fbpx
ಸಮಾಚಾರ

ವಿನೋದ್ ರಾಜ್ ರನ್ನು ನಿರ್ಲಕ್ಷಿಸಿದವರ ವಿರುದ್ಧ ಬೇಸರ ವ್ಯಕ್ತಪಡಿಸಿದ ಜಗ್ಗೇಶ್.

ಕನ್ನಡದ ಮಟ್ಟಿಗೆ ಟ್ವಿಟರ್’ನಲ್ಲಿ ಅತಿಹೆಚ್ಚು ಸಕ್ರಿಯವಾಗಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ. ಆಗಾಗ ಜಗ್ಗೇಶ್ ಮನದ ಮಾತುಗಳನ್ನು ಟ್ವಿಟರ್ ನಲ್ಲೆ ದಾಖಲಿಸುತ್ತಿರುತ್ತಾರೆ..ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.. ಇದೀಗ ಜಗ್ಗೇಶ್ ತಮ್ಮ ಟ್ವಿಟರ್ ನಲ್ಲಿ ವಿನೋದ್ ರಾಜ್ ಅವರ ಬಗ್ಗೆ ಬೇಸರದ ಟ್ವೀಟ್ ಒಂದನ್ನು ಮಾಡಿದ್ದಾರೆ. ನಟ ವಿನೋದ್ ರಾಜ್ ಒಳ್ಳೆಯ ಡ್ಯಾನ್ಸರ್ ಆದರೆ, ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ಜಗ್ಗೇಶ್ ಅವರ ಬೇಸರವಾಗಿದೆ.

 

 

ಸದ್ಯ ಮನೋರಂಜನಾ ವಾಹಿನಿಗಳಲ್ಲಿ ಚಾಲ್ತಿಯಲ್ಲಿರುವ ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಡಾನ್ಸ್ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದ ಕೆಲವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ 80ರ ದಶಕದಲ್ಲೇ ಡಾನ್ಸ್ ನಲ್ಲಿ ನಂಬರ್ ಒನ್ ಎನಿಸಿಕೊಂಡಿದ್ದ ವಿನೋದ್ ರಾಜ್ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲೇ ಇದ್ದವು. ಇದೀಗ ಜಗ್ಗೇಶ್ ಕೂಡ ಇದೆ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

”ಇಂದಿನ ಡ್ಯಾನ್ಸರ್ ಗಳು ಹುಟ್ಟುವ ಮೊದಲೆ ಕನ್ನಡಿಗರ ಹಾಗು ನನ್ನ 87 ರಲ್ಲೆ ಹುಚ್ಚೆಬ್ಬಿಸಿದ ಪ್ರತಿಭಾವಂತ ನಟ, ನಾಟ್ಯದ ವ್ಯಾಕರಣ. ಅರಿಯದವರ ರಿಯಾಲಿಟಿಗೆ ಶೋ ತೀರ್ಪುಗಾರ ಮಾಡುವ ಬದಲು ವಿನೋದ ರಾಜನನ್ನು ಬಳಸಿ. ನಿಮ್ಮ ಶೋಗಳ ಘನತೆ ಇನ್ನು ಹೆಚ್ಚಾಗುತ್ತೆ. ನನ್ನ ನೇರ ವೈಯಕ್ತಿಕ ಅಭಿಪ್ರಾಯ ಸತ್ಯ ಅನ್ನಿಸಿದರೆ ಒಪ್ಪಿ. ಒಪ್ಪಿಗೆ ಆಗದಿದ್ದರೆ ನಕ್ಕು ಮರೆತುಬಿಡಿ.” ಎಂದು ಜಗ್ಗೇಶ್ ಮಾಡಿದ್ದಾರೆ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಅರ್ಹತೆಯಿರುವ ವಿನೋದ್ ರಾಜ್ ಅವರಿಗೆ ತೀರ್ಪುಗಾರನಾಗುವ ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ,.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top