fbpx
ಸಮಾಚಾರ

ಬಿಡುಗಡೆಗೆ ಮುನ್ನವೇ ದಾಖಲೆ ಬರೆದ ಗೀತಾ- ಗಣೇಶ್ ಚಿತ್ರಕ್ಕೆ ಭಾರಿ ಬೆಲೆ ನೀಡಿದ ಅಮೆಜಾನ್ ಪ್ರೈಮ್.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಗೀತಾ, ಇನ್ನೂ ಚಿತ್ರೀಕರಣ ಹಂತದಲ್ಲಿರುವಂತೆಯೇ ದಾಖಲೆ ನಿರ್ಮಾಣ ಮಾಡಿದೆ. ಹೌದು.. ತೀವ್ರ ಕುತೂಹಲ ಕೆರಳಿಸಿರುವ ಗೀತಾ ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ಡಿಜಿಟಲ್ ಹಕ್ಕು ಬೇಡಿಕೆ ಸೃಷ್ಟಿಸಿಕೊಂಡಿದ್ದು, ಚಿತ್ರದ ಡಿಜಿಟಲ್ ಹಕ್ಕನ್ನು ಅಮೇಜಾನ್ ಪ್ರೈಮ್ ಸಂಸ್ಥೆ ಭಾರಿ ಮೊತ್ತ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಚಿತ್ರದ ಬಿಡುಗಡೆಗೆ ಕೆಲವೇ ಕೆಲವು ದಿನಗಳಿರುವಂತೆ, ಇದೀಗ ಚಿತ್ರದ ‘ಸೆಟಲೈಟ್ಸ್‌ ರೈಟ್ಸ್’ ಅಮೇಜಾನ್ ಪ್ರೈಮ್‌ಗೆ ಬರೋಬ್ಬರಿ 2.75 ಕೋಟಿಗೆ ಮಾರಾಟವಾಗಿದೆ ಎನ್ನಲಾಗಿದೆ. ಇನ್ನು ಗೀತಾ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಚಿತ್ರದ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ.

ಈ ಚಿತ್ರದಲ್ಲಿ ನಾಯಕಿಯಾಗಿ ನಟಿ ಶಾನ್ವಿ ಶ್ರೀವಾತ್ಸವ್ ನಟಿಸಿದ್ದಾರೆ. ಶಾನ್ವಿ ಶ್ರೀವಾತ್ಸವ್ ಜತೆ ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ಸೇರಿದಂತೆ ಮೂವರು ನಾಯಕಿಯರು ಈ ಚಿತ್ರದಲ್ಲಿದ್ದು, ಈಗಾಗಲೇ ಟೈಟಲ್ ಹಾಗು ಟೀಸರ್ನಿಂದಾಗಿ ಸಿಕ್ಕಾಪಟ್ಟೇ ಹೈಪ್ ಕ್ರಿಯೇಟ್ ಆಗಿದೆ. ಈ ಚಿತ್ರದಲ್ಲಿ ‘ಲವ್ ಜತೆ ಕನ್ನಡಾಭಿಮಾನ’ದ ಕಥೆಯು ಪ್ರೇಕ್ಷಕರ ಮನ ಗೆಲ್ಲುವ ಸೂಚನೆ ನೀಡಿದೆ.

ಈ ಹಿಂದೆ ನಟ ಶಂಕರ್​ ನಾಗ್​ ಅವರು ಅಭಿನಯಿಸಿದ್ದ ಸಿನಿಮಾದ ಹೆಸರನ್ನೇ ಗಣೇಶ್​ ಮತ್ತೆ ತಮ್ಮ ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಗೋಲ್ಡನ್​ ಮೂವೀಸ್​ ಹಾಗೂ ಎಸ್ ಎಸ್​ ಫಿಲ್ಮ್ಸ್​ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top