fbpx
ಸಮಾಚಾರ

ಎರಡೂ ಕೈಗಳಿಲ್ಲದಿದ್ದರೂ ಸ್ವಾವಲಂಬಿಯಾಗಿ ಬದುಕುತ್ತಿರುವ ಪುಟ್ಟ ಬಾಲಕ.

ಎರಡೂ ಕೈ ಇಲ್ಲದಿದ್ದರೂ ಈ ಪುಟ್ಟ ಹುಡುಗನ ಆತ್ಮ ವಿಶ್ವಾಸ ಮಾತ್ರ ಕಿಂಚಿತ್ತೂ ಕುಗ್ಗಿಲ್ಲ. ದೇಹಕ್ಕೆ ಅಂಗವೈಕಲ್ಯ ಇದೆ ಎಂದರೆ ಕೆಲವರಿಗೆ ಒಂಥರಾ ಕೀಳರಿಮೆ ಇರುತ್ತದೆ. ನಮಗೆ ಜೀವನದಲ್ಲಿ ಇನ್ನು ಮುಂದೆ ಹೋಗಲು ಸಾಧ್ಯವಿಲ್ಲ ಅಂದು ಕೊಳ್ಳುತ್ತಾರೆ, ಆದರೆ ಈ ಬಾಲಕ ಹಾಗಲ್ಲ.

 

 

 

 

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹನುಮನಹಟ್ಟಿ ಗ್ರಾಮದ ಕಿರಣ ಫಕೀರಪ್ಪ ಕ್ಯಾಮನಕೋಲ ಎಂಬ ಈ ಬಾಲಕ ಅದೇ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ನೇ ತರಗತಿ ಕಲಿಯುತ್ತಿದ್ದಾನೆ.  ಎರಡೂ ಕೈ ಇಲ್ಲದಿದ್ದರೂ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆ ಬದುಕನ್ನು ನಡೆಸುತ್ತಿದ್ದಾನೆ. ಹುಟ್ಟಿನಿಂದಲೇ ಎರಡೂ ಕೈಗಳನ್ನು ಕಳೆದುಕೊಂಡಿರುವ ಕಿರಣ್ ತನ್ನ ಮೊಣಕೈ ಯಿಂದನೇ ಊಟ ಮಾಡ್ತಾನೆ,. ಕಿರಣ್ ಮೊಣಕೈನಲ್ಲಿ ಊಟ ಸೇವಿಸುವು ನೋಡಿದರೆ ಎಂಥ ಕಲ್ಲು ಹೃದಯದವರಿಗೂ ಒಮ್ಮೆ ಕರುಳು ಚುರುಕ್ ಎನಿಸುತ್ತದೆ.

 

 

 

 

ಕೈ ಇಲ್ಲ ಎಂಬ ಕೊರಗನ್ನೂ ಮೀರಿಕೊಂಡು ಬದುಕುತ್ತಿರುವ ಕಿರಣ್ ಕಾಲಿನ ಬೆರಳಿನಿಂದಲೇ ಬರೆಯತ್ತಾನೆ, ಬಲಗಾಲಿನ ಹೆಬ್ಬೆರಳು ಮತ್ತು ಎರಡನೇ ಬೆರಳಿನ ಮಧ್ಯೆ ಪೆನ್ ಹಿಡಿದು ಬರೆಯುತ್ತಾನೆ. ಮೊಣಕೈಗಳ ಸಹಾಯದಿಂದಲೇ ಸೈಕಲ್ ಸವಾರಿ ಮಾಡುತ್ತಾನೆ. ಯಾರ ನೆರವಿಲ್ಲದೇ ಸ್ನಾನ ಮಾಡುವುದು, ನೀರು ತುಂಬುವುದು, ಕಟ್ಟಿಗೆ ಮುರಿದುಕೊಡುವುದು, ಕಸ ಹೊಡೆಯುವುದು, ದನಗಳನ್ನು ಮೇಯಿಸುವ ಕೆಲಸ ಮಾಡುತ್ತಾನೆ.

 

ಇತರ ವಿದ್ಯಾರ್ಥಿಗಳಿಗೆ ಹೋಲಿಸಿದರೂ ಕಿರಣ್ ಓದುವಿನಲ್ಲಿ ಎಲ್ಲರಿಗಿಂತಲೂ ಮುಂದು. ಎರಡೂ ಕೈಗಳಿಲ್ಲದಿದ್ದರೂ ಮೊಣಕೈ ಸಹಾಯದಿಂದ ತನ್ನ ದಿನನಿತ್ಯದ ಎಲ್ಲ ಕೆಲಸಗಳನ್ನು ಮಾಡಿಕೊಳ್ಳುವ ಕಿರಣ ಬಡತನದಲ್ಲೂ ಅಂಗವೈಕಲ್ಯತೆಗೆ ಸೆಡ್ಡು ಹೊಡೆದು ಬದುಕುತ್ತಿದ್ದಾನೆ. ಈ ಬಾಲಕನ ಬದುಕು ಎಲ್ಲರಿಗೂ ಮಾದರಿಯಾಗಿದೆ.

 

 

 

ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡಿರುವ ಕಿರಣ್ ತನ್ನ ತಾಯಿಯ ಆಶ್ರಯದಲ್ಲಿ ಬೆಳ್ಳೆಯುತ್ತಿದ್ದಾನೆ. ತನ್ನ ಮಗನೂ ಕೂಡ ಎಲ್ಲಾ ಮಕ್ಕಳಂತೆ ಎರಡು ಕೈಗಳ ಜೊತೆ ಆಟವಾಡಲಿ ಎಂಬುದು ಕಿರಣ್ ತಾಯಿಯ ಆಸೆ. ಆಧುನಿಕ ತಂತ್ರಜ್ಞಾನದಲ್ಲಿ ಹುಡುಗನಿಗೆ ಕೈ ಕೊಡಿಸಲು ಕೃತಕ ಕೈ ಜೋಡಣೆಯಂತ ಸೌಲಭ್ಯಗಳು ಇವೆ. ಆದರೆ ಅವು ದುಬಾರಿಯಾಗಿರುವುದರಿಂದ ಕೂಲಿ ಮಾಡಿ ಬದುಕುತ್ತಿರುವ ಕಿರಣ್ ತಾಯಿಗೆ ಅಸಾಧ್ಯವಾಗಿದೆ. ಹುಡುಗನ ಕುಟುಂಬದವರು ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top