fbpx
ಸಮಾಚಾರ

ತಾಯಿಯಾಗುತ್ತಿರುವ ಸಂತಸ ಸುದ್ದಿಯನ್ನು ರಿವೀಲ್ ಮಾಡಿದ ‘ಮಜಾ ಟಾಕೀಸ್ ರಾಣಿ’ ಶ್ವೇತಾ ಚಂಗಪ್ಪ.

ಕಿರುತೆರೆ ಮೂಲಕವೇ ಹೆಚ್ಚು ಜನಪ್ರಿಯರಾಗಿರುವ ನಟಿ ಶ್ವೇತಾ ಚಂಗಪ್ಪ ಅವರು ತಾಯಿ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪತಿಯೊಂದಿಗೆ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ಅವರು ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

 

 

 

View this post on Instagram

 

Hi my dear friends ❣️I’m very greatful to all your LOVE and BLESSINGS showered on me all these years, for the work I have been doing and the PERSON I am♥️….. U all have known me for more than a decade. U guys have LIKED ME, LOVED ME,n BLESSED ME for the kind of roles I have been doing in the television & cinemas on this SPECIAL DAY being my HUSBAND’S @kiranappachu BIRTHDAY I want to tell you all a very SPECIAL NEWS. Happy to Announce that in my REAL life I will be portraying a Role of A “MOTHER” With the BLESSINGS of GOD, Me and My Hubby are gonna welcome our BUNDLE OF JOY very soon Need all your BEST WISHES and BLESSINGS to us and our family like u guys have always shown. LOVE YOU All. Photography-@aashish__photography ography. thank u soo much aashish for the beautiful pics.im happy that my first ever maternity shoot is done by u Makeup and hair- @karishmauthappa_makeup p. Karishma u rock girl…. amazing job. Love u Outfit- @paramparika_vastra . U guys are too good. And made my outfit look really cute and beautiful on pics Tiyara- @sscreations719 ons719 thank u guys for the lovely tiyara which is adding it’s magic for these pics. Love u all guys. #happy #goodnews @bangalore_times #maternity #journey #godsgift #blessed. #lovemylife #loveuzindagi,

A post shared by Swetha Changappa (@swethachangappa) on


 

ಕಳೆದ ಕೆಲ ವರ್ಷಗಳಿಂದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ರಾಣಿ ಪಾತ್ರದಲ್ಲಿ ಬ್ಯುಸಿಯಿದ್ದ ಶ್ವೇತ ಚಂಗಪ್ಪ ಸದ್ಯ ಶೋದಿಂದ ಬ್ರೇಕ್ ಪಡೆದು ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ನೆನ್ನೆ ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದಾರೆ. ಇದೇ ವೇಳೆ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ನಡೆಸಿದ್ದಾರೆ.

 


ಕೊಡಗು ಮೂಲದ ನಟಿ ಶ್ವೇತಾ ಚಂಗಪ್ಪ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಕಾದಂಬರಿ, ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಸಿನಿಮಾ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಶ್ವೇತ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top