fbpx
ಸಮಾಚಾರ

ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಮತ್ತೊಬ್ಬ ಪುರುಷನ ಜೊತೆ ಚೆಲ್ಲಾಟ ಎನ್ನಲಾದ ವಿಡಿಯೋ ವೈರಲ್, ಕಾಂಗ್ರೆಸ್ ಕೈವಾಡವಿದೆ ಅಂತಿದ್ದಾರೆ ಲಿಂಬಾವಳಿ

ಬೆಂಗಳೂರು: ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವೈರಲ್ ಆಗಿರುವ ಅಶ್ಲೀಲ ವಿಡಿಯೋ ಸಂಬಂಧ ಕರ್ನಾಟಕದ ಹಿರಿಯ ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಪ್ರತಿಕ್ರಿಯಿಸಿದ್ದಾರೆ.

ಫೇಕ್ ಫೇಸ್ ಬುಕ್ ಪುಟಗಳ ಮೂಲಕ ವೀಡಿಯೊವನ್ನು ಬಿಡುಗಡೆ ಮಾಡಿ ವೈರಲ್ ಮಾಡಿದ್ದಾರೆ ಎನ್ನಲಾಗಿದೆ ಇದರ ಹಿಂದೆ ಸಮ್ಮಿಶ್ರ ಸರ್ಕಾರ ತನ್ನ ವಿರುದ್ಧದ ಪಿತೂರಿಯನ್ನು ಮಾಡಿದ್ದಾರೆ ಎನ್ನಲಾಗಿದೆ ,

 

 

“ಇದು ನನ್ನ ವಿರುದ್ಧದ ಪಿತೂರಿ, ಸಮ್ಮಿಶ್ರ ನಾಯಕರು ವಿಡಿಯೋ ಬಳಸಿ ತಮ್ಮ ಸರ್ಕಾರವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಶಾಸಕರನ್ನು ಹಣದ ಆಮಿಷಕ್ಕೆ ಒಳಪಡಿಸುವ ಮೂಲಕ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಮತ್ತೊಂದೆಡೆ ಅವರು ಪ್ರತಿಪಕ್ಷದ ನಾಯಕರ ಎಡಿಟ್ ಮಾಡಿರುವ ವಿಡಿಯೋ ಗಳನ್ನೂ ಹರಿಯಬಿಡುತ್ತಿದ್ದಾರೆ , ಸರ್ಕಾರ ಅಸ್ಥಿರವಾಗಿದ್ದಾಗ ದೋಸ್ತಿಗಳು ಇದೇ ರೀತಿಯ ಕ್ರಮಗಳನ್ನು ಪ್ರಯತ್ನಿಸಿದ್ರು ಅವರು ಮತ್ತೆ ಅದೇ ಪ್ರಯತ್ನ ಮಾಡುತ್ತಿದ್ದಾರೆ ”ಎಂದು ಅವರು ಹೇಳಿದರು.

“ವೀಡಿಯೊದ ಮಾರ್ಫಿಂಗ್ ನನ್ನ ರಾಜಕೀಯ ಚಿತ್ರಣವನ್ನು ಹಾಳುಮಾಡುವ ಉದ್ದೇಶವನ್ನು ಹೊಂದಿದೆ. ಸಿಎಂ ಮತ್ತು ಕಾಂಗ್ರೆಸ್ ನಾಯಕರು ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ”ಎಂದು ಅವರು ಹೇಳಿದರು, ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

 

 

ವೈರಲ್ ಆಗಿರುವ ವಿಡಿಯೋದಲ್ಲಿ ಅರವಿಂದ್ ಅವರ ಜೊತೆ ಚೇತನ್ ಕಾಣಿಸಿಕೊಂಡಿದ್ದಾರೆ ಇಬ್ಬರು ಪರಸ್ಪರ ಚೆಲ್ಲಾಟದಲ್ಲಿ ತೊಡಗಿ ಮೈಮರೆತಂತಿದೆ,

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ನಕಲಿ ಮತ್ತು ಮಾರ್ಫಡ್ ಆಗಿದೆ. ಅವರ ರಾಜಕೀಯ ಜೀವನವನ್ನು ಕೊನೆಗೊಳಿಸುವ ಉದ್ದೇಶವನ್ನು ಈ ವಿಡಿಯೋ ಹೊಂದಿದೆ. ಈ ಸಂಬಂಧ ನಾನು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ ”.ಎಂದಿದ್ದಾರೆ ಅರವಿಂದ್ ಲಿಂಬಾವಳಿ.

ಒಟ್ಟಿನಲ್ಲಿ ಈ ವಿಷ್ಯ ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ ಆದರೆ ರಾಜಕಾರಣಿಗಳ ಹೊಸ ಹೊಸ ಬಣ್ಣಗಳು ಹೊರಗೆ ಬರುತ್ತಿರುವುದಂತೂ ಸತ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top