fbpx
ಸಮಾಚಾರ

ಒಪ್ಪೋ ಬದಲಿಗೆ ಟೀಮ್ ಇಂಡಿಯಾ ಜೆರ್ಸಿಯನ್ನು ಅಲಂಕರಿಸಲಿದೆ ಬೆಂಗಳೂರು ಮೂಲದ ಈ ಬ್ರಾಂಡ್.

ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ಹೊಸ ಬ್ರ್ಯಾಂಡ್ ಕಾಣಿಸಿಕೊಳ್ಳಲಿದೆ. ಚೀನಾ ಮೂಲದ ಮೊಬೈಲ್ ತಯಾರಕ ಸಂಸ್ಥೆ ಒಪ್ಪೋ ಬ್ರ್ಯಾಂಡ್ ಬದಲಿಗೆ ಕೇರಳ ಮೂಲದ ಬೈಜು ರವೀಂದ್ರನ್ ಒಡೆತನದ ಬೈಜೂಸ್ ಬ್ರಾಂಡ್ ಹೆಸರು ಮುದ್ರೆಯಾಗಲಿದೆ.

 

 

2017ರ ಮಾರ್ಚ್‌ನಲ್ಲಿ ಐದು ವರ್ಷಗಳ ಅವಧಿಗೆ ಜೆರ್ಸಿ ಹಕ್ಕನ್ನು 1,079 ಕೋಟಿ ರೂಪಾಯಿಗಳಿಗೆ ಒಪ್ಪೋ ಖರೀದಿಸಿತ್ತು. ಈ ಸ್ಥಾನವನ್ನು ಬೆಂಗಳೂರು ಮೂಲದ ಶಿಕ್ಷಣ ತಂತ್ರಜ್ಞಾನ ಮತ್ತು ಆನ್‌ಲೈನ್ ಟ್ಯುಟೋರಿಯಲ್ ಸಂಸ್ಥೆಯಾದ ಬೈಜೂಸ್ ಅಲಂಕರಿಸಲಿದೆ. ಅನೇಕ ಕಾರಣಗಳಿಂದಾಗಿ ಒಪ್ಪೋ ತನ್ನ ಬಿಡ್ ಹಕ್ಕನ್ನು ಬೆಂಗಳೂರು ತಳಹದಿಯ ಬೈಜೂಸ್‌ಗೆ ಹಸ್ತಾಂತರಿಸಲು ನಿರ್ಧರಿಸಿದೆ.

 

 

ಮುಂಬರುವ ವೆಸ್ಟ್‌ಇಂಡೀಸ್ ಸರಣಿ ವರೆಗೆ ಒಪ್ಪೋ ಬ್ರ್ಯಾಂಡ್ ಮುಂದುವರಿಯಲಿದೆ. ಅಲ್ಲಿಂದ ಬಳಿಕ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಬೈಜೂಸ್ ಲೊಗೊ ಕಂಡುಬರಲಿದೆ. 2022 ಮಾರ್ಚ್ 31ರ ವರೆಗೆ ಬೈಜೂಸ್‌ನಿಂದ ಸಮಾನ ಪಾವತಿಯನ್ನು ಬಿಸಿಸಿಐ ಪಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top