fbpx
ಸಮಾಚಾರ

ಸೀಮಂತ ಕಾರ್ಯಕ್ರಮದಲ್ಲಿ ಸಂಭ್ರಮಿಸಿದ ಶ್ರುತಿ ಹರಿಹರನ್- ವಿಡಿಯೋ.

ಕೆಲ ದಿನಗಳ ಹಿಂದೆ ತಾನು ಗರ್ಭಿಣಿಯಾದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ‘ಇದೊಂದು ಹೊಸ ಪ್ರಯಾಣದ ಆರಂಭ. ಕ್ಲಾರಿಟಿಗಿಂತ ಕೆಲವೊಮ್ಮೆ ಬ್ಲರ್ ಆಗಿರುವುದೇ ಉತ್ತಮ ‘ ಎಂದು ಹೇಳಿಕೊಂಡಿದ್ದಾರೆ. ಇನ್ನು ಮೇಡಂ ಸೀಮಂತಾ ಆಯ್ತಾ? ಬೇಬಿ ಶವರ್? ಎಂದು ಕೇಳುತ್ತಿದ್ದವರಿಗೆ ವಿಡಿಯೋ ರಿವೀಲ್ ಮಾಡಿ ಉತ್ತರ ನೀಡಿದ್ದಾರೆ.

ಸೀಮಂತ ಸಂಭ್ರಮದ ಎಲ್ಲಾ ಪೋಟೋಗಳನ್ನು ಒಂದು ಸ್ಲೈಡ್ ಮಾಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ವಿಭಿನ್ನವಾಗಿ ಡಿಸೈನ್ ಆಗಿರುವ ಕೇಕ್ ಅನ್ನು ಕತ್ತರಿಸಿ, ತಮಗಿಷ್ಟವಾದ ತಿನಿಸುಗಳ ಜೊತೆಗೆ ಮೊಸರನ್ನವನ್ನು ಸವಿದು ಸೀಮಂತ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದ್ದಾರೆ. ವಿಡಿಯೋದಲ್ಲಿ ಶ್ರುತಿ ಬಿಳಿ ಬಣ್ಣದ ಗೌನ್ ಧರಿಸಿದ್ದು, ವಿಭಿನ್ನವಾಗಿ ಡಿಸೈನ್ ಆಗಿರುವ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚಾರಣೆ ಮಾಡಿದ್ದಾರೆ. ಜೊತೆಗೆ ಅವರ ಸ್ನೇಹಿತರ ಜೊತೆ ಫೋಟೋಗೆ ಪೋಸ್ಟ್ ಕೊಟ್ಟಿದ್ದು, ಬೇಬಿ ಶವರ್ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದ್ದಾರೆ.

 

 

 

View this post on Instagram

 

#majorthrowback🔙 When your closest friends decide that it’s time for some fun and throw you an (almost surprise) baby shower 😊 Thank you @kasmaker @vyduryalokesh, @yashaswini.gurulingaiah and @joel.kushalappa for putting it all together❤, that too in a space I was craving to eat from😌 #thepermitroombangalore (their curd rice starters are to die for). Also thank you for coming and adding to all the fun and love @swa_chakra @suchitasr @arundathi_anjanappa @shachinaheggar @srain_a @appaiahz . We missed you @raam.kalari @sumanark23 @shreyankakr & sangeeta Iyer. . Lastly a big shout out to @thedesignercakemaker for the absolutely delicious cake . Thank you neha for that one 😍 #welcometothecircuslittlepeanut

A post shared by Sruthi Hariharan (@sruthi_hariharan22) on


ಅಂದಹಾಗೆ ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಅರ್ಜುನ್ ಸರ್ಜಾ ಅವರ ವಿರುದ್ಧ ದೂರು ನೀಡಿದ್ದರು. ಇದರಲ್ಲಿ ತಮ್ಮ ಹೆಸರಿನ ವಿಳಾಸದೊಂದಿಗೆ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದರು.

ಕನ್ನಡ ಚಿತ್ರ “ಹ್ಯಾಪಿ ನ್ಯೂ ಇಯರ್” ನಂತರ ಶ್ರುತಿ ಹರಿಹರನ್-ರಾಮ್ ಅವರ ವಿವಾಹವಾಗಿತ್ತು. ಇಬ್ಬರೂ ಹೆಚ್ಚು ಸದ್ದು ಗದ್ದಲವಿಲ್ಲದೆ ವಿವಾಹವಾಗಿದ್ದು 2017ರ ನವೆಂಬರ್ ನಲ್ಲಿ ಜಾಲತಾಣವೊಂದರ ವರದಿ ಮೂಲಕ ಬಹಿರಂಗವಾಗಿತ್ತು. ಕೇರಳದಲ್ಲಿ ನೃತ್ಯ ಮಾಸ್ಟರ್ ಆಗಿರುವ ರಾಮ್ ಅಲ್ಲಿನ ಪ್ರಸಿದ್ದ ಸಮರ ಕಲೆ ಕಲರಿ ಪಟ್ಟು ಕಲಾವಿದರಾಗಿ ಅಂತರಾಷ್ಟ್ರೀಯ ಮನ್ನಣೆ ಗಿಟ್ಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top