fbpx
ಸಮಾಚಾರ

ಪಾಕ್​ ಪ್ರಧಾನಿಗೆ ಕ್ಯಾರೇ ಎನ್ನದ ಅಮೇರಿಕ- ಸ್ವಾಗತಕ್ಕೆ ಬರಲಿಲ್ಲ ಯಾವೊಬ್ಬ ನಾಯಕ, ಇಮ್ರಾನ್​ ಖಾನ್​ಗೆ ತೀವ್ರ ಮುಖಭಂಗ.

ಪ್ರಧಾನಿಯಾದ ಬಳಿಕ ಮೊದಲ ಬಾರಿ ಅಮೆರಿಕಕ್ಕೆ ತೆರಳಿರುವ ಇಮ್ರಾನ್‌ ಖಾನ್‌ ಅವರನ್ನು ಸ್ವಾಗತಿಸಲು ಅಮೆರಿಕ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಬಾರದೆ ತೀವ್ರ ಮುಜುಗರವುಂಟು ಮಾಡಿದ್ದಾರೆ. 2017ರಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿ ಭೇಟಿ ನೀಡಿದಾಗ ಅದ್ಧೂರಿ ಸ್ವಾಗತ ನೀಡಿದ್ದ ಅದೇ ಅಮೆರಿಕ ಈಗ ಪಾಕಿಸ್ತಾನಕ್ಕೆ ಮುಖಭಂಗ ಮಾಡಿದೆ.

 

 

ವಾಷಿಂಗ್ಟನ್‌ ವಿಮಾನ ನಿಲ್ದಾಣದಲ್ಲಿ ಇಮ್ರಾನ್‌ ಸ್ವಾಗತಕ್ಕೆ ಅಮೆರಿಕ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಮಾತ್ರವಲ್ಲ ಟ್ರಂಪ್‌ ಸರಕಾರದ ಪ್ರಮುಖರಾರ‍ಯರೂ ಬಂದಿರಲಿಲ್ಲ. ಅವರನ್ನು ಬರಮಾಡಿಕೊಳ್ಳಲು ಅಮೆರಿಕದ ಶಿಷ್ಟಾಚಾರದ ಅಧಿಕಾರಿಯನ್ನು ಹೊರತುಪಡಿಸಿದರೆ ಬೇರಾರೂ ವಿಮಾನ ನಿಲ್ದಾಣಕ್ಕೆ ಆಗಮಿಸಿರಲಿಲ್ಲ.

ಇಮ್ರಾನ್ ಖಾನ್ ಗೂ ಮುನ್ನವೇ ಅಮೆರಿಕ ತಲುಪಿಕೊಂಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್​ ಖುರೇಷಿ ತಮ್ಮ ಪ್ರಧಾನಿಯನ್ನು ಬರಮಾಡಿಕೊಳ್ಳುವಲ್ಲಿ ಅಮೆರಿಕದ ಶಿಷ್ಟಾಚಾರದ ಅಧಿಕಾರಿಗೆ ಸಾಥ್​ ನೀಡಿದರು.

 

 

ಸಾಮಾನ್ಯವಾಗಿ ಅಮೆರಿಕ ಭೇಟಿಗೆ ಬರುವ ವಿದೇಶದ ಮುಖ್ಯಸ್ಥರೊಬ್ಬರನ್ನು ಶಿಷ್ಟಾಚಾರ ಆಧರಿಸಿ ಅಮೆರಿಕ ಸರ್ಕಾರದ ಅಧಿಕಾರಿಗಳು ಬರಮಾಡಿಕೊಳ್ಳುವುದು ವಾಡಿಕೆ. ಅದರಲ್ಲೂ ವಿಶೇಷವಾಗಿ ಪ್ರಧಾನಿ ಬರುತ್ತಾರೆ ಎಂದರೆ ಅಮೆರಿಕ ಅಧ್ಯಕ್ಷರೊಂದಿಗಿನ ಸ್ನೇಹವನ್ನು ಆಧರಿಸಿ ಸರ್ಕಾರದ ಉನ್ನತ ಅಧಿಕಾರಿಗಳೇ ಅವರನ್ನು ಎದಿರುಗೊಳ್ಳುತ್ತಾರೆ. ಆದರೆ, ಪಾಕಿಸ್ತಾನಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ನೀಡಲ್ಲ ಎಂಬ ಖಡಕ್‌ ಸಂದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಮೂಲಕ ರವಾನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top