fbpx
ಸಮಾಚಾರ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ದೇವಸ್ಥಾನ ಕಟ್ಟಿದ ಎಐಎಡಿಎಂಕೆ ಕಾರ್ಯಕರ್ತರು

ವ್ಯಕ್ತಿಗಳ ಗೌರವಾರ್ಥವಾಗಿ ದೇವಾಲಯಗಳನ್ನು ನಿರ್ಮಿಸುವ ಪ್ರವೃತ್ತಿ ತಮಿಳು ನಾಡಿಗೆ ಹೊಸದೇನಲ್ಲ, ಕೊಯಮತ್ತೂರಿನ ಎಐಎಡಿಎಂಕೆ ಸದಸ್ಯರ ಗುಂಪು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ದೇವಾಲಯವನ್ನು ಸ್ಥಾಪಿಸಿದೆ.

ಕೊಯಮತ್ತೂರಿನ ಗಣೇಶಪುರಂನ ಯೋಗ ಕೇಂದ್ರದ ಕಾಂಪೌಂಡ್ ಒಳಗೆ ಇರುವ ಈ ದೇವಾಲಯದಲ್ಲಿ ಹಿಂದೂ ದೇವರುಗಳಾದ ಆಂಜನೇಯ,ಕಾಲಾಭೈರವ ದೇವಾಲಯಗಳಿವೆ. ಆದಾಗ್ಯೂ, ಇದು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ದೇವಾಲಯವಾಗಿದ್ದು ಅನೇಕರ ಗಮನ ಸೆಳೆಯುತ್ತಿದೆ,

ಎಂಟು ಟನ್ ತೂಕದ ಒಂದೇ ಕಲ್ಲಿನಿಂದ ಕೆತ್ತಿದ ಈ ಪ್ರತಿಮೆಯಲ್ಲಿ ಜಯಲಲಿತಾ ಅವರ ಮುಖ, ಒಂದು ಈಟಿ, ಗಂಟೆ ಮತ್ತು ಎರಡು ಎಲೆಗಳ ಚಿಹ್ನೆಯನ್ನು ಕಲ್ಲಿನ ಒಂದು ಬದಿಯಲ್ಲಿ ಕೆತ್ತಲಾಗಿದೆ. ಆಕೆಯ ಜನನ ಮತ್ತು ಮರಣದ ವರ್ಷಗಳನ್ನು ಸಹ ಆಕೆಯ ಮುಖದ ಕೆಳಗೆ ಒಂದೇ ಬದಿಯಲ್ಲಿ ಕೆತ್ತಲಾಗಿದೆ . ಎಂಟು ಟನ್ಗಳಷ್ಟು ಬಂಡೆಯಲ್ಲಿ ಕಾಲಾಭೈರವ, ಆಂಜನೇಯ ಮತ್ತು 12 ತಮಿಳು ರಾಶಿಗಳ ಸಂಕೇತವಿದೆ.

 

 

5 ಲಕ್ಷ ರೂ.ಗಳ ವೆಚ್ಚದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ “ಈ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸಹಾಯ ಮಾಡಿದ ಅಮ್ಮನಿಗೆ ಧನ್ಯವಾದ ಹೇಳುವ ಸಲುವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರತಿದಿನ ಎರಡು ಬಾರಿ ಅಮ್ಮನಿಗಾಗಿ ಪೂಜೆಗಳನ್ನು ಮಾಡಲಾಗುತ್ತಿದೆ, ’’ ಎನ್ನುತ್ತಾರೆ ಆ ಊರಿನ ಮುಖ್ಯಸ್ಥರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top