fbpx
ಸಮಾಚಾರ

ಖಾಸಗಿ ಉದ್ಯೋಗಳಲ್ಲಿಯೂ ಸ್ಥಳೀಯರಿಗೆ 75% ಮೀಸಲಾತಿ ತಂದ ಆಂಧ್ರ ಸರ್ಕಾರ.

ಖಾಸಗಿ ಕೈಗಾರಿಕಾ ಘಟಕಗಳು ಮತ್ತು ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಾಯ್ದಿರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಆಂಧ್ರಪ್ರದೇಶ ಪಾತ್ರವಾಗಿದೆ. ಎಲ್ಲಾ ಖಾಸಗಿ ಉದ್ಯೋಗಗಳಲ್ಲಿ 75% ಸ್ಥಳೀಯರಿಗೆ ಕಾಯ್ದಿರಿಸಿದ ಮಸೂದೆಯನ್ನು ಸೋಮವಾರ ಶಾಸನ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮೂಲಕ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಭರವಸೆಯನ್ನು ಈಡೇರಿಸಿದ್ದಾರೆ.

ಅಗತ್ಯ ಕೌಶಲ್ಯ ಹೊಂದಿರುವ ಸ್ಥಳೀಯರು ಲಭ್ಯವಿಲ್ಲದಿದ್ದರೆ, ಕಂಪನಿಗಳು ಅವರಿಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ತರಬೇತಿ ನೀಡಿ ನಂತರ ಅವರನ್ನು ನೇಮಿಸಿಕೊಳ್ಳಬೇಕಾಗುತ್ತದೆ ಎಂದು ಹೊಸ ಕಾನೂನು ಹೇಳುತ್ತದೆ. ಕಾಯಿದೆ ಪ್ರಾರಂಭವಾದ ಮೂರು ವರ್ಷಗಳಲ್ಲಿ ಕಂಪನಿಗಳು ಈ ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ ಮತ್ತು ಸ್ಥಳೀಯ ನೇಮಕಾತಿಗಳ ಬಗ್ಗೆ ತ್ರೈಮಾಸಿಕ ವರದಿಗಳನ್ನು ನೋಡಲ್ ಏಜೆನ್ಸಿಗೆ ಒದಗಿಸಬೇಕಾಗುತ್ತದೆ.

ಖಾಸಗಿ ಉದ್ಯೋಗಗಳ ದೊಡ್ಡ ಭಾಗವನ್ನು ಸ್ಥಳೀಯರಿಗಾಗಿ ಕಾಯ್ದಿರಿಸುವ ಬಗ್ಗೆ ಅನೇಕ ರಾಜ್ಯಗಳಲ್ಲಿ ಚರ್ಚೆ ನಡೆಯುತ್ತಿದ್ದರೂ ಅದನ್ನು ಮಧ್ಯಪ್ರದೇಶ(70%) ಮತ್ತು ಅಂದ್ರವನ್ನು ಹೊರತು ಪಡಿಸಿ ಯಾವ ರಾಜ್ಯವೂ ಇನ್ನೂ ಜಾರಿಗೆ ತಂದಿಲ್ಲ. ಅಂದಹಾಗೆ 2018 ರ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಮದ್ಯರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಕೈಗಾರಿಕಾ ನೀತಿಯನ್ನು ಘೋಷಿಸಿದ್ದು, ಕಂಪೆನಿಗಳಲ್ಲಿ ಸ್ಥಳೀಯರಿಗೆ 70% ಉದ್ಯೋಗ ನೀಡುವುದನ್ನು ಜೂಲೈ 09 ರಿಂದ ಕಡ್ಡಾಯಗೊಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top