fbpx
ಸಮಾಚಾರ

ವ್ಯಾಸರಾಜ ಬೃಂದಾವನ ಧ್ವಂಸ ಪ್ರಕರಣಕ್ಕೆ ಭಾರಿ ಟ್ವಿಸ್ಟ್, ರಾಮ ದೇವಸ್ಥಾನದ ಅರ್ಚಕನೇ ಆ ಕಿಡಿಗೇಡಿ

ಆನೆಗುಂದಿ ಸಮೀಪವಿರುವ ನವಬೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ದುಷ್ಕರ್ಮಿಗಳು ನಿಧಿಯ ಆಸೆಗಾಗಿ ಬುಧವಾರ ರಾತ್ರಿ ನವಬೃಂದಾವನವನ್ನು ಅಗೆದು ಹಾಕಿದ್ದಾರೆ. ವೃಂದಾವನದ ಕೆಳಭಾಗ ಸಂಪೂರ್ಣ ಅಗೆಯಲಾಗಿದೆ. ದುಷ್ಕರ್ಮಿಗಳು ನಿಧಿಯಾಸೆಗೆ ವೃಂದಾವನ ಆಗೆದಿರುವ ಶಂಕೆ ವ್ಯಕ್ತವಾಗಿತ್ತು ಇದೀಗಾ ವ್ಯಾಸರಾಜ ತೀರ್ಥರ ಧ್ವಂಸ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ರಾಮ ಸೇವಸ್ಥಾನದ ಅರ್ಚಕನೇ ನಿಧಿಯ ಆಸೆಗಾಗಿ ವ್ಯಾಸರಾಜ ತೀರ್ಥರ ಸಮಾಧಿ ಧ್ವಂಸ ಮಾಡಿಸಿದ್ಧಾನೆ ಎಂದು ಪೊಲೀಸ್​​ ತನಿಖೆಯಲ್ಲಿ ಬಯಲಾಗಿದೆ.

ವ್ಯಾಸರಾಜರು ವಿಜಯನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದವರು. ಪುರಂದರದಾಸರಿಗೆ ದೀಕ್ಷೆ ಕೊಟ್ಟವರು. ಅವರು ಮಾಡಿದ ಕಾರ್ಯಗಳು ನಿತ್ಯದಲ್ಲಿಯೂ ಸ್ಮರಣೀಯವಾದುದು. ಅವರಿಗೆ ಆಗಿರುವ ಈ ಅಪಚಾರ ಅಕ್ಷಮ್ಯ. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷ ವಿಧಿಸಬೇಕು. ಸರ್ಕಾರ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂಬ ಕೂಗು ಕೇಳಿಬಂದಿತ್ತು.

ಎಸ್ಪಿ ರೇಣುಕಾ ಕೆ.ಸುಕುಮಾರ್ ನೇತೃತ್ವದ ಪೊಲೀಸ್​ ತಂಡ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು. ಇದೀಗ ನಿಧಿಗಳ್ಳರೇ ಈ ಕೃತ್ಯ ಎಸಗಿದ್ದಾರೆ. ಈ ಕೃತ್ಯದ ದೇವಸ್ಥಾನ ಅರ್ಚನ ಕೈವಾಡವಿದೆ. ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಇಬ್ಬರಿಗಾಗಿ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದು ಎಸ್ಪಿ ರೇಣುಕಾ ಕೆ.ಸುಕುಮಾರ್ ತಿಳಿಸಿದ್ಧಾರೆ.

 

 

ಪುನರ್ ನಿರ್ಮಾಣಗೊಂಡ ವ್ಯಾಸರಾಜ ವೃಂದಾವನ

ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿಯ ವ್ಯಾಸರಾಜ ವೃಂದಾವನವನ್ನು ಸಾವಿರಾರು ಭಕ್ತರು ಸೇರಿ ಪುನರ್ ನಿರ್ಮಾಣ ಮಾಡಿ ಶುದ್ಧ ಕಾರ್ಯ ನಡೆಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ದುಷ್ಕರ್ಮಿಗಳು ವ್ಯಾಸರಾಜರ ವೃಂದಾವನ ಗುರುವಾರ ಬೆಳಗಿನ ಜಾವ ಧ್ವಂಸಗೊಳಿಸಿದ ಹಿನ್ನಲೆಯಲ್ಲಿ ಶುಕ್ರವಾರ ನೂರಾರು ಭಕ್ತರ ಶ್ರಮದಾನದಿಂದ ಪುನರ್ ನಿರ್ಮಾಣ ಮಾಡಲಾಯಿತು. ಮುಂಬಯಿ ಮೂಲದ ವಾಸ್ತುಶಾಸ್ತ್ರಜ್ಞ ನೀರಜ್ ಕುಲಕರ್ಣಿ, ತಮಿಳುನಾಡು ಮೂಲದ ಶಿಲ್ಪಿಗಳ ನೇತೃತ್ವದಲ್ಲಿ ನಾನಾ ಕಡೆಯಿಂದ ಬಂದಿದ್ದ ಭಕ್ತರು ಕೈಜೋಡಿಸಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top