fbpx
ಸಮಾಚಾರ

ಎಲ್ಲರೂ ಕೆಲಸ ಮಾಡಿಸ್ಕೊಳೋಕೆ ಬರ್ತೀದ್ರು, ಈಗ ಚೂರಿ ಹಾಕಿ ಹೋಗಿದ್ದಾರೆ, ನೊಂದ ಸಿದ್ದರಾಮಯ್ಯ ಮಾತುಗಳು

ಕೆಲ ಶಾಸಕರು ನನಗೆ ಆಪ್ತರು. ನಾನೇ ಅವರನ್ನು ಕಳುಹಿಸಿದ್ದೇನೆ ಎಂದು ಅಪ ಪ್ರಚಾರ ಮಾಡಲಾಗುತ್ತಿದೆ.‌ ಹೋದವರಷ್ಟೇ ಅಲ್ಲ, ಇಲ್ಲಿ ಇರುವವರೂ ನನಗೆ ಆಪ್ತರು. ನಾನು ನಿಮ್ಮಲ್ಲಿ ಯಾರಿಗಾದರೂ ಬಿಜೆಪಿಗೆ ಹೋಗುವಂತೆ ಹೇಳಿದ್ದೀನಾ. ಅಂತಹ ನೀಚ ಕೆಲಸವನ್ನು ನಾನು ಮಾಡಲಾರೆ. ಇವರು ಮಾಡಿದ ಕೆಲಸದಿಂದ ನೋವಾಗಿದೆ.

ಬಸವರಾಜು, ಸೋಮಶೇಖರ, ಮುನಿರತ್ನ ಹೇಳಿದ ಕೆಲಸವನ್ನೆಲ್ಲ ಮಾಡಿಕೊಟ್ಟೆ. ಅವರೇ ಚೂರಿ ಹಾಕಿದರು.

ನನ್ನ ಬಗ್ಗೆ ಅಪಪ್ರಚಾರ ಮಾಡಿದರೆ ಸಿಗುವ ಲಾಭವಾದರೂ ಏನು ? ಎಂಟಿಬಿ, ಮುನಿರತ್ನ, ಸುಧಾಕರ್ ಜೊತೆ ಗಂಟೆಗಟ್ಟಲೆ ಮಾತನಾಡಿದಾಗ ನಾವೂ ಎಲ್ಲೂ ಹೋಗುವುದಿಲ್ಲ ಎಂದು ಹೇಳಿ ಕೈ ಕೊಟ್ಟರು. ಮೋಸ ಮಾಡಿದರು. ಇದಕ್ಕಿಂತ ನೋವು ಇನ್ನೇನು ಆಗಬೇಕು.

ಬಸವರಾಜು ಸಿದ್ದರಾಮಯ್ಯ ಜೊತೆ ಇದ್ದರು, ಮುನಿರತ್ನ ಸಿದ್ದರಾಮಯ್ಯ ಜೊತೆ ಇದ್ದರು, ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಜೊತೆ ಇದ್ದರು, ಕಳೆದ ಸಲ ಎಂಎಲ್‌ಎ ಗಳಾಗಿದ್ದವರೆಲ್ಲ ನನ್ನ ಜೊತೆಲೇ ಇದ್ದರು. ಎಲ್ಲರೂ ಕೆಲಸ ಮಾಡಿಸ್ಕೊಳೋಕೆ ಬರ್ತೀದ್ರು, ಈಗ ಚೂರಿ ಹಾಕಿ ಹೋಗಿದ್ದಾರೆ.

ಈಗ ಪಕ್ಷ ಬಿಟ್ಟ ಇದೇ ಮೂರು ಜನ ನನ್ನತ್ರ ಸಾಕಷ್ಟು ಕೆಲಸ ಮಾಡಿಸ್ಕೊಂಡಿದಾರೆ. ಬೆಂಗಳೂರು ನಗರದ ಶಾಸಕರು ಹೇಳಿದ ಕೆಲಸ ಎಲ್ಲ ಮಾಡಿಸಿ ಕೊಟ್ಟಿದೀನಿ. ಅವರೇ ನನಗೆ ಚೂರಿ ಹಾಕಿದಾರೆ.‌ ಜಗತ್ತಲ್ಲಿ ನಂಬಿಕೆ ಎನ್ನುವ ಪದಕ್ಕೆ ಬೆಲೆಯೇ ಇಲ್ಲ.

ಶ್ರೀಮಂತ ಪಾಟೀಲ ಒಂದು ಸಲ ಫೋನ್ ಮಾಡಿ ನಂದೊಂದು ಕೆಲಸ ಮುಖ್ಯಮಂತ್ರಿ ಗಳು ಮಾಡಿಕೊಟ್ಟಿಲ್ಲ. ನಂದೊಂದು ಸಕ್ಕರೆ ಕಾರ್ಖಾನೆ ಇದೆ ಎಂದು ಹೇಳಿದ್ದ. ಆಗಲೇ ಪಾಟೀಲ್ ಪಕ್ಷ ಬಿಡ್ತಾರೆ ಎಂಬ ಸುದ್ದಿ ಹಬ್ಬಿತ್ತು. ನಾನು ನೇರವಾಗಿ ಕೇಳ್ದೆ ಏನಯ್ಯ ಪಕ್ಷ ಬಿಡ್ತೀಯ ಅಂತ, ಅದಕ್ಕೆ ಅವನು ಇಲ್ಲ ಸಾರ್ ನಂದೊಂದು ಕೆಲಸ ಆದ್ರೆ ಸಾಕು ಅಂದಿದ್ದ. ತಕ್ಷಣ ನಾನೂ ಮುಖ್ಯಮಂತ್ರಿಯವರಿಗೆ ಕಾಲ್ ಮಾಡಿ ಕೇಳಿದೆ. ಅವರು ಕೆಲಸ ಮಾಡಿಕೊಡೋಕೆ ಒಪ್ಪಿದ್ರು.

ಇಂಥವರ ಜೊತೆ ರಾಜಕಾರಣ ಮಾಡುವುದು ಬಹಳ ಕಷ್ಟ. ನನಗೆ ಸಾಕಷ್ಟು ನೋವಾಗಿಬಿಟ್ಟಿದೆ.

ಯಾರೇ ಆದರೂ ತಮ್ಮನ್ನು ತಾವು ಮಾರಾಟ ಮಾಡಿಕೊಂಡು ಹೋಗ್ತೀವಿ ಎಂಬ ನಿರ್ಧಾರಕ್ಕೆ ಬಂದಿದ್ರೆ ಬ್ರಹ್ಮ ಬಂದ್ರೂ ತಡೆಯೋಕಾಗಲ್ಲ. ಮುನಿರತ್ನ ಜೊತೆ ನಾನು ಡಿಕೆಶಿ, ಪರಮೇಶ್ವರ, ವೇಣುಗೋಪಾಲ್ ಎರಡು ಗಂಟೆ ಮಾತಾಡಿದ್ವಿ. ನಾನೆಲ್ಲೂ ಹೋಗಲ್ಲಣ್ಣ ಅಂತ ಹೇಳ್ತಾ ಹೇಳ್ತಾನೆ ಹೋಗಿದ್ದಾನೆ.

ಎಂಟಿಬಿನ ಡಿಕೆಶಿ ನನ್ನ ಮನೆಗೆ ಕರೆದುಕೊಂಡು ಬಂದ್ರು, ನನ್ನ ಮನೆ ಒಳಗೆ ಎಲ್ಲೂ ಹೋಗಲ್ಲ ಹೇಳಿ ಗೇಟತ್ರ ಹೋಗಿ ಸುಧಾಕರ್ ಬರದೆ ನಾನು ಬಂದು ಏನ್ ಮಾಡ್ಲಿ ಅಂತ ಹೇಳಿಕೆ ಕೊಟ್ಟಿದ್ರು.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ :

ರಾಜಕೀಯದಲ್ಲಿ ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಂಬಿಕೆ ಎಂಬ ಪದಕ್ಕೆ ಇಲ್ಲಿ‌ ಅರ್ಥವೇ ಇಲ್ಲದಂತೆ ಆಗಿದೆ.‌

ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಬಳಿ ಎಲ್ಲ ಕೆಲಸಗಳನ್ನು ಮಾಡಿಸಿಕೊಂಡ ಶಾಸಕರೇ ಇದೀಗ ನನ್ನ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಈ ಮೂಲಕ ಹೇಸಿಗೆ ತಿನ್ನುವಂತ ಕೆಲಸ ಮಾಡಿದ್ದಾರೆ.

ಈ ತರ ಹೊಲಸು ರಾಜಕಾರಣ ಮಾಡೋರಿಗೆ ಏನು ಮಾಡೋಕಾಗುತ್ತೆ?
ಸುಧಾಕರ್‌ಗೆ ನಾನು, ವೇಣುಗೋಪಾಲ್ ಮತ್ತೆ ಮಹದೇವಪ್ಪ ಮೂರ್ ಗಂಟೆ ಕೂರಿಸ್ಕೊಂಡು ಹೇಳಿದೀವಿ.‌ ನಾನು ಕೇಳಿದೆ ನಿಂಗೆ ನಮ್ ಜೊತೆ ಇರೋಕೆ ಇಷ್ಟ ಇದ್ಯ ಇಲ್ವ ಎಂದು? ಇಷ್ಟ ಇದೆ ಅಂದ, ಸರಿ ಹಾಗಾದ್ರೆ ನಾಳೆ ಬಂದು ರಾಜೀನಾಮೆ ವಾಪಸ್ ತಗೊ‌ ಅಂದೆ. ಆಯ್ತು ನಾಳೆ ಹನ್ನೊಂದ್ ಗಂಟೆಗೆ ಬರ್ತೀನಿ ಅಂದ, ಬೆಳಿಗ್ಗೆ ಪತ್ತೆ ಇಲ್ಲ ಆಸಾಮಿ.

ಇವರೆಲ್ಲ ವಾಪಸ್ ಬಂದರೂ ಸೇರಿಸಿಕೊಳ್ಳಬಾರದು. ರಾಜಕೀಯ ಶುದ್ಧವಾಗಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top