fbpx
ಸಮಾಚಾರ

ಈ ಕಾರಣಕ್ಕಾಗಿ ಬಿಜೆಪಿ ಶಾಸಕನ ಮೇಲೆ ಕೇಸ್ ಹಾಕಲು ಮುಂದಾದ ರವಿ ಬೆಳೆಗೆರೆ.

ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ಓ ಮನಸೇ ಪಾಕ್ಷಿಕದ ಮಾಲೀಕರು- ಸಂಪಾದಕರಾದ ರವಿ ಬೆಳಗೆರೆ ಬಿಜೆಪಿ ಶಾಸಕರೊಬ್ಬರ ನಿಜರೂಪವನ್ನು ಬಯಲು ಮಾಡಿದ್ದಾರೆ. ಆ ಶಾಸಕ ಯಾರು ಎಂದು ಹೆಸರನ್ನು ಹೇಳಲು ಇಚ್ಛಿಸದ ರವಿ ಬೆಳಗೆರೆ ಹೆಸರು ಹೇಳದೇ ‘ಲಿಂಬು ಪಾನಿ’ ಎಂದೇ ಶಾಸಕನ ಬೆವರಿಳಿಸಿದ್ದಾರೆ.

 

 

ಇದು ದುರಭ್ಯಾಸವಲ್ಲ:
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ರವಿ ಬೆಳಗೆರೆ ಶಾಸಕನ ಸಲಿಂಗ ಕಾಮ, ಶಾಸಕರು ರೆಸಾರ್ಟ್ ರಾಜಕೀಯ ಎಲ್ಲದರ ಬಗ್ಗೆಯೂ ಕಟುವಾಗಿ ಟೀಕಿಸಿದ್ದಾರೆ. “ಮೋದಿಯಂತ ಬ್ರಹ್ಮಚಾರಿಯ ನಾಯಕತ್ವದಲ್ಲಿರುವ ಬಿಜೆಪಿ ಶಾಸಕನೊಬ್ಬ ತನ್ನ ವಿಕೃತಿ ಮೆರೆದಿದ್ದಾನೆ.. ಸಲಿಂಗತೆ ಅಪರಾಧವಲ್ಲ,ತಪ್ಪಲ್ಲ ನನಗೆ ಆ ಬಗ್ಗೆ ಯಾವುದೇ ವಿರೋಧವಿಲ್ಲ. ಇದು ದುರಭ್ಯಾಸವಲ್ಲ, ಸಲಿಂಗಿಗಳಿಗೆ ಅದು ಹುಟ್ಟಿನಿಂದಲೇ ಬಂದಿರುತ್ತದೆ.

ಕ್ರಿಯೆಯನ್ನು ವಿಡಿಯೋ ಮಾಡಿಕೊಂಡಿರುವುದು ತಪ್ಪು
“ಆದರೆ ಶಾಸಕ ಆ ಕ್ರಿಯೆಯನ್ನು ವಿಡಿಯೋ ಮಾಡಿಕೊಂಡಿರುವುದು ತಪ್ಪು, ಅಸಹ್ಯ.. ವಿಡಿಯೋ ಮಾಡಿಕೊಂಡ ನಂತರ ಅದು ಪಬ್ಲಿಕ್ ಆಗುವಂತೆ ಏಕೆ ಮಾಡಿದಿರಿ. ಒಮ್ಮೆ ಪಬ್ಲಿಕ್ ಆದರೆ ಅದು ವೈರಲ್ ಆಗುತ್ತೆ, ಮನ ಮರ್ಯಾದೆ ಹೋಗುತ್ತೆ.. ಒಳ್ಳೆಯ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕು, ಇದನ್ನು ಇಷ್ಟಪಡಬಾರದು.. ಇಂಥಾ ಶಾಸಕರು ನಮಗೆ ಬೇಕಾ?”

“ಶಾಸಕರನ್ನು ನೋಡಿದರೆ ಅಸಹ್ಯ ಆಗುತ್ತೆ. ಅವರು ಮುಂಬೈ ರೆಸಾರ್ಟ್ ಗೆ ಹೋಗ್ತಾರೆ ಶಾಸಕರು ಹೀಗೆ ರೆಸಾರ್ಟ್ ಮೊರೆ ಹೋಗುತ್ತಾರೆ ಎಂದು ಮೊದಲೇ ಗೊತ್ತಿದ್ದರೇ ಕೆಂಗಲ್ ಹನುಮತಯ್ಯ ಅವರೇ ಎರಡು ರೆಸಾರ್ಟ್ ಕಟ್ಟಿಸಿಬಿಡುತ್ತಿದ್ದರೋ ಏನೋ? ಅಂಥಾ ಹೀನ ಸ್ಥಿತಿ ನಮ್ಮ ರಾಜಕಾರಣಕ್ಕೆ ಬಂದಿದೆ. ಜನರು ಇದನ್ನು ನೋಡಿ ಎಚ್ಚೆತ್ತುಕೊಳ್ಳಬೇಕು. ಇಂಥವರನ್ನು ಆರಿಸಬೇಕು ಎಂಬುದನ್ನು ಇವರನ್ನು ನೋಡಿ ಕಲಿಯಬೇಕು. ಶಾಸಕರ ಆಯ್ಕೆ ನಮ್ಮ ಕೈನಲ್ಲಿದೆ, ಆತ ಸೋತರು ಸರಿ ಗೆದ್ದರೋ ಸರಿ ಆದರೆ ನಮ್ಮ ಓಟು ಒಬ್ಬ ಪ್ರಜ್ಞಾವಂತನಿಗೆ ಬೀಳಬೇಕು.”

ವಿಶ್ವವಿಖ್ಯಾತ ಪತ್ರಕರ್ತನ ಜೊತೆಯೂ ಇತ್ತು:
“ಈತ ಒಬ್ಬ ಮೂರ್ಖ, ಹುಚ್ಚ, ವಿಕೃತಿ.. ಈತ ಮಾಡುತ್ತಿರುವ ಕೆಲಸ ವಿಕೃತಿಯಲ್ಲ. ಆದರೆ ಅದನ್ನು ವಿಡಿಯೋ ಮಾಡಿರೋದು ವಿಕೃತಿ.. ಈ ಕೆಲಸವನ್ನು ಈ ಶಾಸಕ ಒಬ್ಬ ವಿಶ್ವವಿಖ್ಯಾತ ಹಿರಿಯ ಪತ್ರಕರ್ತನ ಜೊತೆ ಮಾಡುತ್ತಿದ್ದ. ಆರ್ ಆರ್ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಕೆಲಸ ನಡೆಯುತ್ತಿತ್ತು. ಅದೃಷ್ಟವಶಾತ್ ಅದರ ವಿಡಿಯೋ ಲೀಕ್ ಆಗಿರಲಿಲ್ಲ..”

ನ್ಯೂಸ್ ಚಾನೆಲ್ ಗಳ ಜೊತೆ ಡೀಲ್:
“ಆ ಶಾಸಕ ನನ್ನ ಬ್ಲಾಕ್ ಮೇಲೆ ಮಾಡಿ ಕೆಲವು ನ್ಯೂಸ್ ಚಾನೆಲ್ ಗಳು ಕೋಟಿಗಟ್ಟಲೆ ಹಣ ಕಿತ್ತುಕೊಂಡಿದ್ದಾರೆ. ವಿಶ್ವವಿಖ್ಯಾತ ಹಿರಿಯ ಪತ್ರಕರ್ತರೂ ಕೂಡ ಈ ಶಾಸಕನ ಕೆಲಸದಲ್ಲಿ ಜೊತೆಗೂಡಿದ್ದಾನೆ.”

ಶಾಸಕನ ಮೇಲೆ ಕೇಸ್:
ಸಲಿಂಗಿತನ ಅಪರಾಧವಲ್ಲ ಆದರೆ ಅದನ್ನು ವಿಡಿಯೋ ಮಾಡಿ ಸಾರ್ವಜನಿಕರ ಗಮನಕ್ಕೆ ತರುವುದು ದೊಡ್ಡ ಅಪರಾಧ. ಇದರ ಮೇಲೆಯೇ ಅವರ ಮೇಲೆ ಕೇಸ್ ಹಾಕಬಹುದು. ಹಾಗಾಗಿ ನಾನು ಈ ವಿಚ್ಛ್ರಾವಾಗಿ ಆ ‘ಲಿಂಬುಪಾನಿ’ ಶಾಸಕನ ಮೇಲೆ ಕೇಸ್ ಹಾಕುತ್ತಿದ್ದೇನೆ. ನನಗೆ ಬೆಂಬಲ ನೀಡಿ” ಎಂದು ರವಿ ಬೆಳಗೆರೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top