fbpx
ಸಮಾಚಾರ

ಸೋಲು ಮರೆತು ಇಂಗ್ಲೆಂಡ್ ಕ್ರಿಕೆಟಿಗನಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲು ಮುಂದಾದ ನ್ಯೂಜಿಲೆಂಡ್ ಸರ್ಕಾರ.

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದವೇ ಅದ್ಭುತ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆನ್ ಸ್ಟೋಕ್ಸ್‌ಗೆ ಇದೀಗ ಕಿವೀಸ್ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಲು ಮುಂದಾಗಿದೆ.

ಇಂಗ್ಲೆಂಡ್ ವಿಶ್ವಕಪ್ ಗೆಲುವಿನ ರೂವಾರಿ ಆಲ್ರೌಂಡರ್ ಬೆನ್ ಸ್ಟೋಕ್ಸ್, ನ್ಯೂಜಿಲೆಂಡ್ ವರ್ಷದ ಕ್ರಿಕೆಟಿಗನಾಗಿ ನಾಮನಿರ್ದೇಶನಗೊಂಡಿದ್ದಾರೆ. ಇದರ ಜತೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡಾ ವರ್ಷದ ಕ್ರಿಕೆಟಿಗನಾಗಿ ನಾಮನಿರ್ದೇಶನಗೊಂಡಿದ್ದಾರೆ.

ಬೆನ್​​ ಸ್ಟೋಕ್ಸ್​​ ತಂದೆ ಗೆರಾರ್ಡ್​ ಸ್ಟೋಕ್ಸ್​​​​​ ಮೂಲತಃ ನ್ಯೂಜಿಲೆಂಡ್​​​​​​ನವರಾಗಿದ್ದಾರೆ. ಅವರು ರಗ್ಬಿ ಕೋಚ್​​​​​ ಹುದ್ದೆಗಾಗಿ ಹಲವು ವರ್ಷಗಳ ಹಿಂದೆ ಇಂಗ್ಲೆಂಡ್​​​ಗೆ ಬಂದು ನೆಲೆಸಿದ್ದರು. ಆಗ ಬೆನ್​​ ಸ್ಟೋಕ್ಸ್​ ಅವರು ಕೇವಲ 14 ವರ್ಷದ ಬಾಲಕರಾಗಿದ್ದರು. ಬಳಿಕ ಅವರು ಅಲ್ಲಿಯೇ ವಿದ್ಯಾಭ್ಯಾಸ ಮಾಡುವ ಮೂಲಕ ಕ್ರಿಕೆಟ್​​ನಲ್ಲಿ ಒಲವು ಮೂಡಿಸಿಕೊಂಡರು. ಬಳಿಕ ಕ್ಲಬ್​​​​​ ಕ್ರಿಕೆಟ್​​ನಲ್ಲಿ ಆಡುವ ಮೂಲಕ ಉತ್ತಮ ಆಟಗಾರನಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಆತನ ತಂದೆ ನ್ಯೂಜಿಲೆಂಡ್​​​​​ರವರಾಗಿದ್ದರಿಂದ ಮಗನನ್ನು ‘ವರ್ಷದ ನ್ಯೂಜಿಲೆಂಡರ್’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಜುಲೈ 14ರಂದು ನಡೆದಿದ್ದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ನೀಡಿದ್ದ 242 ರನ್‌ ಗುರಿ ಹಿಂಬಾಲಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಸ್ಟೋಕ್ಸ್‌ 84 ರನ್‌ ಕೊಡುಗೆ ನೀಡಿದ್ದರು. ಅಂತಿಮವಾಗಿ ಇಂಗ್ಲೆಂಡ್‌ ಚೊಚ್ಚಲ ವಿಶ್ವಕಪ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top