fbpx
ಸಮಾಚಾರ

ವೈರಲ್ ವಿಡಿಯೋ ಪುರಾಣ ಪ್ರದೀಪ್ ಜೋಶಿ ದಾರಿಯನ್ನೇ ಹಿಡಿತಾರಾ ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ

ಬಿಜೆಪಿ ತನ್ನ ಉಜ್ಜಯಿನಿ ವಿಭಾಗದ ಕಾರ್ಯದರ್ಶಿ ಪ್ರದೀಪ್ ಜೋಶಿಯನ್ನು ತೆಗೆದುಹಾಕಿತ್ತು , ಯುವಕರನ್ನು ಸ್ವಂತ ಇಚ್ಛೆಗೆ ಬಳಸಿಕೊಳ್ಳುತ್ತಿದ್ದಾರೆ ಹಾಗೆಯೇ ಕೊಲ್ಲುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು, ಮೀಡಿಯಾ ಹಾಗು ಸೋಶಿಯಲ್ ಮೀಡಿಯಾಗಳಲ್ಲಿ 20 ವರ್ಷದ ಹುಡುಗನ ಜೊತೆ ನಡೆಸಿದರು ಎಂಬ ಆಡಿಯೋ ವೈರಲ್ ಆದ ಬಳಿಕ ಪ್ರದೀಪ್ ಜೋಶಿ (55) ಅವರನ್ನು ಅಮಾನತುಗೊಳಿಸಲಾಗಿದೆ.

 

 

ತಿಂಗಳುಗಳ ಹಿಂದೆ ಕೊಲ್ಲಲ್ಪಟ್ಟ ಯುವಕನ ಸಾವಿನ ಹಿಂದೆ ಪ್ರದೀಪ್ ಜೋಶಿ ಕೈವಾಡವಿದೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ರಾಕೇಶ್ ಸಿಂಗ್ ಯಾದವ್ ಆರೋಪ ಮಾಡಿದ್ದರು, ಉಜ್ಜಯಿನಿ ಬಳಿಯ ಜೌರಾ ಪಟ್ಟಣ ಮೂಲದ ನಾಪತ್ತೆಯಾದ ಯುವಕನನ್ನು ಆತನ ಕುಟುಂಬ ಶೋಧ ನಡೆಸಿ ಬಳಿಕ ಯುವಕ ಶವವಾಗಿ ದೊರೆತಿದ್ದ,

ಉಜ್ಜಯಿನಿ ವಿಭಾಗಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಜೋಶಿ ವಿರುದ್ಧ ಪಕ್ಷದ ಕಾರ್ಯಕರ್ತರಿಂದ ದೂರುಗಳು ಬಂದ ನಂತರ ಆತನನ್ನು ಆರ್ ಎಸ್ ಎಸ್ ಹಾಗು ಬಿಜೆಪಿಯಿಂದ ಅಮಾನತ್ತು ಗೊಳಿಸಲಾಗಿತ್ತು.

ಇದೀಗಾ ಕರ್ನಾಟಕದಲ್ಲಿ ಅರವಿಂದ್ ಲಿಂಬಾವಳಿ ಅವರ ವಿರುದ್ಧ ಳೆಯ ವಯಸ್ಸಿನ ಹುಡುಗರನ್ನು ಯಾವ ರೀತಿ ತಮ್ಮ ಚೆಲ್ಲಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿ ಬರುತ್ತಿದ್ದು ಇದೆ ಸಂಬಂಧ ಸಂತ್ರಸ್ತ ಯುವಕರೊಂದಿಗೆ ಈಶ್ವರಪ್ಪ ಮಾತಾಡಿದ್ದಾರೆ ಎಂಬ ಆಡಿಯೋ ಕ್ಲಿಪ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂಪೂರ್ಣ ಮಾಹಿತಿಗೆ ಈ ವರದಿ ಓದಿ – ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಎಳೆಯ ಹುಡುಗರಿಗೆ ರಾತ್ರಿಯಲ್ಲ ಕಾಟ,ಚೆಲ್ಲಾಟ ನಿಜವೆಷ್ಟು ಸುಳ್ಳೆಷ್ಟು

ಆರೋಪವೆನಾದರು ಸಾಬೀತಾದರೆ ಪಕ್ಷದಿಂದ ಉಚ್ಛಾಟನೆಗೆ ಒಳಗಾಗುವರೇ ಅರವಿಂದ್ ಲಿಂಬಾವಳಿ ಕಾದು ನೋಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top