fbpx
ಸಮಾಚಾರ

ಆರೋಪ ಸಾಬೀತಾದರೇ ಬಹಿರಂಗವಾಗಿ ನೇಣು ಹಾಕಿಕೊಳ್ಳುತ್ತೇನೆ – HDKಗೆ ರೇಣುಕಾಚಾರ್ಯ ಚಾಲೆಂಜ್.

ವಿಧಾನಸಭಾ ಕಲಾಪದಲ್ಲಿ ಮೌನ ವಹಿಸಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಇಂದು ಸಿಎಂ ಕುಮಾರಸ್ವಾಮಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಸದನದಲ್ಲಿ ಸಿಎಂ ಹೇಳಿರುವ ಮಾತಿಗೆ ಟಾಂಗ್ ನೀಡಿ ಅಣೆ ಪ್ರಮಾಣದ ಸವಾಲು ಎಸೆದಿದ್ದಾರೆ.

ಸಿಎಂ ಕುಮಾರಸ್ವಾಮಿ ಶುಕ್ರವಾರದ ಅಧಿವೇಶನದಲ್ಲಿ ‘ರೇಣುಕಾಚಾರ್ಯ ನನ್ನ ಕೃಪೆಯಿಂದ ಮಂತ್ರಿಯಾದರು’ ಎಂದು ಹೇಳಿದ್ದಾರೆ. ಆದರೆ, ಇದನ್ನು ಅವರು ಸಾಬೀತುಪಡಿಸಿದರೆ ನಾನು ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳಲು ಸಿದ್ಧ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಮಾಜಿ ಸಚಿವ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

ರಮಡಾ ರೆಸಾರ್ಟ್ ಬಳಿ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, “ರೇಣುಕಾಚಾರ್ಯ ನನ್ನ ಕೃಪೆಯಿಂದ ಮಂತ್ರಿಯಾದರು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ, ನಾನು ಬಿ.ಎಸ್. ಯಡಿಯೂರಪ್ಪ ಅವರ ಕೃಪೆಯಿಂದ ಸಚಿವ ಸ್ಥಾನಕ್ಕೇರಿದವನು. ನಿಮಗೆ ತಾಕತ್ತು ಇದ್ದರೆ ಸುಮ್ಮನೆ ಸುಳ್ಳು ಹೇಳುವುದನ್ನು ಬಿಟ್ಟು ಬಹಿರಂಗ ಚರ್ಚೆಗೆ ಬನ್ನಿ, ಧರ್ಮಸ್ಥಳದ ಮಂಜುನಾಥ ಅಥವಾ ಶ್ರೀಂಗೇರಿ ಶಾರದಾಂಬೆಯ ಮೇಲೆ ಪ್ರಮಾಣ ಮಾಡಲು ಬನ್ನಿ. ನೀವು ಹೇಳಿದ್ದು ನಿಜವಾದರೆ ನಾನು ಸಾರ್ವಜನಿಕವಾಗಿ ನೇಣಿಗೇರಲು ಸಿದ್ಧನಾಗಿದ್ಧೇನೆ” ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ನಿನ್ನೆ ವಿಶ್ವಾಸಮತ ಯಾಚನೆ ವೇಳೆ ರೇಣುಕಾಚಾರ್ಯ ಕುರಿತು ಮಾತನಾಡಿದ್ದ ಸಿಎಂ ಕುಮಾರಸ್ವಾಮಿ, ರೇಣುಕಾಚಾರ್ಯ ಬಿಎಸ್​ವೈ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆಗೆ ರೇಣುಕಾಚಾರ್ಯ ಕೆಂಡಾಮಂಡಲರಾಗಿದ್ದು, ಮತ್ತೊಮ್ಮೆ ಆಣೆ ಪ್ರಮಾಣಕ್ಕೆ ಸಿಎಂರನ್ನು ಆಹ್ವಾನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top