fbpx
ಸಮಾಚಾರ

ಸಂಸತ್​​​ನಲ್ಲಿ ಪ್ರಧಾನಿ ಮೋದಿ ಜೊತೆ ಆಟವಾಡಿದ ಆ ಮುದ್ದಾದ ಮಗು ಯಾರದ್ದು?

ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಇಂದು ಸಂಸತ್ತಿಗೆ ಬಹಳ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಅವರು ಮೋದಿಯವರ ಸ್ಪೆಷಲ್​ ಫ್ರೆಂಡ್​ ಕೂಡ ಹೌದಂತೆ. ಅವರು ಸಂಸತ್ತಿನಲ್ಲೇ ಪ್ರಧಾನಿ ಜೊತೆ ಆಡ ಕೂಡ ಆಡಿದ್ರಂತೆ. ಮೋದಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಗೆಳೆಯನೊಂದಿಗಿರುವ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಅಂದ ಹಾಗೆ ಆ ಗೆಳೆಯ ಬೇರೆ ಯಾರೂ ಅಲ್ಲ, ಒಂದು ಪುಟ್ಟ ಕಂದಮ್ಮ. ಮೋದಿ ಹಂಚಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

 

 

ಮಹಾರಾಷ್ಟ್ರದ ಉಜ್ಜೈನಿ ಬಿಜೆಪಿ ಸಂಸದ ಸತ್ಯನಾರಾಯಣ ಜಾಟಿಯಾ ಕುಟುಂಬ ಇಂದು ಸಂಸತ್ತು ನೋಡಲು ಆಗಮಿಸಿತ್ತು. ಈ ವೇಳೆ ಸದಸ್ಯರು ಪ್ರಧಾನಿ ಕಚೇರಿಗೆ ಭೇಟಿ ನೀಡಿದಾಗ ಈ ಮೋದಿ ಸತ್ಯನಾರಾಯಣ ಜಾಟಿಯಾ ಅವರ ಮೊಮ್ಮಗನನ್ನು ಎತ್ತಿ ಆಡಿಸಿದ್ದರು.

 

 

ನರೇಂದ್ರ ಮೋದಿ ಅವರು ಮುದ್ದಾದ ಮಗುವನ್ನು ಎತ್ತಿಕೊಂಡು ಆಟವಾಗಿದ್ದಾರೆ. ಒಟ್ಟು ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಮೋದಿ ಅವರು ಮಗುವಿನ ಕಾಲು ಹಿಡಿದು ತೋಳುಗಳಲ್ಲಿ ಆಟ ಆಡುವ ಕಂದನ ನಗುವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗು ಟೇಬಲ್ ಮೇಲೆ ಇಟ್ಟಿರುವ ಚಾಕೋಲೆಟ್‍ಗಳನ್ನು ಕಂಡು ಖುಷಿ ಪಡುತ್ತಿರುವ ಕ್ಷಣವನ್ನು ನಗುವಿನೊಂದಿಗೆ ಗಮನಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು. ಅವರು ಹೋದೆಡೆಯಲ್ಲೆಲ್ಲಾ ಅವರ ಪುಟಾಣಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ್ನು ನೋಡಲು ನೆರೆಯುತ್ತಾರೆ. ಅದರಂತೆ ಮೋದಿ ಅವರೂ ಅವಕಾಶ ಸಿಕ್ಕಾಗಲೆಲ್ಲಾ ಮಕ್ಕಳೊಂದಿಗೆ ಬೆರೆತು ಕಾಲ ಕಳೆಯುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top