fbpx
ಸಮಾಚಾರ

ಹೆಬ್ಬುಲಿ ನಟಿ ಅಮಲ್ ಪೌಲ್ ವಿರುದ್ಧ ಪೊಲೀಸ್ ದೂರು ದಾಖಲು- ಕಾರಣವೇನು ಗೊತ್ತಾ?

ಹೆಬ್ಬುಲಿ ಖ್ಯಾತಿಯ ನಟಿ ಅಮಲಾ ಪೌಲ್ ವಿರುದ್ಧ ದೂರು ದಾಖಲಾಗಿದೆ. ‘ಅದಾಯಿ’ ಚಿತ್ರದಿಂದ ಸಾಕಷ್ಟು ಸುದ್ದಿಯಲ್ಲಿರುವ ಅಮಲಾ ಈ ಚಿತ್ರದಲ್ಲಿ ಅವರು ಬೆತ್ತಲಾಗಿ ನಟಿಸಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ.

 

 

ಅದಾಯಿ ಚಿತ್ರದಲ್ಲಿ ಅಮಲಾ ಪೌಲ್ ನಗ್ನವಾಗಿ ನಟನೆ ಮಾಡಿರುವುದನ್ನು ಪ್ರಚಾರ ಮಾಡುತ್ತಿದ್ದಾರೆ ಹಾಗೂ ತಮಿಳಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಅನೈತು ಮಕ್ಕಲ್ ಕಚ್ಚಿ ಸ್ಥಾಪಕಿ ರಾಜೇಶ್ವರಿ ಪ್ರಿಯಾ ಅವರು ದೂರು ದಾಖಲಿಸಿದ್ದಾರೆ.

 

 

ದೂರು ದಾಖಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಶ್ವರಿ ಪ್ರಿಯಾ ಅವರು, ನಾನು ಡಿಜಿಪಿ ಅವರನ್ನು ಭೇಟಿ ಮಾಡಿ ಚಿತ್ರದ ನಿರ್ಮಾಪಕರ ವಿರುದ್ಧ ಕ್ರಮಕೈಗೊಳ್ಳಿ ಎಂದು ಬೇಡಿಕೆ ಇಟ್ಟಿದ್ದೇನೆ. ಚಿತ್ರದ ಪ್ರಮೋಶನ್‍ಗಾಗಿ ನಗ್ನ ಪೋಸ್ಟರ್ ಗಳನ್ನು ಬಳಸಲಾಗುತ್ತಿದೆ. ಇದರಿಂದ ಮಕ್ಕಳು ನಕಾರಾತ್ಮಕವಾಗಿ ಪ್ರಭಾವಿತರಾಗುತ್ತಾರೆ ಎಂದು ಹೇಳಿದ್ದಾರೆ.

“ಅಮಲಾ ತಮಿಳು ಸಂಸ್ಕೃತಿ ಬಗ್ಗೆ ಹೆದರುವುದಿಲ್ಲ. ಏಕೆಂದರೆ ಅವರು ಈ ರಾಜ್ಯದವರು ಅಲ್ಲ. ಅಮಲಾ ಹಣ ಹಾಗೂ ಪ್ರಸಿದ್ಧಿಗಾಗಿ ಏನೂ ಬೇಕಾದರೂ ಮಾಡುತ್ತಾರೆ ಈ ಚಿತ್ರದ ಟ್ರೈಲರ್ ನೋಡಿ ಯುವಕರ ಮನಸ್ಸಿನಲ್ಲಿ ನೆಗೆಟಿವ್ ಆಗಿ ಪ್ರಭಾವ ಬೀರುತ್ತದೆ” ಎಂದು ರಾಜೇಶ್ವರಿ ಪ್ರಿಯಾ ನಟಿ ಅಮಲಾ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top