fbpx
ಸಿನಿಮಾ

ಅಂತೂ ಇಂತೂ ಬಿಕಿನಿ ಬಿಟ್ಟು ಸ್ಕೂಲ್ ಯುನಿಫಾರ್ಮ್ ತೊಟ್ಟಳು ಸಂಯುಕ್ತಾ ಹೆಗ್ಡೆ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟು ಮಾಡಿದ ಒಂದೇ ಚಿತ್ರಕ್ಕೆ ಇರೋ ಬರೋ ವಿವಾದಗಳನ್ನೆಲ್ಲಾ ಮೈಮೇಲೆ ಎಳೆದುಕೊಂಡು ಹೆಚ್ಚು ಸುದ್ದಿಯಾಗುತ್ತಿದ್ದ ನಟಿ ಸಂಯುಕ್ತ ಹೆಗ್ಡೆ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಖರಾ ಮಾಡಿಕೊಂಡು ಹೊರ ಬಿದ್ದ ಬಳಿಕ ವಾರಕ್ಕೊಂದರಂತೆ ವಿಚಿತ್ರ ಭಂಗಿಯ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಪ್ಲೋಡ್ ಮಾಡಿ ವಿಕೃತಾನಂದ ಪಡುತ್ತಿದ್ದ ಸಂಯುಕ್ತ ಸ್ವಲ್ಪ ದಿನಗಳ ಕಾಲ ಎಲ್ಲವನ್ನು ಮರೆತು ಸುಮ್ಮನಾಗಿಬಿಟ್ಟಿದ್ದರು ಆದ್ರೆ ಇದೀಗ ಮತ್ತೊಮ್ಮೆ ಪ್ರತ್ಯಕ್ಷವಾಗಿ ತನ್ನ ಬಾಯ್ ಫ್ರೆಂಡ್ ಜೊತೆ ಸುತ್ತಾಟ ತಿರುಗಾಟ ಜೋರಾಗಿ ನಡೆಸುತ್ತಿದ್ದಳು ಸಂಯುಕ್ತ.

 

 

 

 

ಸಂಯುಕ್ತಾ ಜೆಕ್ ಭಾಗದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅವರ ಬಾಯ್ಫ್ರೆಂಡ್ ಎಂದು ಹೇಳಲಾದ ಕ್ರಿಸ್ ಸಾವರ್ ಕೂಡ ಸಂಯುಕ್ತಾಗೆ ಸಾಥ್ ನೀಡಿದ್ದಾರೆ
ಕ್ರಿಸ್​ ಜೊತೆ ಸಂಯುಕ್ತಾ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಮಾತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ವಿದೇಶಿ ಹುಡುಗನೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದರು.

ಇನ್ನೇನು ಚಿತ್ರರಂಗ ಮರೆತು ಬಿಟ್ಟಳ ಸಂಯುಕ್ತ ಎನ್ನುವಾಗಲೇ ತಮಿಳು ಕಾಲಿವುಡ್ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ, ‘ಕೋಮಲಿ’ ಚಿತ್ರದಲ್ಲಿ ಜಯಂ ರವಿ ಹಾಗು ಕಾಜಲ್ ಅಗರವಾಲ್ ನಾಯಕ ನಾಯಕಿಯಾಗಿ ನಟಿಸಲಿದ್ದಾರೆ, ಅಂದಹಾಗೆ ಕಿರಿಕ್ ಹುಡುಗಿ ಸಂಯುಕ್ತ ಕೂಡ ಈ ಚಿತ್ರದಲ್ಲಿ ಶಾಲಾಬಾಲಕಿ ಪಾತ್ರದಲ್ಲಿ ಮಿಂಚಿದ್ದಾರೆ , ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ .

 

 

ಕೋಮಲಿ ಚಿತ್ರವನ್ನು ಪ್ರದೀಪ್ ರಂಗನಾಥನ್ ನಿರ್ದೇಶನ ಮಾಡಿದ್ದಾರೆ ಈ ಚಿತ್ರ ಆಗಸ್ಟ್ 15 ರಂದು ತೆರೆಕಾಣಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top