fbpx
ಸಮಾಚಾರ

“ನಮ್ಮ ಪಕ್ಷದವರೂ ನನ್ನ ಮೇಲೆ ಪಿತೂರಿ ಮಾಡುತ್ತಿದ್ದಾರೆ” ಸದನದಲ್ಲಿ ಕಣ್ಣೀರು ಹಾಕಿದ ಅರವಿಂದ ಲಿಂಬಾವಳಿ.

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸದನದಲ್ಲಿ ಕಣ್ಣೀರು ಹಾಕಿದ್ದಾರೆ. ತಮ್ಮ ಮನದಲ್ಲಿನ ನೋವನ್ನು ತೋಡಿಕೊಂಡಿದ್ದಾರೆ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು ಈ ಬಗ್ಗೆ ತನಿಖೆಯಾಗಬೇಕು ಎನ್ನುತ್ತಲೇ ನನ್ನ ಮಾನ ಹರಾಜು ಮಾಡಲು ಕೆಲವು ಷಡ್ಯಂತ್ರ ನಡೆಸಿದ್ದಾರೆ. ಇಂದು ನನ್ನ ಬಗ್ಗೆ ಆಗಿದೆ. ನಾಳೆ ನಿಮ್ಮ ಬಗ್ಗೆಯೂ ಈ ರೀತಿಯ ಅಪಪ್ರಚಾರ ಆಗುತ್ತದೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು..

ಅವಮಾನವನ್ನು ಅನುಭವಿಸಿದವನಿಗೆ ಅದರ ನಿಜವಾದ ತಿವಿತದ ನೋವು ಗೊತ್ತಾಗುತ್ತದೆ. ನನ್ನ ಬಗ್ಗೆ ಯಾರು ಅಪಪ್ರಚಾರ ಮಾಡಿದರೋ ಗೊತ್ತಿಲ್ಲ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದರು. ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ರಮೇಶ್ ಕುಮಾರ್, ನೀವು ಬಹಳ ಕಾಲದಿಂದ ಸದನದಲ್ಲಿ ಇದ್ದವರು.. ದಯವಿಟ್ಟು ಕುಳಿತುಕೊಳ್ಳಿ ಎಂದು ಮನವಿ ಮಾಡಿಕೊಂಡರು.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಲಿಂಬಾವಳಿ “ಈ ಷಡ್ಯಂತ್ರದ ಭಾಗವಾಗಿ ಆಡಳಿತಾರೂಢ ಜನತಾ ದಳದ ನಾಯಕರೇ ಇದರಲ್ಲಿ ತೊಡಗಿದ್ದಾರೆ. ಬಿಜೆಪಿಯ ಒಂದಿಬ್ಬರು ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ. ಸಂದರ್ಭ ಬಂದಾಗ ಎಲ್ಲಾ ವಿವರಗಳನ್ನ ನೀಡುತ್ತೇನೆ” ಎಂದು ಹೇಳಿದ್ದರು.

ಕೆಲ ದಿನಗಳ ಹಿಂದೆ ಅರವಿಂದ್ ಲಿಂಬಾವಳಿ ಅವರದ್ದೆನ್ನಲಾದ ಅಶ್ಲೀಲ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಫೇಸ್​ಬುಕ್​ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ, ಇದು ತನ್ನ ತೇಜೋವಧೆ ಮಾಡಲು ನಡೆದಿರುವ ಪಿತೂರಿ ಇದು. ತಾನು ರಾಜಕೀಯವಾಗಿ ಬೆಳೆಯದಂತೆ ವಿರೋಧಿಗಳು ಮಾಡಿರುವ ಸುಳ್ಳು ಸೃಷ್ಟಿ ಇದು ಎಂದು ಅರವಿಂದ್ ಲಿಂಬಾವಳಿ ಸ್ಪಷ್ಟಪಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top