fbpx
ಸಮಾಚಾರ

ಬೆಂಗಳೂರು ಕುಡುಕರಿಗೆ ಗುಡ್ ನ್ಯೂಸ್!

ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಡೊಂಬರಾಟಕ್ಕೆ ಬ್ರೇಕ್ ಬಿದ್ದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿದೆ. ಪ್ರಸಕ್ತ ನಡೆಯುತ್ತಿರುವ ರಾಜಕೀಯಬಿಕ್ಕಟ್ಟಿನಿಂದ ತಲೆದೋರಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರದಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿತ್ತು.. ಆದರೆ ಮದ್ಯ ಮಾರಾಟಕ್ಕೆ ಹೇರಲಾಗಿದ್ದ ನಿಷೇಧವನ್ನು ಮಾತ್ರವೇ ತೆರವು ಮಾಡಲಾಗಿದೆ.

 

 

ನಿನ್ನೆ ಸಂಜೆ ಆರು ಗಂಟೆಯಿಂದ ಜುಲೈ 25 ರ ವರೆಗೆ ನಗರದಲ್ಲಿ ನಿಷೇಧಾಜ್ಞೆ ಹೇರಿದ್ದರು. ಮೈತ್ರಿ ಸರ್ಕಾರ ಪತನವಾದ ಕಾರಣ ಆಯಾ ಪಕ್ಷಗಳ ಕಾರ್ಯಕರ್ತರ ನಡುವೆ ಕಿತ್ತಾಟಗಳು ಸಂಭವಿಸಬಹುದಾದ ಆತಂಕ ಇದ್ದ ಕಾರಣ ಈ ನಿರ್ಣಯವನ್ನು ಅವರು ತೆಗೆದುಕೊಂಡಿದ್ದರು.

ಸಂಜೆಯಿಂದ ಬಾರ್ ಓಪನ್:
ನಿನ್ನೆ ಸಂಜೆ ಇಂದಲೇ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಸಹ ಎರಡು ದಿನಗಳ ಕಾಲ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ಇಂದು ಈ ಆದೇಶವನ್ನು ಹಿಂಪಡೆದಿದ್ದು, ಬಾರು-ಪಬ್‌ಗಳು ಇಂದು ಸಂಜೆ 6 ಗಂಟೆಯಿಂದ ಮತ್ತೆ ತೆಗೆಯಲಿವೆ. ಹಾಗಾಗಿ ನೆನ್ನೆ ಎಣ್ಣೆ ಸಿಗದೇ ಪರದಾಡಿದ್ದ ಬೆಂಗಳೂರು ಕುಡುಕರಿಗೆ ಇಂದು ಜೀವ ಬಂದಂತೆ ಆಗಿದೆ.

ಆದರೆ ಸೆಕ್ಷನ್ 144 ಪ್ರಕಾರ ಹೇರಲಾಗಿದ್ದ ನಿಷೇಧಾಜ್ಞೆ ನಾಳೆಯ ವರೆಗೂ ಜಾರಿಯಲ್ಲಿ ಇರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top