fbpx
ಸಮಾಚಾರ

ಕಸಗುಡಿಸುತ್ತಿದ್ದ ಸ್ಲಮ್ ಹುಡುಗ ಕಾಮನ್‌ವೆಲ್ತ್‌ಗೆ ಆಯ್ಕೆ- ಧನಸಹಾಯಕ್ಕಾಗಿ ಮನವಿ

ಬಡತನದಲ್ಲಿಯೇ ಪ್ರತಿಭೆಗಳು ಅರಳುವುದು ಎಂಬ ಮಾತಿದೆ ಇದಕ್ಕೆ ಸಾಕ್ಷಿಯಾಗಿ ಹಮಾಲಿ ವೃತ್ತಿಯ ಕ್ರೀಡಾಪಟುವೊಬ್ಬ ಕಾಮನ್‌ ವೆಲ್ತ್‌ಗೆ ಆಯ್ಕೆಯಾಗಿಯಾಗಿದ್ದಾರೆ. ಈತ ಬಡ ಕುಟುಂಬದ ಯುವಕ. ಹೊಟ್ಟೆ ಪಾಡಿಗೆ ನಿತ್ಯ ಹಮಾಲಿ ಮಾಡುವ ಈತ ಕಾಮನ್‌ ವೆಲ್ತ್‌ಗೆ ಆಯ್ಕೆಯಾಗಿದ್ದು, ಸದ್ಯ ಹಣದ ಕೊರತೆ ಎದುರಾಗಿದೆ. .

ಕರ್ನಾಟಕದಿಂದ 19 ಕ್ರೀಡಾಪಟುಗಳನ್ನು ನ್ಯಾಷನಲ್‌ ಪವರ್‌ಲಿಫ್ಟಿಂಗ್‌ ಫೆಡರೇಷನ್‌ ಸಮಿತಿ ಇವರನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಪಿ.ಮಂಜಪ್ಪ ಕೂಡ ಒಬ್ಬರು. ಇವರು 66 ಕೆಜಿ ಕೆಟಗೇರಿ ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದು, ಸೆ.10ಕ್ಕೆ ಕೆನಡಾಗೆ ಹೋಗಲಿದ್ದಾರೆ.

“ನಾನು ಈ ಹಿಂದೆ ಹಮಾಲಿ ಕೆಲಸ ಮಾಡುತ್ತಿದ್ದು, ಈಗ ಕಾಮನ್‌ವೆಲ್ತ್‌ಗೆ ಆಯ್ಕೆಯಾಗಿದ್ದೇನೆ. ಆದರೆ ಕೆನಡಾಗೆ ಹೋಗಲು ಹಣದ ಅವಶ್ಯಕತೆ ಇದ್ದು 2,40,000 ಹಣ ಬೇಕಾಗಿದೆ. ಉಳ್ಳವರು ನೆರವು ನೀಡುವ ಮನಸುಳ್ಳವರು ನನಗೆ ಸಹಾಯ ಮಾಡಿದರೆ ದೇಶಕ್ಕೆ ಕೀರ್ತಿ ತರುತ್ತೇನೆ ಎಂದು ಹೇಳಿದ್ದಾರೆ ಪವರ್‌ ಲಿಫ್ಟರ್‌ ಪಿ.ಮಂಜಪ್ಪ.

ಈತ ದಾವಣಗೆರೆಯ ಕೊಳಚೆ ಪ್ರದೇಶ ಶೇಖರಪ್ಪ ನಗರದ ನಿವಾಸಿ. ಈತನ ತಂದೆ ಪುರುಷೋತ್ತಮರಿಗೂ ಹಮಾಲಿ ಶ್ರಮವೇ ಕಾಯಕ. ಬಡತನದ ಕಾರಣಕ್ಕೆ ಹತ್ತನೇ ತರಗತಿ ನಂತರ ಶಾಲೆ ಬಿಟ್ಟ. ಆದರೆ ಸಾಧನೆ ಮಾತ್ರ ನಿಲ್ಲಿಸಲಿಲ್ಲ. ಅದಕ್ಕಾಗಿ ಪವರ್‌ ಲಿಫ್ಟಿಂಗ್‌ ಕ್ರೀಡಾ ಕ್ಷೇತ್ರವನ್ನು ಆಯ್ದುಕೊಂಡ. ಪ್ರತಿನಿತ್ಯ ಎಪಿಎಂಸಿಯಲ್ಲಿ ಕಸಗುಡಿಸುವ ಈತ ಹಗಲು ರಾತ್ರಿ ಎನ್ನದೇ ನಿತ್ಯ ಪರಿಶ್ರಮವಹಿಸಿ ಸಾಧನೆಯ ಶಿಖರ ಹತ್ತುತ್ತಿದ್ದಾನೆ.

ಇವರಿಗೆ ನಾಲ್ಕು ಬಾರಿ ನ್ಯಾಷನಲ್‌ ಗೋಲ್ಡ್‌ ಮೆಡಲ್‌, 5 ಬಾರಿ ಸ್ಟೇಟ್‌ ಮೆಡಲ್‌, ಸ್ಟ್ರಾಂಗ್‌ ಮನ್‌ ಆಫ್‌ ಸೌತ್‌ ಇಂಡಿಯಾ, 2015ರಲ್ಲಿ ಹಂಪಿ ಬಲಿಷ್ಠ ಅವಾರ್ಡ್‌, ಭದ್ರಾವತಿಯಲ್ಲಿ ನಡೆದ ರಾಜ್ಯಮಟ್ಟದ ಪವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಗೋಲ್ಡ್‌ ಮೆಡಲ್‌ ಸೇರಿದಂತೆ ಇನ್ನಿತರ ಪ್ರಶಸ್ತಿಗಳು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top