fbpx
ಸಮಾಚಾರ

ವಿಚಿತ್ರ ಬೌಲಿಂಗ್ ಶೈಲಿ ಮೂಲಕ ಮತ್ತೆ ಸದ್ದು ಮಾಡಿದ ಆರ್.ಅಶ್ವಿನ್- ವಿಡಿಯೋ

ಐಪಿಎಲ್ ಟೂರ್ನಿಯಲ್ಲಿ ಮಂಕಡ್ ರನೌಟ್ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಆರ್. ಅಶ್ವಿನ್ ಅವರು ಮತ್ತೊಮ್ಮೆ ತಮ್ಮ ವಿಚಿತ್ರ ಬೌಲಿಂಗ್ ಮೂಲಕ ಸುದ್ದಿಯಾಗಿದ್ದಾರೆ.

 

 

ರವಿಚಂದ್ರನ್​ ಅಶ್ವಿನ್​ ತಮಿಳುನಾಡು ಪ್ರೀಮಿಯರ್​ ಲೀಗ್​ನಲ್ಲಿ (ಟಿಎನ್​ಪಿಎಲ್​) ಡಿಂಡಿಗಲ್​ ಡ್ರಾಗನ್ಸ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಲ್ಲಿಯೂ ಕೂಡ ಅವರು ಆಲ್ರೌಂಡರ್​ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಶುಕ್ರವಾರ ನಡೆದ ಸೂಪರ್ ಗಲ್ಲಿಸ್, ದಿಂದಿಗಲ್ ಡ್ರಾಗನ್ಸ್ (ಡಿಡಿ) ತಂಡಗಳ ನಡುವಿನ ಪಂದ್ಯದಲ್ಲಿ ವಿಶಿಷ್ಟ ಶೈಲಿಯಲ್ಲಿ ಬೌಲ್ ಮಾಡಿದರು.

ಕೊನೆಯ ಓವರ್​ನಲ್ಲಿ ಗೆಲ್ಲಲು ಚೆಪಾಕ್​ ಸೂಪರ್​ ಗಿಲ್ಲೀಸ್​ ತಂಡಕ್ಕೆ 2 ಎಸೆತಗಳಿಂದ 17 ರನ್​ಗಳು ಬೇಕಿದ್ದವು. ಆ ಸಂದರ್ಭದಲ್ಲಿ ಅಶ್ವಿನ್​ ವಿಶಿಷ್ಟ ಶೈಲಿಯಲ್ಲಿ ಬೌಲಿಂಗ್​ ಮಾಡಿದರು. ತಮ್ಮ ಎಂದಿನ ಬೌಲಿಂಗ್​ ಮಾರ್ಕ್​ನಿಂದ ಓಡಿ ಬಂದ ಅಶ್ವಿನ್​ ಎಂದಿನಂತೆ ಬಲಗೈ ಅನ್ನು ಸಂಪೂರ್ಣವಾಗಿ ಸುತ್ತದೆ, ಮೇಲ್ಗಡೆಯಿಂದಲೇ ಚೆಂಡನ್ನು ರಿಲೀಸ್​ ಮಾಡಿದರು. ಈ ಎಸೆತ ಕ್ರಿಕೆಟ್​ ನಿಯಮಕ್ಕೆ ಅನುಗುಣವಾಗಿ ನ್ಯಾಯಬದ್ಧವಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿದ ಪಂದ್ಯದ ರೆಫ್ರಿ, ಎಸೆತ ಕ್ರಮಬದ್ಧವಾಗಿರುವುದಾಗಿ ಘೋಷಿಸಿದರು.

ಈ ಎಸೆತ ಪಂದ್ಯದ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಉಂಟು ಮಾಡದಿದ್ದರು, ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top