ ರೇಖೆಯ ಮೇಲೆ ಇರುತ್ತವೆ. ಅದರಲ್ಲೂ ರಕ್ತ ಚಂದ್ರಗ್ರಹಣ ಎಂದರೆ ಜನರು ಇನ್ನಷ್ಟು ಆತಂಕ , ಭಯ ಕೂಡ ಸಹಜವಾಗಿ ಜಾಸ್ತಿಯಾಗಿಯೇ ಇರುತ್ತದೆ. ರಾಜಕೀಯ ಕ್ಷೇತ್ರ ವಾಗಿರಬಹುದು ಅಥವಾ ಬೇರೆ ಯಾವುದೇ ಕ್ಷೇತ್ರವಿರಬಹುದು ಅಥವಾ ದ್ವಾದಶ ರಾಶಿಗಳ ಮೇಲೆ ಯಾವ ? ರೀತಿಯ ದುಷ್ಪರಿಣಾಮ ಬೀರಲಿದೆ ಎನ್ನುವ ಭಯ ಇದ್ದೇ ಇರುತ್ತದೆ. ಆದ್ದರಿಂದ ಏನು ಮಾಡಬೇಕು ? ಯಾವ ಮಂತ್ರವನ್ನು ಪಠಿಸಬೇಕು ?

 

 

ಈ ಕೇತುಗ್ರಸ್ತ ಚಂದ್ರ ಗ್ರಹಣ 27 ನೇ ತಾರೀಖು ಸಂಭವಿಸಲಿದೆ. ಸ್ಪರ್ಶಕಾಲ ಮಧ್ಯ ರಾತ್ರಿ 01-30 am ಮತ್ತೆ ಮೋಕ್ಷಕಾಲ ಮುಂಜಾನೆ 04-30 am ಮತ್ತು ಮಧ್ಯಮ ಕಾಲವು ಮುಂಜಾನೆ 03-00 am. ಈ ಸಮಯದಲ್ಲಿ ನಾವೆಲ್ಲರೂ ನಿದ್ರೆ ಮಾಡುತ್ತಿರುತ್ತೇವೆ. ನಮಗೆ ಯಾವುದೇ ಸಮಸ್ಯೆ ಇಲ್ಲ. ಬೆಳಗ್ಗೆ ಎದ್ದೇಳುವಷ್ಟರಲ್ಲಿ ಗ್ರಹಣ ಇರುವುದಿಲ್ಲ ಯಾವುದೇ ತೊಂದರೆ ಇಲ್ಲ ಎಂದು ನಾವು ನೀವೆಲ್ಲರೂ ಅಂದುಕೊಳ್ಳಬಹುದು .
ಆದರೆ ಕಳೆದ ಅಮಾವಾಸ್ಯೆಯೂ ಸಹ ಸೂರ್ಯ ಗ್ರಹಣ ನಡೆದಿದೆ. ಯಾವಾಗ ಒಂದೇ ಪಕ್ಷದಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಗ್ರಹಣ ಸಂಭವಿಸುತ್ತದೆಯೋ, ಆಗ ಈ ಭೂಮಂಡಲದ ಮೇಲೆ ಬಹಳಷ್ಟು ವ್ಯತ್ಯಾಸಗಳು ಉಂಟಾಗುತ್ತವೆ. ಅದರಲ್ಲೂ ಕೇತುಗ್ರಸ್ಥ ಖಗ್ರಾಸ ಚಂದ್ರಗ್ರಹಣ ಎನ್ನುವುದು ನಮ್ಮ ಕರ್ನಾಟಕದ ಮೇಲೆ ಬಹಳಷ್ಟು ಪರಿಣಾಮವನ್ನು ಬೀರಲಿದೆ ಮತ್ತು ಬೀರುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಕಂಡು ಬರುತ್ತಿದೆ.

ರಾಜಕೀಯ ಕ್ಷೇತ್ರದಲ್ಲೂ ಸಹಿತ ಸಾಕಷ್ಟು ವ್ಯತ್ಯಾಸಗಳನ್ನು ಮತ್ತು ಮಾರ್ಪಾಡುಗಳನ್ನು ಇದು ಮಾಡುತ್ತದೆ. ಬಹಳಷ್ಟು ತೊಂದರೆ ತಾಪತ್ರಯಗಳನ್ನು ನೀಡುತ್ತದೆ. ಯಾವಾಗ ರಾಜರುಗಳಿಗೆ ತೊಂದರೆ ಆಗುತ್ತದೆ ಆಗ ಸಾರ್ವಜನಿಕರಿಗೂ ಸಹ ತೊಂದರೆ ಕಟ್ಟಿಟ್ಟ ಬುತ್ತಿ. ನಾವು ಏನು ಮಾಡಬೇಕು ? ಯಾವ ರಾಶಿಯವರಿಗೆ ಹೆಚ್ಚು ತೊಂದರೆ ಇದೆ ?

ಈ ಕೇತುಗ್ರಸ್ತ ಖಗ್ರಾಸ ಚಂದ್ರಗ್ರಹಣವು 27 ನೇ ತಾರೀಖು ರಾತ್ರಿ ಪ್ರಾರಂಭವಾಗುತ್ತಿರುವುದರಿಂದ ಉತ್ತಾರಾಷಾಡ ನಕ್ಷತ್ರ, ಧನಸ್ಸು ರಾಶಿಯಲ್ಲಿ ಪ್ರಾರಂಭವಾಗುತ್ತಿದೆ ಮತ್ತು ಮುಕ್ತಾಯವಾಗುವುದು ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ. ಆದ್ದರಿಂದ ಈ ಎರಡೂ ನಕ್ಷತ್ರ ಮತ್ತು ರಾಶಿಗೆ ಹೆಚ್ಚಿನ ಪರಿಣಾಮ ಮತ್ತು ಹೊಡೆತ ಬೀಳಬಹುದು.
ಪ್ರತಿಯೊಬ್ಬರೂ ಕೂಡ ಈ ಗ್ರಹಣದ ಸಮಯದಲ್ಲಿ ರಾತ್ರಿ ಎಚ್ಚರವಾಗಿಯೇ ಇರಬೇಕು, ನಿದ್ರಿಸಬಾರದು. ಮಂಗಳವಾರ ಮಧ್ಯಾಹ್ನ ವ್ಯವಸ್ಥಿತವಾಗಿ ಆಹಾರವನ್ನು ಮಧ್ಯಾಹ್ನ 12 ಗಂಟೆ 30 ನಿಮಿಷದ ಒಳಗಾಗಿ ಆಹಾರವನ್ನು ಸ್ವೀಕರಿಸಬೇಕು. ಅದಾದ ನಂತರ ಆಹಾರವನ್ನು ಸ್ವೀಕರಿಸಬಾರದು.

ರೋಗಿಗಳು ಇದ್ದರೆ ಏನು ಮಾಡಬೇಕು ?

ರೋಗಿಗಳು ಇದ್ದರೆ ಮಧ್ಯಾಹ್ನ 3 ಗಂಟೆ 30 ನಿಮಿಷದವರೆಗೂ ಕೂಡ ಆಹಾರವನ್ನು ಸೇವಿಸಬಹುದು . ಆದರೆ ಅವರಿಗೂ ಕೂಡ ಅದಾದ ನಂತರ ಆಹಾರವನ್ನು ಅವರು ಕೂಡ ಸೇವಿಸಬಾರದು. ಆಹಾರವನ್ನು ಒಂದು ವೇಳೆ ಸ್ವೀಕರಿಸಿದರೆ ಹೊಸ ಹೊಸ ರೋಗಗಳು ಆಹ್ವಾನವಾಗುತ್ತವೆ. ಮಾಡುವ ಕೆಲಸ ಕಾರ್ಯಗಳಲ್ಲಿ ತೊಂದರೆ, ತಾಪತ್ರಯಗಳು, ಉಂಟಾಗುತ್ತವೆ. ಆದ್ದರಿಂದ ಯಾರೂ ಸಹ ದೈರ್ಯ ಗೆಡುವುದು ಬೇಡ. ಎಲ್ಲವನ್ನೂ ಸಹ ಆ ಭಗವಂತನಿಗೆ ಅರ್ಪಣೆಯನ್ನು ಮಾಡಿ ,

ಈ ಒಂದು ಶ್ಲೋಕವನ್ನು ಜಪಿಸಿ ಗ್ರಹಣದ ಸಮಯದಲ್ಲಿ ಜಪಿಸಬೇಕು.

“ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುಮರ್ತತಹ,
ಚಂದ್ರ ಗ್ರಹೋ ಪರೋಗೋಕ್ತಾ ಗ್ರಹ ಪೀಡಾ ವ್ಯಪೋಹೂತುಹು .
ಯೋ ಸೌ ದಂಡದರೋ ದೇವಃ ಯಮೋ ಮಹಿಷವಾಹನಃ,
ಚಂದ್ರ ಗ್ರಹೋ ಪರಾಗೋಕ್ತಾ ಗ್ರಹಪೀಡಾ ವ್ಯಪೋಹೂತುಹು .
ಯೋ ಸೌ ಶೂಲದರೋ ದೇವಃ ,ಯೋ ಸೌ ವಜ್ರದರೋ ದೇವಃ,ಪಿನಾಕಿ
ವೃಷಭವಾಹನಃ, ಚಂದ್ರಗ್ರಹೋ ಪರಾಗೋಕ್ತಾ ಗ್ರಹಪೀಡಾ ವ್ಯಪೋಹೂತುಹು.

ಈ ಶ್ಲೋಕವನ್ನು ಪ್ರತಿಯೊಬ್ಬರೂ ಕೂಡ ಗ್ರಹಣದ ಸಮಯದಲ್ಲಿ ಅಂದರೆ ಗ್ರಹಣ ನಡೆಯುವ ಕಾಲದಲ್ಲಿ ಎಲ್ಲರೂ ಸಹ ಜಪವನ್ನು ಮಾಡಿ .

ಜಪವನ್ನು ಮಾಡಿದ ನಂತರ ಮಾರನೇ ದಿನ ಸೂರ್ಯ ಉದಯವಾದ ನಂತರ ಶುದ್ಧ ಬಿಂಬ ಸೂರ್ಯ ಬಿಂಬ ದರ್ಶನವಾದ ನಂತರ ಶುಚಿರ್ಭೂತರಾಗಿ ಸ್ನಾನವನ್ನು ಮಾಡಿ, ಶ್ವೇತ ವಸ್ತ್ರಗಳನ್ನು ಧರಿಸಿ , ಶಿವಾಲಯಕ್ಕೆ ಅಥವಾ ಹತ್ತಿರದಲ್ಲಿ ಇರುವಂತಹ ದೇವಾಲಯಕ್ಕೆ ಹೋಗಿ, ಆಕ್ಕಿಯನ್ನು ದಾನ ಮಾಡಿ ,ನಮಸ್ಕಾರ ಮಾಡಿ, ಎಲ್ಲರಿಗೂ ಸಹ ಬಂದಿರುವ ದೋಷಗಳು ಪರಿಹಾರವಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top