fbpx
ಸಿನಿಮಾ

ತಿಕ್ಕಲುತನಕ್ಕೆ ಹೆಸರುವಾಸಿಯಾದ ರಾಮ್​ಗೋಪಾಲ್​ ವರ್ಮಾ ನಟಿಯರ ಮೇಲೆ ಬಿಯರ್​​​ ಎರಚಿ ಮಾಡ್ಕೊಂಡ್ರು ಇನ್ನೊಂದು ಎಡವಟ್ಟು

ತಿಕ್ಕಲುತನಗಳಿಗೆ ಹೆಸರುವಾಸಿಯಾಗಿರೋ ಬಹುಭಾಷಾ ನಿರ್ದೇಶಕ ರಾಂಗೋಪಾಲ್ ವರ್ಮಾ ವಿವಾದಗಳನ್ನ ಸೃಷ್ಟಿಸೋದರಲ್ಲಿಯೂ ನಿಸ್ಸೀಮ. ಒಂದು ಕಾಲದಲ್ಲಿ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದ ವರ್ಮಾ ಇತ್ತೀಚಿಗೆ ಅವರಿರಿವರ ಮೇಲೆ ಸುಖಾ ಸುಮ್ಮನೆ ಹರಿ ಹಾಯುತ್ತಾ, ಕೆಣಕುವ ಮೂಲಕ ಹೊರ ಹಾಕುತ್ತಿದ್ದಾರೆ.. ತಮ್ಮ ಸಿನಿಮಾಗಳಿಗೆ ಸುದ್ದಿಯಾಗುವ ಬದಲು ತಮ್ಮ ವಿವಾದಿತ ಮತ್ತು ವಿಚಿತ್ರ ಟ್ವೀಟ್ ಗಳಿಂದಲೇ ಸುದ್ದಿಯಾಗುವವರು RGV

ಸದಾ ಒಂದಿಲ್ಲೊಂದು ವಿವಾದಾತ್ಮಕ ಟ್ವೀಟ್ ಮಾಡುವುದರಲ್ಲೇ ಮುಳುಗಿರುವ ರಾಮ್​ಗೋಪಾಲ್​ ವರ್ಮಾ ಟ್ವಿಟ್ಟರ್ ನಲ್ಲಿ​ ವಿಡಿಯೋವೊಂದನ್ನು ಅಪ್ಲೋಡ್​ ಮಾಡಿದ್ದು, ಆ ವಿಡಿಯೋದಲ್ಲಿ ವರ್ಮ ಬಿಯರ್​ ಬಾಟಲಿ ಹಿಡಿದುಕೊಂಡು ಕುಣಿದು ಕುಪ್ಪಳಿಸಿದ್ದಾರೆ.

ಪೂರಿ ಜಗನ್ನಾಥ್​ ನಿರ್ದೇಶನದ ಇಸ್ಮಾರ್ಟ್​ ಶಂಕರ್​ ಸಿನೆಮಾ ಸಕ್ಸಸ್​ ಕಂಡಿದ್ದು, ಈ ಕಾರಣಕ್ಕೆ ರಾಮ್​ ಗೋಪಾಲ್​ ವರ್ಮಾ ಪಾರ್ಟಿ ಆಯೋಜನೆ ಮಾಡಿದ್ದರು. ಪಾರ್ಟಿಯಲ್ಲಿ ಇಸ್ಮಾರ್ಟ್​ ಶಂಕರ್​ ಚಿತ್ರತಂಡ ಹಾಜರಾಗಿತ್ತು. ಸಿನೆಮಾ ಸಕ್ಸಸ್​ ಸಂಭ್ರಮದಲ್ಲಿದ್ದ ರಾಮ್​ ಗೋಪಾಲ್​ ವರ್ಮಾ ಬಿಯರ್​ ಕೈಯಲ್ಲಿ ಹಿಡಿದುಕೊಂಡು ಸಂಭ್ರಮಿಸಿದ್ದಾರೆ. ಸಕ್ಸಸ್​ ಪಾರ್ಟಿಯಲ್ಲಿ ಪೂರಿ ಜಗನ್ನಾಥ್​, ಚಾರ್ಮಿ ಕೌರ್​, ನಭಾ ನಟೇಶ್​ ಸೆರಿದಂತೆ ಹಲವರು ಭಾಗಿಯಾಗಿದ್ದರು.

ಹೆಣ್ಣು ಹಾಗು ಹೆಂಡ ಎಂದರೆ ಎಲ್ಲಿಲ್ಲದ ಇಷ್ಟ ರಾಂಗೋಪಾಲ್ ವರ್ಮಾ ಅವರಿಗೆ, ಪಾರ್ಟಿ ಮಾಡುವ ವೇಳೆ ಅಲ್ಲಿದ್ದ ಕನ್ನಡ ನಟಿ ನಭಾ ನಟೇಶ್, ಚಾರ್ಮಿ ಕೌರ್, ನಿಧಿ ಅಗರ್ವಾಲ್ ಅವರ ಮೈಮೇಲೆಯಲ್ಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ್ದಾರೆ.

ಇನ್ನು ಹಬ್ಬವೇ ಆದಷ್ಟು ಸಂತೋಷ ಪಟ್ಟಿಕೊಳ್ಳುತ್ತಿರುವ ಟ್ರೊಲ್ ಮಂದಿ ಈ ವಿಡಿಯೋವನ್ನು ಬೇರೆಬೇರೆ ರೀತಿಯಲ್ಲಿ ಎಡಿಟ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top