fbpx
ಸಿನಿಮಾ

ಮಿಷನ್ ಮಂಗಳದಿಂದ ಅಂತರರಾಷ್ಟ್ರೀಯ ಮನ್ನಣೆ ಪಡೆದಿರೋ ಹಿರಿಯ ಕಲಾವಿದ, ಕನ್ನಡಿಗ ದತ್ತಣ್ಣ ಎಷ್ಟು ಓದಿದಾರೆ ಅಂತ ತಿಳ್ಕೊಂಡ್ರೆ ಭೇಷ್ ಅಂತೀರಾ

ಅಪರೂಪದ ಕಲಾವಿದ ದತ್ತಣ್ಣ ಈಗ ಬಾಲಿವುಡ್‌ನ ಬಿಗ್‌ ಬಜೆಟ್‌ ಚಿತ್ರದ ಭಾಗವಾಗಿದ್ದಾರೆ. ಅಕ್ಷಯ್‌ ಕುಮಾರ್‌, ನಿತ್ಯಾ ಮೆನನ್‌, ವಿದ್ಯಾ ಬಾಲನ್‌, ಸೋನಾಕ್ಷಿ ಸಿನ್ಹಾ- ಹೀಗೆ ದೊಡ್ಡ ತಾರಾಗಣ ಹೊಂದಿರುವ ಮಿಷನ್‌ ಮಂಗಲ್‌ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಆ ಚಿತ್ರದಲ್ಲಿ ದತ್ತಣ್ಣ ಅವರು ಇಸ್ರೋ ವಿಜ್ಞಾನಿ ಪಾತ್ರವನ್ನು ಮಾಡುತ್ತಿದ್ದಾರೆ. ಟ್ರೈಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ದತ್ತಣ್ಣ ಮೊದಲು ಏನು ಕೆಲಸ ಮಾಡುತ್ತಿದ್ದೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ.

ದತ್ತಣ್ಣ ಈ ಮೊದಲು ವಾಯುಪಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರಂತೆ. “ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ವಾಯುಪಡೆಯಲ್ಲಿ 23 ವರ್ಷ ಹಾಗೂ ಎಚ್​ಎಎಲ್​ನಲ್ಲಿ 9 ವರ್ಷ ಕಾರ್ಯನಿರ್ವಹಿಸಿದ್ದೆ. ಹಾಗಾಗಿ ಚಿತ್ರರಂಗಕ್ಕೆ ಬರುವುದು ತಡವಾಯಿತು. ಏರ್​ಫೋರ್ಸ್​​ನಲ್ಲಿರುವಾಗ ಉಪಗ್ರಹವನ್ನು ಮುಟ್ಟಿದ್ದರು ದತ್ತಣ್ಣ.

ಅತಿ ಹೆಚ್ಚು ಓದಿಕೊಂಡಿರೋ ದತ್ತಣ್ಣ

ನಟ ದತ್ತಣ್ಣ ಆಗಿನ ಕಾಲಕ್ಕೆ ಎಸ್ ಎಸ್ ಎಲ್ ಸಿ ಯಲ್ಲಿ ಮೊದಲ ರಾಂಕ್ ಪಡೆದಿದ್ದರು (1958 ಚಿತ್ರದುರ್ಗ), ಮುಂದೆ ಪಿಯುಸಿಯಲ್ಲಿ ಎರಡನೇ ರಾಂಕ್ ಪಡೆದಿದ್ದರು , ಮುಂದೆ ಬೆಂಗಳೂರಿನಲ್ಲಿ ಬಿಇ (ಎಲೆಕ್ಟ್ರಿಕಲ್ ) ಪಡೆದು ಇಂಜಿನಿಯರಿಂಗ್ ಪದವಿ ಪಡೆದು ಮುಂದೆ ಬೆಂಗಳೂರಿನ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆ ಸೈನ್ಸ್’ ನಲ್ಲಿ ಎಂ.ಇ ಪದವಿ ಹೊಂದಿದ್ದಾರೆ .

 

 

ಇಷ್ಟು ಸಾಲದು ಎಂಬಂತೆ ಭಾರತೀಯ ವಾಯುಪಡೆಯಲ್ಲಿ 20 ವರ್ಷ ಕಾಲ ವಿಂಗ್ ಕಮ್ಯಾಂಡರ್ ಹುದ್ದೆಯಲ್ಲಿದ್ದರು, ‘ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜುನಿಂದ ಮ್ಯಾನೇಜ್ಮೆಂಟ್ ಅಂಡ್ ಅಡ್ವಾನ್ಸ್ ಟೆಕ್ನಾಲಜೀಸ್; ವಿಷಯದಲ್ಲಿ ಸರ್ಟಿಫಿಕೇಷನ್ ಮಾಡಿದ್ದಾರೆ (19841) , ವಾಯು ಸೇನೆಯಿಂದ ಮುಂದೆ ಎಚ್ ಎ ಎಲ್ ಸ್ಟಾಫ್ ಕಾಲೇಜು ಬೆಂಗಳೂರಿನಲ್ಲಿ ಸುಮಾರು ಆರು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಸದ್ಯ ಈ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಅದರಲ್ಲಿ ದತ್ತಣ್ಣ ಸಹ ಕಾಣಿಸಿಕೊಂಡಿರುವುದು ಸ್ಯಾಂಡಲ್‌ವುಡ್‌ ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ. ” ಕರ್ನಾಟಕವೇ ಈ ಚಿತ್ರದ ಪ್ರಮುಖ ಮಿಷನ್‌ ಸೆಂಟರ್‌ ಆಗಿರುವುದರಿಂದ ಈ ಚಿತ್ರದಲ್ಲಿ ಕೆಲವು ಸಲ ಕನ್ನಡ ಮಾತನಾಡಿದ್ದಾರಂತೆ . ಈ ಸಿನಿಮಾಗಾಗಿ ಹಾಸನದಲ್ಲಿರುವ ಇಸ್ರೋ ಸೆಂಟರ್‌ನ್ನು ರೀ ಕ್ರಿಯೇಟ್‌ ಮಾಡಲಾಗಿತ್ತು. ಈ ಮೂಲಕ ಹಾಸನ ಬಾಲಿವುಡ್‌ ಸಿನಿಮಾದಲ್ಲಿ ರೀ ಕ್ರಿಯೇಟ್‌ ಆಗಿದೆ ಎನ್ನಬಹುದು’

ಮತ್ತೊಂದು ವಿಶೇಷವೇನೆಂದರೆ ಈ ಚಿತ್ರದ ನಿರ್ದೇಶಕ ಜಗನ್ ಶಕ್ತಿ ಕೂಡ ಕನ್ನಡಿಗ ,ಮೂಲತಃ ಬೆಂಗಳೂರಿನವರಾದ ಜಗನ್ ಈ ಹಿಂದೆ ಉಗ್ರಂ ಚಿತ್ರದ ಕಲಾ ವಿಭಾಗದಲ್ಲಿ ಕೆಲಸ ಮಾಡಿದ್ದರು ಅಷ್ಟೊಂದು ದೊಡ್ಡ ದೊಡ್ಡ ಸ್ಟಾರ್ ನಟರನ್ನು ಹಾಕಿಕೊಂಡು ಚಿತ್ರ ಮಾಡಿರುವುದು ಹೆಮ್ಮೆಯೇ ಸರಿ.

ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ಒಂದು ದಿನ ಬೆಂಗಳೂರಿನ ಆನಂದರಾವ್‌ ಸರ್ಕಲ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದಕ್ಕಾಗಿ ಇಡೀ ಸಿನಿಮಾ ತಂಡವೇ ಬೆಂಗಳೂರಿನಲ್ಲಿತ್ತು’ ಎಂದು ಅವರು ಹೇಳಿದ್ದಾರೆ. ಇಸ್ರೋದ ಮಂಗಳಯಾನ ಪ್ರೊಜೆಕ್ಟ್ ಆಧರಿಸಿರುವ ಚಿತ್ರ ಇದು. ಈ ಚಿತ್ರ ಇದೇ ಆಗಸ್ಟ್ 15ರಂದು ತೆರೆಗೆ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top