fbpx
ಸಮಾಚಾರ

ಪ್ರಾಣದ ಹಂಗು ತೊರೆದು ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕಿಯನ್ನು ರಕ್ಷಿಸಿದ ಭಾರತೀಯ ಯೋಧರು: ವಿಡಿಯೋ ವೈರಲ್

ಕಣಿವೆರಾಜ್ಯ ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ನದಿಯೊಂದರಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ಕೇಂದ್ರೀಯ ಮೀಸಲು ಪಡೆ ಯೋಧರು ರಕ್ಷಿಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ನದಿಯಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ಸಿಆರ್ ಪಿಎಫ್ ಯೋಧರು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

 

14 ವರ್ಷದ ವಯಸ್ಸಿನ ಬಾಲಕಿಯನ್ನು ನದಿಯಿಂದ ಯೋಧರು ರಕ್ಷಿಸಿದ್ದಾರೆ. 21 ಸೆಕೆಂಡುಗಳ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಯೋಧರ, ಧೈರ್ಯ, ಸಾಹಸಕ್ಕೆ ನೆಟ್ಟಿಗರು ಚಪ್ಪಾಳೆ ಹೊಡೆದಿದ್ದಾರೆ. ಯೋಧರ ಈ ಕಾರ್ಯವನ್ನು ಹಾಡಿ ಹೊಗಳಿದ್ದಾರೆ.

ವಿಡಿಯೋ ಜೊತೆಗೆ ರಕ್ಷಿಸಲ್ಪಟ್ಟ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾವಚಿತ್ರವನ್ನು ಶೇರ್ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲೂ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣೆಗೆ ಮುಂದಾಗುವ ಸೈನಿಕರ ಬಗ್ಗೆ ಹೃತ್ಪೂರ್ವಕ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ನಿಜವಾದ ಹೀರೋಗಳಿಗೆ ಸೆಲ್ಯೂಟ್ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top