fbpx
ಸಿನಿಮಾ

‘ಒನ್ ಬಕೆಟ್ ಚಾಲೆಂಜ್’ ಗೆ ಸೈ ಎಂದ ನಟಿ ಸಮಂತಾ

ಹೈದರಬಾದ್‌ನಲ್ಲಿ ನೀರಿನ ಕೊರತೆ ಹೆಚ್ಚಾಗಿದ್ದು ನಟಿ ಸಮಂತಾ ಅಕ್ಕಿನೇನಿ ಜುಲೈ 21 ರಂದು ‘ಒನ್ ಬಕೆಟ್ ವಾಟರ್ ನಲ್ಲಿ‘ ಎಂಬ ಅಭಿಯಾನ ಶುರು ಮಾಡುತ್ತಿದ್ದಾರೆ. ಆ ದಿನದಂದು ಬ್ರಶ್ ಮಾಡಲು, ಸ್ನಾನ ಮಾಡಲು, ಕೈ ತೊಳೆಯಲು ಹಾಗೂ ಇನ್ನಿತರ ಕೆಲಸಕ್ಕೆ ಒಂದೇ ಬಕೆಟ್‌ನಲ್ಲಿ ನೀರು ಬಳಸಬೇಕು ಎಂಬುದು ಸ್ಯಾಮ್ ಉದ್ದೇಶವಾಗಿದೆ. ಈ ಕುರಿತು ರೀಟ್ವೀಟ್ ಮಾಡಿರುವ ಸಮಂತಾ ನೀರಿನ ಮಿತ ಬಳಕೆ ಮಾಡುವಂತೆ ಅಭಿಮಾನಿಗಳಿಗೂ ಕರೆ ನೀಡಿದ್ದಾರೆ.

ಮುಖ ತೊಳೆಯುವಾಗ, ವಾಹನ ತೊಳೆಯುವಾಗ ಅಥವಾ ಟ್ಯಾಪ್​ ಆನ್​ ಮಾಡಿದಾಗ ಕೇವಲ ಒಂದು ಬಕೆಟ್​ ನೀರನ್ನು ಮಾತ್ರ ಉಪಯೋಗಿಸಿ, ಹೆಚ್ಚು ನೀರಿನ ಬಳಕೆಯನ್ನು ಮಾಡಬೇಡಿ ಎಂದು ಬರೆದಿದ್ದಾರೆ.

 

ಭಾನುವಾರ ಒನ್ ಬಕೆಟ್ ಚಾಲೆಂಜ್‌ನ್ನು ಯಾರು ಸ್ವೀಕರಿಸುತ್ತೀರಾ (ಫೋಟೋಗಳನ್ನು ಹಂಚಿಕೊಳ್ಳಿ). ಹೆಚ್ಚು ಹೊತ್ತು ಶವರ್ ಕೆಳಗೆ ಇರಬಾರದು, ನಿಮ್ಮ ವಾಹನವನ್ನು ತೊಳೆಯಬಾರದು, ಮುಖ ತೊಳೆಯುವಾಗ ನಲ್ಲಿ ತಿರುಗಿಸಿ ಹಾಗೆಯೇ ಬಿಡಬಾರದು. ನನ್ನ ಒನ್ ಬಕೆಟ್ ಚಾಲೆಂಜನ್ನು ಪೋಸ್ಟ್ ಮಾಡುತ್ತೇನೆ. ಯಾರೂ ಮೋಸ ಮಾಡುವಂತಿಲ್ಲ. ಪ್ರತಿಯೊಂದು ಹನಿಯೂ ಮುಖ್ಯ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top