fbpx
ಸಮಾಚಾರ

ಕಿಚ್ಚ ಸುದೀಪ್ ಜೊತೆ ನಟಿಸುವ ಸುವರ್ಣಕಾಶ! ನಿಮಗಿದೆಯೇ ಈ ಅರ್ಹತೆ?

‘ಕಿಚ್ಚ’ ಸುದೀಪ್​ ಅವರನ್ನು ಭೇಟಿ ಮಾಡಿ, ಒಮ್ಮೆ ಮಾತನಾಡಿದರೆ ಸಾಕು ಎಂಬ ಅಸೆ ಇಟ್ಟುಕೊಂಡಿರುವವರು ಅನೇಕರಿದ್ದಾರೆ. ಅವರೊಂದಿಗೆ ಸೆಲ್ಫೀ ಸಿಕ್ಕರೆ ಅದು ಪರಮಾನಂದ. ಹೀಗಿರುವಾಗ ಸುದೀಪ್​ ಜೊತೆ ನಟಿಸುವ ಅವಕಾಶ ಸಿಕ್ಕರೆ? ಇಂಥದ್ದೊಂದು ಅವಕಾಶವನ್ನು ನಿರ್ದೇಶಕ ಅನೂಪ್​ ಭಂಡಾರಿ ಕಲ್ಪಿಸಿಕೊಟ್ಟಿದ್ದಾರೆ! ಆದರೆ, ಕಲಾವಿದರು ಬೇಕಿರುವವರು ದೊಡ್ಡವರಲ್ಲ ಬದಲಿಗೆ ಚಿಕ್ಕವರು.

 

 

ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾದ ಒಂದು ಪಾತ್ರಕ್ಕೆ ಪುಟ್ಟ ಹುಡುಗಿಯ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಇದಕ್ಕಾಗಿ ಸಣ್ಣದೊಂದು ಆಡಿಷನ್ ನಡೆಸುತ್ತಿದ್ದು, ಆಯ್ಕೆ ಆದ ಮಗು ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳಬಹುದಾಗಿದೆ. ನಿರ್ದೇಶಕ ಅನೂಪ್ ಭಂಡಾರಿ – ಸುದೀಪ್ ಸೇರಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕ ಬಾಲಕಿ ಪಾತ್ರ ಮಾಡಲು 3-7 ವರ್ಷದ ಬಾಲಕಿಯ ಅಗತ್ಯವಿದೆ. ಬಾಲ ಕಲಾವಿದೆ ಬೇಕಾಗಿದ್ದಾರೆ.

ಕಿಚ್ಚ ಸುದೀಪ್ ಸರ್ ಜೊತೆ ನಟಿಸಲು 3-7 ವರ್ಷದೊಳಗಿನ ಬಾಲಕಿಗೆ ಅವಕಾಶವಿದೆ. ಮುದ್ದಾಗಿ ನಟಿಸುವಂತಿರಬೇಕು ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ. ಆಸಕ್ತರು ಅನೂಪ್ ಭಂಡಾರಿ ನೀಡಿರುವ ಜೀಮೇಲ್ ಗೆ ರೆಸೂಮ್ ಅನ್ನು ಮೇಲ್ ಮಾಡಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top