fbpx
ಸಿನಿಮಾ

ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದಳ ಕಿರಿಕ್ ಹುಡುಗಿ ರಶ್ಮಿಕಾ

‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಳಲ್ಲಾ ರಶ್ಮಿಕಾ ಮಂದಣ್ಣ ಈಗ ಸೌತ್ ಇಂಡಿಯನ್ ಸ್ಟಾರ್ ಹೀರೋಯಿನ್ ಆಗಿ ಬೆಳೆಯುತ್ತಿದ್ದಾಳೆ. ಕನ್ನಡ ಚಿತ್ರದ ಮೂಲಕ ಏಕಾಏಕಿ ಪಡ್ಡೆ ಹುಡುಗರಿಗೆ ಕಚಗುಳಿ ಇಟ್ಟ ರಶ್ಮಿಕಾ ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಪುನೀತ್‌, ಗಣೇಶ್, ದರ್ಶನ್ ರಂತಹ ದೊಡ್ಡ ನಟರ ಜೊತೆಗೂ ನಟಿಸೋ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಇದೀಗ ಕನ್ನಡಕ್ಕಿಂತ ತೆಲುಗಿನಲ್ಲೆ ಠಿಕಾಣಿ ಹೂಡಿದ್ದಾಳೆ.

ತೆಲುಗಿನಲ್ಲಿ ಚಲೋ ಚಿತ್ರದಿಂದ ಆರಂಭಿಸಿ ಮುಂದೆ ಗೀತಾ ಗೋವಿಂದಂ ಸೇರಿದಂತೆ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಜೊತೆ ನಟಿಸಲಿದ್ದಾರೆ ರಶ್ಮಿಕಾ ಮೂರ್ನಾಲ್ಕು ತೆಲುಗು ಚಿತ್ರ ಗಳಲ್ಲಿ ನಟಿಸಿ ಯಶಸ್ಸು ಕಂಡಿರುವ ರಶ್ಮಿಕಾ ಇನ್ನೂ ಒಂದೆರೆಡು ತೆಲುಗು ಚಿತ್ರಗಳನ್ನ ತನ್ನ ಕೈನಲ್ಲಿಟ್ಟುಕೊಂಡಿದ್ದಾಳೆ.. ಹೀಗಿರುವಾಗಲೇ ಕಿರಿಕ್ ಹುಡುಗಿ ಕುರಿತಾಗಿ ಮತ್ತೊಂದು ಸುದ್ದಿ ಸೌತ್ ಸಿನಿ ವಲಯದಲ್ಲಿ ಗಿರಕಿ ಹೊಡೆಯುತ್ತಿದೆ.. ಅದೇನೆಂದರೆ ಈಗ ರಶ್ಮಿಕಾ ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ಅಖಿಲ್ ನಟನೆಯ ಸಿನಿಮಾಗೆ ನಾಯಕಿಯಾದ್ದಾಳೆ ಎಂಬುದು.

ಅಷ್ಟು ಸಾಲದು ಎಂಬಂತೆ ದಕ್ಷಿಣ ಭಾರತ ಚಿತ್ರಗಳಲ್ಲಿ ಬುಸ್ಯಿಯಾಗಿರುವ ಕನ್ನಡಿತಿ ನಟಿ ರಶ್ಮಿಕಾ ಮಂದಣ್ಣ ಟಿಕ್ ಟಾಕ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಟಿಕ್ ಟಾಕ್ ಗೆ ಮನ ಸೋತಿರುವ ರಶ್ಮಿಕಾ ಮಂದಣ್ಣ ಹೊಸ ಖಾತೆ ತೆರೆಯುವ ಮೂಲಕ ಗಮನ ಸೆಳೆದಿದ್ದಾರೆ. Iamrashmika ಅವರ ಟಿಕ್ ಟಾಕ್ ಹ್ಯಾಂಡಲ್ ಆಗಿದೆ.

‘ಟಿಕ್ ಟಾಕ್’ ನ ಹೊಸ ಖಾತೆ ತೆರೆದಿರುವ ನಟಿ ತಮ್ಮ ಮುಂಬರುವ ಚಿತ್ರ ‘ಡಿಯರ್ ಕಾಮ್ರೆಡ್’ ಬಗೆಗೆ ವಿಷಯಗಳನ್ನು ಹಂಚಿಕೊಂಡಿದ್ದರು, ತಮ್ಮ ‘ಡಿಯರ್ ಕಾಮ್ರೆಡ್’ ಸಿನಿಮಾದ ಎಲ್ಲ ಅಪ್ ಡೇಟ್ ಗಾಗಿ ತಮ್ಮ ಟಿಕ್ ಟಾಕ್ ಖಾತೆಯನ್ನ ಫಾಲೋ ಮಾಡಿ ಎಂದು ಅಭಿಮಾನಿಗಳಿಗೆ ರಶ್ಮಿಕಾ ತಿಳಿಸಿದ್ದಾರೆ. ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಕಾಂಬಿನೇಶನ್ ನ ‘ಡಿಯರ್ ಕಾಮ್ರೆಡ್’ ಚಿತ್ರದ ಜುಲೈ 26 ರಂದು ಬಿಡುಗಡೆಯಾಗಲಿದೆ. ಆದರೆ ವೀಡಿಯೋದಲ್ಲಿ ರಶ್ಮಿಕಾ ಇಂಗ್ಲೀಷ್ ನಲ್ಲಷ್ಟೇ ಮಾತನಾಡಿದ್ದು ಕನ್ನಡಿಗರಿಗೆ ಬೇಸರ, ಆಕ್ರೋಶ ಮೂಡುವಂತೆ ಮಾಡಿದೆ.

ಇಷ್ಟು ಸಾಲದು ಎಂಬಂತೆ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಏಕಕಾಲಕ್ಕೆ ಇದೇ ತಿಂಗಳ 26ಕ್ಕೆ ಬಿಡುಗಡೆಯಾಗುತ್ತಿದೆ. ಈ ಸಂಬಂಧ ಚಿತ್ರತಂಡ ಪ್ರಚಾರಕ್ಕಾಗಿ ಬೆಂಗಳೂರಿಗೆ ಸಹ ಆಗಮಿಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು. ಚಿತ್ರದ ನಾಯಕಿ ರಶ್ಮಿಕಾ ಮತ್ತು ನಾಯಕ ವಿಜಯ್ ಮಾಧ್ಯಮಗಳ ಜೊತೆ ಮಾತನಾಡಿದರು. ಹಾಗೆಯೇ ಚೆನ್ನೈ ,ಕೊಚ್ಚಿ ಕಡೆಯೂ ಪ್ರಚಾರಕ್ಕೆ ತೆರಳಿದ್ದರು ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ, ಚೆನ್ನೈನ ಸಮಾರಂಭ ವೊಂದರಲ್ಲಿ ಸಕ್ಕತ್ತಾಗಿ ತಮಿಳಿನಲ್ಲಿ ಮಾತನಾಡಿ ತಮಿಳು ಪ್ರೇಕ್ಷಕರಿಂದ ಸೈ ಎನಿಸಿಕೊಂಡರು .

ಎರಡು ಮೂರು ತಮಿಳು ತೆಲುಗು ಚಿತ್ರದಲ್ಲಿ ಅಭಿನಯಿಸಿ ಸುಲಲಿತವಾಗಿ ತೆಲುಗು ತಮಿಳು ಮಾತಾಡುವ ರಶ್ಮಿಕಾ ತಮಿಳಿನ ಆನ್ಲೈನ್ ಮೀಡಿಯಾ  ತಮಿಳು ಚಾನೆಲ್ ಗೆ ತಮ್ಮ ಡಿಯರ್ ಕಾಮ್ರೆಡ್ ಚಿತ್ರ ಪ್ರಚಾರಕ್ಕೆ ಹೋಗಿರುತ್ತಾರೆ ಹಾಗು ತಮಿಳಿನಲ್ಲಿ ಮಾತಾಡಿದ್ದಾರೆ ರಶ್ಮಿಕಾ ನಿರೂಪಕರು ಕೇಳಿದ ಪ್ರಶ್ನೆಗೆ ನಾಲ್ಕು ಭಾಷೆಯಲ್ಲಿ ಡಬ್ ಮಾಡಿದ ಅನುಭವ ಹಂಚಿಕೊಂಡಿದ್ದಾರೆ ರಶ್ಮಿಕಾ ,ತಮಗೆ ಬೇರೆ ಭಾಷೆಗಳಲ್ಲಿ ಡಬ್ ಮಾಡಿರುವುದು ಕಷ್ಟವಾಯಿತು ಎಂದಿದ್ದಾರೆ ಅದಕ್ಕೆ ಕನ್ನಡ ಡಬ್ಬಿಂಗ್ ಸುಲಭವಾಗಿರಬಹುದು ಎಂದು ನಿರೂಪಕರು ಹೇಳಿದಾಗ ಇಲ್ಲ ನನಗೆ ಕನ್ನಡವೂ ಕಷ್ಟ ಎಂದಳು ರಶ್ಮಿಕಾ .

ರಶ್ಮಿಕಾ ಈ ಮಾತನ್ನು ಕೇಳಿದ ನೆಟ್ಟಿಗರು ಕೆಂಡ ಮಂಡಲವಾಗಿದ್ದಾರೆ, ಕರ್ನಾಟಕದವಳೇ ಆಗಿದ್ದು ತೆಲುಗು, ತಮಿಳಿನಲ್ಲಿ ಚೆನ್ನಾಗಿ ಮಾತಾಡಿ ಕನ್ನಡ ಕಷ್ಟ ಎಂದು ಹೇಳುತ್ತಾ ಕಂಗ್ಲಿಷ್ ನಲ್ಲೆ ಡವ್ ಮಾಡುತ್ತಾಳೆ ಎಂದು ರಶ್ಮಿಕಾಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top